ರಾಜ್ಯದ ವಿವಿಧ ಗಣೇಶ ದೇವಾಲಯಗಳು

ಕರ್ನಾಟಕದಲ್ಲಿರುವ ವಿವಿಧ ಗಣೇಶ ದೇವಾಲಯಗಳ ಪರಿಚಯ ಇಲ್ಲಿದೆ.
ಬೆಂಗಳೂರಿನ ಬಸವನಗುಡಿಯಲ್ಲಿರುವ ದೊಡ್ಡ ಗಣೇಶ
ಬೆಂಗಳೂರಿನ ಬಸವನಗುಡಿಯಲ್ಲಿರುವ ದೊಡ್ಡ ಗಣೇಶ
Updated on

ಕರ್ನಾಟಕದಲ್ಲಿರುವ ವಿವಿಧ ಗಣೇಶ ದೇವಾಲಯಗಳ ಪರಿಚಯ ಇಲ್ಲಿದೆ.

ಇಡಗುಂಜಿ ಗಣಪತಿ



ಉತ್ತರ ಕರ್ನಾಟಕದ ಹೊನ್ನಾವರ ತಾಲೂಕಿನಲ್ಲಿರುವ ಇಡಗುಂಜಿ ಗಣಪತಿ ಕರ್ನಾಟಕದ ಪ್ರಸಿದ್ಧ ದೇವಾಲಯಗಳಲ್ಲೊಂದಾಗಿದೆ. ಒಂದು ಕೈಯಲ್ಲಿ ಮೋದಕ ಮತ್ತು ಇನ್ನೊಂದು ಕೈಯಲ್ಲಿ ಕಮಲವನ್ನು ಹಿಡಿದಿರುವ ಇಲ್ಲಿನ ಗಣೇಶನ್ನು ನೋಡಲು ವರ್ಷಕ್ಕೆ 1 ಮಿಲಿಯನ್ ಗಿಂತಲೂ ಹೆಚ್ಚು ಜನರು ಬರುತ್ತಾರೆ. ಮುನಿಗಳು ವಾಸಿಸುತ್ತಿದ್ದ ಕುಂಜಾರಣ್ಯ ಎಂಬ ಪ್ರದೇಶವೇ ಆಮೇಲೆ ಇಡಗುಂಜಿ ಆಯಿತೆಂಬುದು ಇಲ್ಲಿನ ಐತಿಹ್ಯ.

ಆನೆ ಗುಡ್ಡೆ ಗಣೇಶ, ಕುಂಬಾಶಿ



ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಆನೆಗುಡ್ಡೆ ಗ್ರಾಮದಲ್ಲಿ ಈ  ದೇವಾಲಯವಿದೆ. ಕುಂಭಾಶಿ ಎಂದೂ ಈ ಗ್ರಾಮವನ್ನು ಕರೆಯುತ್ತಿದ್ದು, ಇಲ್ಲಿನ ಗಣಪತಿಗೆ ಸಿದ್ಧಿ ವಿನಾಯಕ ಮತ್ತು ಸರ್ವ ಸಿದ್ಧಿ ಪ್ರದಾಯಕ ಎಂಬ ಹೆಸರೂ ಇದೆ. ಕರಾವಳಿ ಕರ್ನಾಟಕ (ಪರಶುರಾಮ ಕ್ಷೇತ್ರ) ದಲ್ಲಿನ  ಏಳು ಮುಕ್ತಿ ಸ್ಥಳಗಳಲ್ಲಿ ಒಂದಾಗಿದೆ ಆನೆ ಗುಡ್ಡೆ.

ಸಾಸಿವೆಕಾಲು ಗಣೇಶ



ಹಂಪಿಯ ಹೇಮಕುಂಟ ಗುಡ್ಡೆಯಲ್ಲಿ ನೆಲೆಸಿರುವ ಈ ಗಣೇಶ ದೇವಾಲಯದಲ್ಲಿ ಗಣೇಶನ ವಿಗ್ರಹವು 2.4 ಮೀಟರ್ ನಷ್ಟು ಎತ್ತರವಿದೆ.

ಕಡಲೆ ಕಾಳು ಗಣೇಶ ಹಂಪಿ


 ಹಂಪಿಯ ಹೇಮಕುಂಟ ಗುಡ್ಡದಲ್ಲಿರುವ  4.5 ಮೀಟರ್  ಎತ್ತರವಿರುವ ಗಣೇಶನ ಮೂರ್ತಿ ಇದಾಗಿದೆ


ಗಣೇಶ , ಗೊನ್ನಾಗರ್


ರಾಮದುರ್ಗದ ಗೊನ್ನಗರ್ನಲ್ಲಿ ಈ  ದೇವಾಲಯವಿದೆ.



ಬೆಂಗಳೂರಿನ ದೊಡ್ಡ ಗಣೇಶ


ಬೆಂಗಳೂರಿನ ಬಸವನಗುಡಿಯಲ್ಲಿದೆ ದೊಡ್ಡ ಗಣೇಶನ ದೇವಾಲಯ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com