ಎರಡೂ ರಾಜ್ಯಗಳ ನಾಯಕರು ಕುಳಿತು ಮಾತನಾಡಿ ಕಾವೇರಿ ಸಮಸ್ಯೆ ಬಗೆಹರಿಸಬೇಕು: ನಟ ಶಿವರಾಜ್ ಕುಮಾರ್
ಬೆಂಗಳೂರು: ಕಾವೇರಿ ನೀರಿನ ಸಮಸ್ಯೆ ಈಗಿನದ್ದಲ್ಲ, ಮೊದಲಿನಿಂದ ಹೋರಾಡುತ್ತಿದ್ದೇವೆ. ಕಾವೇರಿ ತಾಯಿ ಪವರ್ ಅಂಥದ್ದೇ, ಕಾವೇರಿ ತಾಯಿ ಎಲ್ಲರಿಗೂ ಅಗತ್ಯ. ಕಲಾವಿದರು ಬರಲ್ಲ ಅಂತೀರಾ, ಕಲಾವಿದರು ಬಂದು ಏನ್ ಮಾಡಬೇಕು. ನಾವು ಹೋರಾಟದಲ್ಲಿ ಭಾಗಿಯಾದರೆ ಕಾವೇರಿ ಸಮಸ್ಯೆ ಬಗೆಹರಿಯುತ್ತಾ ಎಂದು ನಟ ಶಿವರಾಜ್ ಕುಮಾರ್ ಕೇಳಿದ್ದಾರೆ.
ಇಂದು ಕಾವೇರಿ ಪರ ಕನ್ನಡಿಗರ ಹೋರಾಟಕ್ಕೆ ಸ್ಯಾಂಡಲ್ ವುಡ್ ನಿಂದ ಬೆಂಬಲ ವ್ಯಕ್ತಪಡಿಸಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ನಾವು ಬಂದು ನಿಂತಿಕೊಳ್ತೀವಿ ಏನು ಆಗುತ್ತೆ ಹೇಳಿ? ನಾವು ಬಂದು ಮಾತನಾಡಿ ಹೋದರೇ ಸಮಸ್ಯೆ ಬಗೆಹರಿಯುತ್ತಾ? ಎಲ್ಲ ನಾಯಕರು ಕೂತು ಮಾತನಾಡಿ ಚರ್ಚೆ ಮೂಲಕ ಬಗೆಹರಿಸಬೇಕು. ಎಲ್ಲರೂ ರೈತರೇ, ಸರ್ಕಾರಗಳು ಈ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಬಸ್ನ ಹೊಡೆದು ಹಾಕಿದರೇ ಹೋರಾಟ ಆಗುತ್ತಾ ಎಂದು ಕೇಳಿದರು.
ಕಾವೇರಿ ವಿಚಾರದಲ್ಲಿ ಕರ್ನಾಟಕ, ತಮಿಳುನಾಡು ಸರ್ಕಾರ ಚರ್ಚೆ ಮಾಡಲಿ. ನಾವು ಆಯ್ಕೆ ಮಾಡಿರುವ ಸರ್ಕಾರ ವಿವಾದ ಬಗೆಹರಿಸಲು ಮುಂದಾಗಬೇಕು. ನಮ್ಮ ಅನುಕೂಲಕ್ಕಾಗಿ ಪರಿಸ್ಥಿತಿ ಲಾಭ ಪಡೆದುಕೊಳ್ಳಬಾರದು ಎಂದು ವಾಣಿಜ್ಯ ಮಂಡಳಿ ಹೋರಾಟದಲ್ಲಿ ನಟ ಶಿವರಾಜ್ ಕುಮಾರ್ ಹೇಳಿದರು.
ಕಾವೇರಿ ನಮ್ಮ ಜೀವನಾಡಿ, ರೈತರ ಜೀವನಾಡಿ, ರೈತರ ಬಾಳು ಹಸನಾದರೆ ನಾವೆಲ್ಲರೂ ಬದುಕುತ್ತೇವೆ. ನಾಡು, ನುಡಿ, ನೆಲ ಮತ್ತು ಜಲ ವಿಚಾರವಾಗಿ ಸ್ಯಾಂಡಲ್ ವುಡ್ ಕಲಾವಿದರು ಎಲ್ಲರೂ ಒಗ್ಗಟ್ಟಾಗಿ ನಿಲ್ಲುತ್ತೇವೆ. ನಮ್ಮ ಬೆಂಬಲ ಸರ್ಕಾರಕ್ಕಿರುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಎರಡೂ ರೈತರ ಹಿತ ಕಾಪಾಡಬೇಕು ಎಂದು ಹೇಳಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ