PAN ಕಾರ್ಡ್‌ನಲ್ಲಿ ಫೋಟೋ-ಅಡ್ರೆಸ್ ತಪ್ಪಿದೆಯಾ? 5 ನಿಮಿಷದಲ್ಲಿ ಮನೆಯಲ್ಲೇ ಮಾಡಿ ಅಪ್‌ಡೇಟ್!

PAN ಕಾರ್ಡ್‌ನಲ್ಲಿ ಫೋಟೋ ಹಳೆಯದಾಗಿದೆಯಾ? ಸಹಿ ಸರಿಯಾಗಿ ಕಾಣಿಸ್ತಿಲ್ವಾ? ಅಡ್ರೆಸ್ ಬದಲಾಯಿಸಿದೆಯಾ? ಈಗ ಆಫೀಸ್‌ಗೆ ಅಲೆದಾಡುವ ಅಗತ್ಯವೇ ಇಲ್ಲ. ಯಾಕಂದ್ರೆ, ಮನೆಯಲ್ಲೇ ಕುಳಿತು ಫೋಟೋ, ಸಹಿ, ಹೆಸರು, ಅಡ್ರೆಸ್, ಮೊಬೈಲ್ ನಂಬರ್, ಇಮೇಲ್ - ಎಲ್ಲವನ್ನೂ ಆನ್‌ಲೈನ್‌ನಲ್ಲಿ ಅಪ್‌ಡೇಟ್ ಮಾಡಬಹುದು.
PAN Card
ಪ್ಯಾನ್ ಕಾರ್ಡ್‌Online Desk
Updated on

PAN Card Update: 10-15 ವರ್ಷಗಳ ಹಿಂದೆ ತೆಗೆದ ಪ್ಯಾನ್ ಕಾರ್ಡ್‌ನ ಫೋಟೋ ಇಂದಿಗೂ ಅದೇ ಇದೆಯಾ? ಅಥವಾ ಸಹಿ ಬದಲಾಗಿದೆಯಾ? ಈಗ ಪ್ಯಾನ್ ಕಾರ್ಡ್ ಬ್ಯಾಂಕ್, ಆಧಾರ್, ಪಾಸ್‌ಪೋರ್ಟ್ ಎಲ್ಲದಕ್ಕೂ ಲಿಂಕ್ ಆಗಿರುವುದರಿಂದ ಅಪ್ಡೇಟ್ ಮಾಡಿದ ಫೋಟೋ ಮತ್ತು ಸಹಿ ಇರುವುದು ತುಂಬಾ ಮುಖ್ಯ. ಒಳ್ಳೆಯ ವಿಷಯ ಏನೆಂದರೆ, ಮನೆಗೆ ಹೋಗದೆಯೇ ಆನ್‌ಲೈನ್ ಮೂಲಕವೇ ನಿಮ್ಮ ಪ್ಯಾನ್ ಕಾರ್ಡ್‌ನಲ್ಲಿರುವ ಫೋಟೋ ಮತ್ತು ಸಹಿಯನ್ನು ಬದಲಾಯಿಸಬಹುದು. ಇದಕ್ಕೆ ಕೇವಲ 10 ನಿಮಿಷ ಮತ್ತು ₹50 ರಿಂದ ₹100 ಶುಲ್ಕ ಸಾಕು. ಆ ಕುರಿತ ವರದಿ ಇಲ್ಲಿದೆ:

ಆನ್‌ಲೈನ್‌ನಲ್ಲಿ ಅಪ್ಡೇಟ್ ಮಾಡುವ ವಿಧಾನ:

  • Step 1: NSDL ಪ್ಯಾನ್ ವೆಬ್‌ಸೈಟ್‌ಗೆ ಹೋಗಿ Services > PAN > Change Request ಆಯ್ಕೆ ಮಾಡಿ.

  • Step 2: Category ನಲ್ಲಿ Individual ಸೆಲೆಕ್ಟ್ ಮಾಡಿ ಮತ್ತು ನಿಮ್ಮ PAN, ಹೆಸರು, ಹುಟ್ಟಿದ ದಿನಾಂಕ, ಮೊಬೈಲ್ ನಂಬರ್ ನಮೂದಿಸಿ. OTP ಬರುತ್ತದೆ.

  • Step 3: ತೆರೆದುಕೊಳ್ಳುವ ಫಾರ್ಮ್‌ನಲ್ಲಿ Photograph ಮತ್ತು Signature ಬಾಕ್ಸ್‌ಗಳನ್ನು ಮಾತ್ರ ಟಿಕ್ ಮಾಡಿ. ಬೇರೆ ವಿವರ ಬದಲಾಯಿಸಬೇಕಿಲ್ಲ.

  • Step 4: ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ.

  • ಗುರುತಿನ ಪುರಾವೆ: ಆಧಾರ್ ಕಾರ್ಡ್

  • ಹೊಸ ಫೋಟೋ: ಪಾಸ್‌ಪೋರ್ಟ್ ಸೈಜ್ ಫೋಟೋ

  • ಸಹಿಯ ಸ್ಕ್ಯಾನ್: ಬಿಳಿ ಕಾಗದದ ಮೇಲೆ ಕಪ್ಪು ಪೆನ್ನಿನಿಂದ ಮಾಡಿದ ಸಹಿಯನ್ನು ಸ್ಕ್ಯಾನ್ ಮಾಡಿ

  • Step 5: ₹50 + GST ಶುಲ್ಕವನ್ನು ಆನ್‌ಲೈನ್‌ನಲ್ಲಿ ಪಾವತಿಸಿ. UPI, ಡೆಬಿಟ್ ಕಾರ್ಡ್ ಬಳಸಬಹುದು.

  • Step 6: ಪಾವತಿ ನಂತರ 15 ಅಂಕಿಯ Acknowledgement Number ಸಿಗುತ್ತದೆ. ಅದನ್ನು ಬಳಸಿ Status ಚೆಕ್ ಮಾಡಬಹುದು.

PAN Card
ಪ್ರತಿಯೊಬ್ಬರ ಮೊಬೈಲ್‌ನಲ್ಲೂ ಇರಲೇಬೇಕಾದ Apps; ಇವು ಇದ್ರೆ ಸರ್ಕಾರಿ ಕೆಲಸಗಳು ಅರ್ಧ ಮುಗಿದಂತೆ!

15 ದಿನಗಳಲ್ಲಿ ಹೊಸ ಫೋಟೋ ಮತ್ತು ಸಹಿ ಇರುವ ಪ್ಯಾನ್ ಕಾರ್ಡ್ ನಿಮ್ಮ ರಿಜಿಸ್ಟರ್ ವಿಳಾಸಕ್ಕೆ ಪೋಸ್ಟ್ ಮೂಲಕ ಬರುತ್ತದೆ. ಜೊತೆಗೆ e-PAN ಕೂಡ ಡೌನ್‌ಲೋಡ್ ಮಾಡಬಹುದು.

ಗಮನಿಸಿ:

ಫೋಟೋ ಮತ್ತು ಸಹಿ ಬದಲಾಯಿಸಲು ಆಧಾರ್ OTP ಮೂಲಕ e-KYC ಮಾಡುವುದು ಅತ್ಯಂತ ಸುಲಭ. ಆಧಾರ್‌ನಲ್ಲಿರುವ ಫೋಟೋ ಮತ್ತು ಸಹಿ ಸ್ವಯಂಚಾಲಿತವಾಗಿ ಪ್ಯಾನ್‌ಗೆ ಅಪ್ಡೇಟ್ ಆಗುತ್ತದೆ. ಅಪ್‌ಲೋಡ್ ಮಾಡುವ ಫೋಟೋ ಮತ್ತು ಸಹಿಯ ಫೈಲ್ ಗಾತ್ರವು (KB Size) ವೆಬ್‌ಸೈಟ್‌ನಲ್ಲಿ ಸೂಚಿಸಿದಷ್ಟೇ ಇರಬೇಕು. ಪ್ರಕ್ರಿಯೆ ಪೂರ್ಣಗೊಂಡ ನಂತರ ಅಕ್ನಾಲೆಡ್ಜ್‌ಮೆಂಟ್ ರಶೀದಿಯನ್ನು ಡೌನ್‌ಲೋಡ್ ಮಾಡಿಟ್ಟುಕೊಳ್ಳುವುದು ಉತ್ತಮ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com