ಕ್ಯಾನ್ಸರ್ ತಡೆಗೆ ಬ್ರುಕೊಲಿ ಮಾತ್ರೆ

ಬ್ರುಕೊಲಿಯಿಂದ ತಯಾರಿಸಲ್ಪಟ್ಟ ಮಾತ್ರೆ ಕ್ಯಾನ್ಸರ್‌ನ್ನು ತಡೆಗಟ್ಟುತ್ತದೆ ಎಂದು ತಜ್ಞರು ಕಂಡು ಹಿಡಿದಿದ್ದಾರೆ...
ಬ್ರುಕೊಲಿ
ಬ್ರುಕೊಲಿ

ಲಂಡನ್: ಬ್ರುಕೊಲಿಯಿಂದ ತಯಾರಿಸಲ್ಪಟ್ಟ ಮಾತ್ರೆ ಕ್ಯಾನ್ಸರ್‌ನ್ನು ತಡೆಗಟ್ಟುತ್ತದೆ ಎಂದು ತಜ್ಞರು ಕಂಡು ಹಿಡಿದಿದ್ದಾರೆ.

ಈ ಮಾತ್ರೆ ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ತಡೆದು ರೋಗ ಉಲ್ಬಣವಾಗದಂತೆ ತಡೆಹಿಡಿಯುತ್ತದೆ.

ಬ್ರುಕೊಲಿ ಮತ್ತು ಇತರ ತರಕಾರಿಗಳಲ್ಲಿ ಕ್ಯಾನ್ಸರ್ ತಡೆಯಬಲ್ಲ ಕ್ಯಾನ್ಸರ್ ನಿರೋಧಕ ಮತ್ತು ಸಲ್ಫೋರಫೇನ್‌ನ ನ್ಯೂರೋಪ್ರೊಟೆಕ್ಟಿವ್ ಅಂಶಗಳಿವೆ ಎಂದು ಈವ್‌ಗೆನ್ ಡ್ರಗ್ ಕಂಪನಿಯ ಚೀಫ್ ಎಕ್ಸಿಕ್ಯೂಟಿವ್ ಡಾ. ಸ್ಟೀಫನ್ ಫ್ರಾಂಕ್ಲಿನ್ ಹೇಳಿದ್ದಾರೆ.

ಬ್ರಾಸ್ಸಿಕ ಕುಟುಂಬಕ್ಕೆ ಸೇರಿದ ತರಕಾರಿಗಳಾದ ಕೋಲಿಫ್ಲವರ್, ಕ್ಯಾಬೇಜ್‌ನಲ್ಲಿಯೂ ಸಲ್ಫೋರಫೇನ್ ಅಡಕವಾಗಿದ್ದು, ಬ್ರುಕೊಲಿಯಲ್ಲಿ ಇದರ ಅಂಶ ಜಾಸ್ತಿ ಇದೆ ಎಂದು ಫ್ರಾಂಕ್ಲಿನ್ ಅಭಿಪ್ರಾಯ ಪಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com