- Tag results for support
![]() | ಅಮೆರಿಕ ಕಾಂಗ್ರೆಸ್ ನಿಂದ ಚುನಾವಣೆ ಫಲಿತಾಂಶ ದೃಢೀಕರಣ: ಇತ್ತ ಪೊಲೀಸರು-ಟ್ರಂಪ್ ಬೆಂಬಲಿಗರ ಘರ್ಷಣೆ!ಅಮೆರಿಕಾದಲ್ಲಿ ಅಧ್ಯಕ್ಷೀಯ ಅಧಿಕಾರವನ್ನು ಡೊನಾಲ್ಡ್ ಟ್ರಂಪ್ ಜೋ ಬೈಡನ್ ಗೆ ವಹಿಸುವುದಕ್ಕೆ ಇನ್ನು ಕೆಲವೇ ದಿನಗಳಷ್ಟೇ ಬಾಕಿ ಇದೆ. ಈ ಹಂತದಲ್ಲಿ ಟ್ರಂಪ್ ಬೆಂಬಲಿಗರು ಹಾಗೂ ಪೊಲೀಸರ ನಡುವೆ ವಾಷಿಂಗ್ ಟನ್ ನಲ್ಲಿ ಘರ್ಷಣೆ ಉಂಟಾಗಿದೆ. |
![]() | ಅಧ್ಯಕ್ಷೀಯ ಚುನಾವಣೆ ಫಲಿತಾಂಶ ವಿರೋಧ: ಜನವರಿ 6ರಂದು ಟ್ರಂಪ್ ಬೆಂಬಲಿಗರಿಂದ ವಾಷಿಂಗ್ಟನ್ ನಲ್ಲಿ ರ್ಯಾಲಿ2020ನೇ ಸಾಲಿನ ಅಮೆರಿಕ ಅಧ್ಯಕ್ಷೀಯ ಚುನಾವಣೆ ಫಲಿತಾಂಶವನ್ನು ವಿರೋಧಿಸಿ ಇದೇ 6ರಂದು ತಮ್ಮ ಬೆಂಬಲಿಗರು ರಾಜಧಾನಿ ವಾಷಿಂಗ್ಟನ್ ನಲ್ಲಿ ಪ್ರತಿಭಟನೆ ನಡೆಸಲಿದ್ದಾರೆ ಎಂದು ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. |
![]() | ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಗೆಲುವು: ಬಿ.ಎಸ್. ಯಡಿಯೂರಪ್ಪ ವಿಶ್ವಾಸಆಡಳಿತಾರೂಢ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಈ ಬಾರಿಯ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಗೆಲ್ಲಿವ ಸಾಧ್ಯತೆ ಹೆಚ್ಚಾಗಿದೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ. |
![]() | ಟೊಯೋಟಾ ಕಂಪನಿ ಕಾರ್ಮಿಕರ ಹೋರಾಟಕ್ಕೆ ಡಿ.ಕೆ ಸುರೇಶ್ ಬೆಂಬಲರಾಮನಗರ ಜಿಲ್ಲೆ ಬಿಡದಿ ಕೈಗಾರಿಕ ಪ್ರದೇಶದಲ್ಲಿರುವ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಕಂಪನಿ ಹಾಗೂ ಕಾರ್ಮಿಕ ಒಕ್ಕೂಟದ ನಡುವೆ ಕಳೆದ 45 ದಿನಗಳಿಂದ ಹಗ್ಗಜಗ್ಗಾಟ ನಡೆಯುತ್ತಿದ್ದು, ಕಾರ್ಮಿಕರ ಹೋರಾಟಕ್ಕೆ ಸಂಸದ ಡಿಕೆ ಸುರೇಶ್ ಬೆಂಬಲ ಸೂಚಿಸಿದ್ದಾರೆ. |
![]() | ಪ್ರತಿಭಟನಾನಿರತ ರೈತರ ಸ್ಥಿತಿಗೆ ಮರುಗಿದ ಬಾಲಿವುಡ್ ನಟ: ಇದಕ್ಕಾಗಿ 1 ಕೋಟಿ ರೂ. ನೆರವು ಘೋಷಣೆ!ಕೊರೆಯುವ ಚಳಿಯ ನಡುವೆಯೂ ಕೇಂದ್ರದ ನೂತನ ಕೃಷಿ ಕಾನೂನುಗಳನ್ನು ವಿರೋಧಿಸಿ ರೈತರು ಪ್ರತಿಭಟನೆ ನಡೆಸುತ್ತಿರುವ ಗಾಜಿಪುರ ಗಡಿಯಲ್ಲಿನ ಪ್ರತಿಭಟನಾ ಸ್ಥಳಕ್ಕೆ ಇಂದು ಭೇಟಿ ನೀಡಿದ ಬಾಲಿವುಡ್ ಹಾಗೂ ಪಂಜಾಬ್ ನಟ, ಸಂಗೀತಗಾರ ದಿಲ್ಜಿತ್ ದೋಸಾಂಜ್, ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದರು. |
![]() | ಕೃಷಿ ಮಸೂದೆ ವಿರೋಧಿಸಿ ಪ್ರತಿಭಟನೆ: ರೈತರಿಗೆ ರಂಗಕರ್ಮಿ ಪ್ರಸನ್ನ ಬೆಂಬಲಕೃಷಿ ಮಸೂದೆಗಳನ್ನು ವಿರೋಧಿಸಿ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ಬೆಂಬಲಿಸಲು ರಾಜ್ಯದಲ್ಲು ಅನಿರ್ಧಿಷ್ಟಾವಧಿ ಧರಣಿ ಮುಂದುವರಿದಿದೆ, ರೈತರ ಈ ಧರಣಿಗೆ ಹಿರಿಯ ರಂಗಕರ್ಮಿ ಪ್ರಸನ್ನ ತಮ್ಮ ಬೆಂಬಲ ಸೂಚಿಸಿದ್ದಾರೆ. |
![]() | ಚಲನಚಿತ್ರ ಪೋಷಕ ಕಲಾವಿದರು, ಕಾರ್ಮಿಕರಿಗೆ ಇನ್ಫೋಸಿಸ್ ಪ್ರತಿಷ್ಠಾನದಿಂದ ನೆರವುಕೊರೋನಾ ಸೋಂಕಿನಿಂದ ನಲುಗಿಹೋಗಿರುವ ಚಲನಚಿತ್ರ ಪೋಷಕ ಕಲಾವಿದರು ಹಾಗೂ ಕಾರ್ಮಿಕರಿಗೆ ಇನ್ಫೋಸಿಸ್ ಪ್ರತಿಷ್ಠಾನ ಆಹಾರ ಕಿಟ್ಗಳ ವಿತರಣೆ ಮಾಡುವ ಮೂಲಕ ಕಲಾವಿದರ ನೆರವಿಗೆ ಧಾವಿಸಿದೆ. |
![]() | ತೋಮರ್ ಭೇಟಿಯಾದ ನಂತರ ನೂತನ ಕೃಷಿ ಕಾನೂನುಗಳನ್ನು ಬೆಂಬಲಿಸಿದ ರೈತರ ಮತ್ತೊಂದು ನಿಯೋಗ!ಕೇಂದ್ರದ ನೂತನ ಮೂರು ಕೃಷಿ ಕಾನೂನುಗಳ ವಿರುದ್ಧ ರೈತರ ಪ್ರತಿಭಟನೆ ಮುಂದುವರೆದಂತೆ, ಅಖಿಲ ಭಾರತ ಕಿಸಾನ್ ಸಮನ್ವಯ ಸಮಿತಿ (ಎಐಕೆಸಿಸಿ) ನೇತೃತ್ವದ ರೈತರ ಮತ್ತೊಂದು ನಿಯೋಗ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರನ್ನು ಸೋಮವಾರ ಭೇಟಿಯಾಗಿ ವಿವಾದಾತ್ಮಕ ಶಾಸನಕ್ಕೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿತು |
![]() | ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾದಾಗಿನಿಂದ ಜನರಿಗೆ ಕಿರುಕುಳ: ಸಚಿವ ಸುಧಾಕರ್ಡಿ.ಕೆ.ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾದಾಗಿನಿಂದ ಪದೇ ಪದೇ ಮುಷ್ಕರ, ಬಂದ್ ಗಳಿಗೆ ಕುಮ್ಮಕ್ಕು ನೀಡುವ ಮೂಲಕ ಸಾರ್ವಜನಿಕರ ದೈನಂದಿನ ಜೀವನಕ್ಕೆ ತೊಂದರೆ ಉಂಟುಮಾಡುತ್ತಿದ್ದಾರೆ. |
![]() | ವಾಷಿಂಗ್ಟನ್ ನಲ್ಲಿ ಖಲಿಸ್ತಾನಿ ಬೆಂಬಲಿಗರಿಂದ ಮಹಾತ್ಮ ಗಾಂಧಿ ಪ್ರತಿಮೆ ಧ್ವಂಸ!ಇತ್ತೀಚಿಗೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾನೂನುಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಬೆಂಬಲ ಸೂಚಿಸಿ ಸಿಖ್ ಅಮೆರಿಕನ್ ಯುವಕರು ಆಯೋಜಿಸಿದ್ದ ಪ್ರತಿಭಟನೆ ವೇಳೆಯಲ್ಲಿ ಖಲಿಸ್ತಾನಿ ಪ್ರತ್ಯೇಕತೆಯ ಸದಸ್ಯರು ಮಹಾತ್ಮ ಗಾಂಧಿ ಪ್ರತಿಮೆಯನ್ನು ಧ್ವಂಸಗೊಳಿಸಿದ್ದಾರೆ. |
![]() | ರೈತರ ಸಮಸ್ಯೆ ಆದಷ್ಟು ಬೇಗ ಸರ್ಕಾರ ಪರಿಹರಿಸಲಿ: ಯುವರಾಜ್ ಸಿಂಗ್ಶನಿವಾರ ತಮ್ಮ 39ನೇ ಹುಟ್ಟುಹಬ್ಬವನ್ನು ರೈತರಿಗೆ ಸಮರ್ಪಿಸಿದ ಭಾರತ ತಂಡದ ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್, ದಿಲ್ಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು. ಜತೆಗೆ ಆದಷ್ಟು ಬೇಗ ರೈತರ ಬೇಡಿಕೆ ಈಡೇರಲಿ ಎಂದು ಆಶಿಸಿದ್ದಾರೆ. |
![]() | ಪಂಚಾಯತಿ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಮೋಸ: ಗೆಹ್ಲೋಟ್ ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಸ್ ಪಡೆದ ಬಿಟಿಪಿಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ತಮಗೆ ವಂಚನೆ ಆಗಿದೆ ಎಂದು ಆರೋಪಿಸಿರುವ ಬಿಟಿಪಿ ರಾಜಸ್ಥಾನದಲ್ಲಿ ಸಿಎಂ ಅಶೋಕ್ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಭಾರತೀಯ ಟ್ರಿಬಲ್ ಪಕ್ಷ ಹಿಂಪಡೆದುಕೊಂಡಿದೆ |
![]() | ಪಶ್ಚಿಮ ಬಂಗಾಳ: ಜೆಪಿ ನಡ್ಡಾ ವಾಹನ, ಬೆಂಗಾವಲು ಪಡೆಯ ಮೇಲೆ ಟಿಎಂಸಿ ಕಾರ್ಯಕರ್ತರಿಂದ ದಾಳಿಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸಂಬಂಧಿ ಅಭಿಶೇಕ್ ಬ್ಯಾನರ್ಜಿ ಅವರ ಲೋಕಸಭಾ ಕ್ಷೇತ್ರ ಡೈಮಂಡ್ ಹಾರ್ಬರ್ ಗೆ ತೆರಳುತ್ತಿದ್ದ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಹಾಗೂ ಅವರ ಬೆಂಗಾವಲು ಪಡೆಯ ಮೇಲೆ.... |
![]() | ಸಂಘಟನೆಗಳ ಮಧ್ಯೆ ಭಿನ್ನಾಭಿಪ್ರಾಯವಿಲ್ಲ, ಎಲ್ಲರೂ ಒಮ್ಮತದಿಂದ ತೀರ್ಮಾನ ಕೈಗೊಳ್ಳುತ್ತೇವೆ: ರೈತ ಮುಖಂಡರುನಾವು ರೈತ ಸಂಘಟನೆಯವರೆಲ್ಲರೂ ಅವಿರೋಧವಾಗಿ ತೀರ್ಮಾನ ತೆಗೆದುಕೊಳ್ಳುತ್ತೇವೆ. ಇಲ್ಲಿ ಎಲ್ಲರದ್ದೂ ಸಹಮತ ಮುಖ್ಯವಾಗುತ್ತದೆಯೇ ಹೊರತು ಬಹುಮತವಲ್ಲ ಎಂದು ರೈತ ಮುಖಂಡ ಶಿವಕುಮಾರ್ ಕಕ್ಕ ಹೇಳಿದ್ದಾರೆ. |
![]() | ರೈತರಿದ್ದರೆ ದೇಶ: ಅನ್ನದಾತರ ಪ್ರತಿಭಟನೆಗೆ ಶಿವರಾಜ್ ಕುಮಾರ್, ಚೇತನ್ ಬೆಂಬಲಕೇಂದ್ರ ಸರ್ಕಾರದ ಕೃಷಿ ನೀತಿಗಳ ವಿರುದ್ಧ ರಾಷ್ಟ್ರ ರಾಜಧಾನಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಬಾಲಿವುಡ್ ಹಾಗೂ ಸ್ಯಾಂಡಲ್ ವುಡ್ ಬೆಂಬಲ ನೀಡಿದೆ. |