ಭಾರತದಲ್ಲಿ 1 ಲಕ್ಷ ರೂಗಳಿಗೂ ಹೆಚ್ಚಿನ ಮೌಲ್ಯದ ಸ್ಮಾರ್ಟ್ ಫೋನ್ ಮಾರಾಟದಲ್ಲಿ ಏರಿಕೆ!
ನವದೆಹಲಿ: ಇತ್ತೀಚಿನ ತ್ರೈಮಾಸಿಕಗಳಲ್ಲಿ ಭಾರತದಲ್ಲಿ ಐಷಾರಾಮಿ ಸ್ಮಾರ್ಟ್ ಫೋನ್ ಗಳ ಮಾರಾಟ ಹೆಚ್ಚೆಳವಾಗಿದೆ ಎಂದು ಉದ್ಯಮದ ತಜ್ಞರು ತಿಳಿಸಿದ್ದಾರೆ.
ಕೌಂಟರ್ಪಾಯಿಂಟ್ ರಿಸರ್ಚ್ ಪ್ರಕಾರ, 1 ಲಕ್ಷ ರೂಪಾಯಿ ಮತ್ತು ಅದಕ್ಕಿಂತ ಹೆಚ್ಚಿನ ಮೌಲ್ಯಗಳ ಸ್ಮಾರ್ಟ್ ಫೋನ್ ಮಾರಾಟ 2024 ರ ಮೊದಲ ತ್ರೈಮಾಸಿಕ ಮತ್ತು 2024 ರ ಎರಡನೇ ತ್ರೈಮಾಸಿಕದಲ್ಲಿ ಕ್ರಮವಾಗಿ ಶೇ.20 (ವರ್ಷದಿಂದ ವರ್ಷಕ್ಕೆ) ಮತ್ತು ಶೇಕಡಾ 10 ರಷ್ಟು (ವರ್ಷದಿಂದ ವರ್ಷಕ್ಕೆ) ಹೆಚ್ಚಾಗಿದೆ. ಈ ವರ್ಷದ ಮೊದಲಾರ್ಧದಲ್ಲಿ 1ಲಕ್ಷ ರೂಪಾಯಿ ಮತ್ತು ಅದಕ್ಕಿಂತ ಹೆಚ್ಚಿನ ವಿಭಾಗದಲ್ಲಿನ ಮಾರಾಟ ಮಾರುಕಟ್ಟೆಯ 1 ಪ್ರತಿಶತಕ್ಕಿಂತ ಹೆಚ್ಚಾಗಿದೆ.
"ಸ್ಯಾಮ್ಸಂಗ್ ಗ್ಯಾಲಕ್ಸಿ ಫೋಲ್ಡಬಲ್ಸ್ ಮತ್ತು ಹೊಸ ಆಪಲ್ ಐಫೋನ್ ಸರಣಿಯ ಆಗಮನದೊಂದಿಗೆ ವರ್ಷದ ದ್ವಿತೀಯಾರ್ಧದಲ್ಲಿ ಈ ಸಂಖ್ಯೆಗಳು ಸ್ವಲ್ಪ ಹೆಚ್ಚಾಗುವ ನಿರೀಕ್ಷೆಯಿದೆ" ಎಂದು ಕೌಂಟರ್ಪಾಯಿಂಟ್ ರಿಸರ್ಚ್ ನಿರ್ದೇಶಕ ತರುಣ್ ಪಾಠಕ್ ತಿಳಿಸಿದ್ದಾರೆ.
2021ರಲ್ಲಿ, ಐಷಾರಾಮಿ ಅಥವಾ ಸೂಪರ್-ಪ್ರೀಮಿಯಂ ಸ್ಮಾರ್ಟ್ ಫೋನ್ ಗಳ ಮಾರಾಟ ದೇಶದಲ್ಲಿ ಶೇ.14 ರಷ್ಟು ಬೆಳವಣಿಗೆಯನ್ನು ಕಂಡಿವೆ. 2022 ರಲ್ಲಿ, ಈ ಬೆಳವಣಿಗೆಯು ಶೇ.96ಕ್ಕೆ ಏರಿತು ಮತ್ತು 2023 ರಲ್ಲಿ ಇದು ಶೇ.53 ರಷ್ಟಿತ್ತು. ಸೂಪರ್-ಪ್ರೀಮಿಯಂ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಸ್ಯಾಮ್ಸಂಗ್ 2023 ರಲ್ಲಿ ಶೇಕಡಾ 52 ರಷ್ಟು ಪಾಲನ್ನು ಹೊಂದಿದ್ದರೆ, ಆಪಲ್ ಶೇಕಡಾ 46 ರಷ್ಟು ಪಾಲನ್ನು ಹೊಂದಿದೆ.
ಸೈಬರ್ ಮೀಡಿಯಾ ರಿಸರ್ಚ್ (ಸಿಎಂಆರ್) ನ ಇಂಡಸ್ಟ್ರಿ ರಿಸರ್ಚ್ ಗ್ರೂಪ್ನ ಉಪಾಧ್ಯಕ್ಷ ಪ್ರಭು ರಾಮ್ ಅವರ ಪ್ರಕಾರ, ಭಾರತೀಯ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಪ್ರೀಮಿಯಂ ವಿಭಾಗದಲ್ಲಿನ ಮಾರಾಟ ವೇಗವನ್ನು ಪಡೆಯುತ್ತಿದೆ.
ಸೈಬರ್ ಮೀಡಿಯಾ ರಿಸರ್ಚ್ (ಸಿಎಂಆರ್) ನ ಇಂಡಸ್ಟ್ರಿ ರಿಸರ್ಚ್ ಗ್ರೂಪ್ನ ಉಪಾಧ್ಯಕ್ಷ ಪ್ರಭು ರಾಮ್ ಅವರ ಪ್ರಕಾರ, ಭಾರತೀಯ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಪ್ರೀಮಿಯಂ ವಿಭಾಗದಲ್ಲಿನ ಮಾರಾಟ ವೇಗವನ್ನು ಪಡೆಯುತ್ತಿದೆ.
"ಗ್ರಾಹಕರು ಉತ್ತಮ ವಿಶೇಷಣಗಳು ಮತ್ತು ವೈಶಿಷ್ಟ್ಯಗಳಿಗೆ ಅಷ್ಟೇ ಅಲ್ಲದೇ, ಜೀವನಶೈಲಿ ಕುರಿತಾಗಿ ಮಾಹಿತಿ ನೀಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವ ಸ್ಮಾರ್ಟ್ಫೋನ್ ಸಾಧನಗಳಿಗೆ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ" ಎನ್ನುತ್ತಾರೆ ಪಾಠಕ್.
ಅವರ ಪ್ರಕಾರ, ಈ ವರ್ಷದ ಮೊದಲಾರ್ಧದಲ್ಲಿ ಉಬರ್-ಪ್ರೀಮಿಯಂ ಸ್ಮಾರ್ಟ್ಫೋನ್ಗಳ (1 ಲಕ್ಷ ಮತ್ತು ಅದಕ್ಕಿಂತ ಹೆಚ್ಚಿನ ಬೆಲೆ) ಮಾರಾಟ ದೇಶದಲ್ಲಿ ವರ್ಷದಿಂದ ವರ್ಷಕ್ಕೆ ಶೇಕಡಾ 80 ರಷ್ಟು ಗಮನಾರ್ಹ ಬೆಳವಣಿಗೆಯನ್ನು ದಾಖಲಿಸಿವೆ.
ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ, ಸ್ಯಾಮ್ಸಂಗ್ ಶೇಕಡಾ 25 ರಷ್ಟು ಪಾಲನ್ನು ಹೊಂದುವ ಮೂಲಕ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿದೆ. ನಂತರದ ಸ್ಥಾನದಲ್ಲಿ ವಿವೋ ಮತ್ತು ಆಪಲ್ ಇದೆ.
ಏತನ್ಮಧ್ಯೆ, ಇಡೀ ಶ್ರೇಣಿಯ ಐಫೋನ್ಗಳಲ್ಲಿ ಇತ್ತೀಚಿನ ಬೆಲೆ ಕಡಿತದ ಪರಿಣಾಮ ಆಪಲ್ ಮುಂದಿನ ತ್ರೈಮಾಸಿಕದಲ್ಲಿ ಪುನರುಜ್ಜೀವನಗೊಳ್ಳುವ ನಿರೀಕ್ಷೆಯಿದೆ, ಇ ಪ್ರೇರಿತವಾಗಿದೆ.
2024 ರ ಎರಡನೇ ತ್ರೈಮಾಸಿಕದಲ್ಲಿ, ಭಾರತದಲ್ಲಿ 5 ಜಿ ಸ್ಮಾರ್ಟ್ಫೋನ್ ಗಳು ಒಟ್ಟಾರೆ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ದಾಖಲೆಯ 77 ಪ್ರತಿಶತದಷ್ಟು ಪಾಲನ್ನು ತಲುಪಿದೆ.