ಚಳಿಗಾಲಕ್ಕೆ ಫೇಸ್‌ಕೇರ್
ಚಳಿಗಾಲದ ಸಮಸ್ಯೆಗಳಿಗೆ ಎಲ್ಲರಿಗೂ (ಒಣ ತ್ವಚೆ, ಎಣ್ಣೆ ತ್ವಚೆ, ಸೂಕ್ಷ್ಮ ತ್ವಚೆ, ಕಾಂಪ್ಲೆಕ್ಷನ್ ತ್ವಚೆ) ಸರಿ ಹೊಂದುವ ಫೇಸ್ ಕೇರ್ ಟಿಪ್ಸ್ ಇಲ್ಲಿದೆ.
ಯಾವ ಚರ್ಮವೇ ಆಗಲಿ ಅತಿಯಾದ ಮೇಕಪ್, ಕಾಸ್ಮೆಟಿಕ್ಸ್ ಬಳಸುವುದರಿಂದ ಕಾಂತಿ ಕಳೆದುಕೊಳ್ಳುತ್ತದೆ. ಅದಕ್ಕೆ ಒಂದಿಷ್ಟು ವಿಶ್ರಾಂತಿ ಬೇಕು. ಇಲ್ಲಿದೆ ನೋಡಿ ಎಲ್ಲಾ ತರಹದ ಚರ್ಮದ ಆರೈಕೆಗೆ ಗುಟ್ಟು.
ಕಾಲ್‌ಸೆಂಟರ್‌ನಲ್ಲಿ ದುಡಿಯುವ ಹೆಣ್ಣುಮಕ್ಕಳಿಗೆ ಬ್ಯೂಟಿಪಾರ್ಲರ್‌ಗೆ ಹೋಗಲು ಸಮಯವಿರುವುದಿಲ್ಲ. ಸಂಸಾರದ ಹೊರೆಯಿಂದ ಗೃಹಿಣಿಯರಿಗೂ ತಮ್ಮ ತ್ವಚೆ ಬಗ್ಗೆ ಕಾಳಜಿ ವಹಿಸಲು ಸಮಯವಿರುವುದಿಲ್ಲ. ಆದ್ದರಿಂದ ಪ್ರತಿಯೊಬ್ಬರಿಗೂ ಒಂದು ಸರಳ ಹಾಗೂ ಯಾವುದೇ ಅಡ್ಡ ಪರಿಣಾಮಗಳಿಲ್ಲದ ಒಂದು ಸರಳ ಸಾಧನ ಮಸಾಜ್ ಪ್ಯಾಕ್.
ಹೀಗೆ ಮಾಡಿ
ಈ ಮಸಾಜ್ ಪ್ಯಾಕ್ ಎಲ್ಲಾ ತರಹದ ಚರ್ಮಕ್ಕೂ ಹೊಂದುತ್ತದೆ. ನಿಮ್ಮ ಎಲ್ಲಾ ಕೆಲಸ ಮುಗಿಸಿದ ಬಳಿಕ ಈ ಮಸಾಜ್ ಮಾಡಿಕೊಳ್ಳಬಹುದು.
ಒಂದು ಚಮಚ ಹಸಿ ಹಾಲು ತೆಗೆದುಕೊಳ್ಳಿ. ಅದನ್ನು ತುಂಡು ಹತ್ತಿಯಿಂದ ಮುಖಕ್ಕೆ ಹಾಗೂ ಕುತ್ತಿಗೆಯ ಭಾಗಕ್ಕೆ ಹಾಲಿನಲ್ಲಿ ಅದ್ದಿ ಮುಖಕ್ಕೆ ಹಾಗೂ ಕುತ್ತಿಗೆಯ ಭಾಗಕ್ಕೆ ಮಸಾಜ್ ಮಾಡಿ. ನಂತರ ಮುಖವನ್ನು ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ. ಇದು ನ್ಯಾಚುರಲ್ ಕ್ಲೆನ್ಸಿಂಗ್.
ನಂತರ ಒಂದು ಕಪ್ ಮೊಸರು, ಸ್ವಲ್ಪ ಅರಿಶಿನ, ಒಂದು ಸ್ಪೂನ್ ಅಕ್ಕಿ ಹಿಟ್ಟು, ಗೋಧಿ ಹಿಟ್ಟು, ಸೋಯಾಬೀನ್ ಪೌಡರ್ ಒಂದು ಸ್ಪೂನ್ ಬೆರೆಸಿ ಅದನ್ನು ಮುಖ ಹಾಗೂ ಕುತ್ತಿಗೆಯ ಭಾಗಕ್ಕೆ ತೆಳುವಾಗಿ ಹಚ್ಚಿಕೊಳ್ಳಿ. 15 ರಿಂದ 20 ನಿಮಿಷಗಳ ನಂತರ ಬೆಚ್ಚಗಿನ ನೀರಿನಿಂದ ತೊಳೆಯಬೇಕು.
ಮೊಡವೆ ಚರ್ಮದವರಿಗೆ
1. ಪ್ರತಿ ದಿನ ಕನಿಷ್ಠ 2-3 ಲೀಟರ್ ನೀರು ಕುಡಿಯಬೇಕು. ಹಸಿರು ತರಕಾರಿ, ಹಣ್ಣು ಸೇವಿಸಬೇಕು.
ಕನಿಷ್ಠ 1-2 ಲೋಟ ಹಾಲು ಅಥವಾ ಮೊಸರನ್ನು ಪ್ರತಿ ದಿನ ಬಳಸಬೇಕು. ದಿನಕ್ಕೆ 4-5 ಬಾರಿ ಮುಖ ತೊಳೆಯಬೇಕು. ಕೆಲಸಕ್ಕೆ ಹೋಗುವವರು ವಾಟರ್ ಬೇಸ್ಡ್ ಟಿಶ್ಯುವಿನಿಂದ ಮುಖ ಒರೆಸಿಕೊಳ್ಳಬಹುದು.
4-5 ಗಂಟೆಗಳಿಗೆ ಒಮ್ಮೆ ಮೇಕಪ್‌ನಿಂದ ಮುಖವನ್ನು ಮುಕ್ತಗೊಳಿಸಿ, ವೈದ್ಯರ ಸಲಹೆ ಇಲ್ಲದೆ ಯಾವುದೇ ಕ್ರೀಮ್ ಬಳಸಬೇಡಿ ಮತ್ತು ಆಗಾಗ ಬದಲಿಸಬೇಡಿ.
2. ಕಲುಷಿತ ಕೈಗಳಿಂದ ಮುಖವನ್ನು ಆಗಾಗ ಮುಟ್ಟಬೇಡಿ. ಯಾವುದಾದರೂ ಒಂದು ಹಿಟ್ಟಿನಿಂದ ಮುಖ ತೊಳೆದುಕೊಳ್ಳಿ. ಹೆಸರು ಕಾಳು 50 ಗ್ರಾಂ, ತೊಗರಿ ಬೇಳೆ 50 ಗ್ರಾಂ, ಇದಕ್ಕೆ ಸ್ವಲ್ಪ ಮುಲ್ತಾನಿ ಮಿಟ್ಟಿ ಸೇರಿಸಿ. ಈ ಧಾನ್ಯಗಳ ಪುಡಿಯಿಂದ ಫೇಸ್‌ವಾಷ್ ಮಾಡುವುದರಿಂದ ಮಖದ ತ್ವಚೆ ಕಾಂತಿಯುಕ್ತವಾಗಿರುತ್ತದೆ. ಹೊರಗಿನಿಂದ ಬಂದ ತಕ್ಷಣ ಮರೆಯದೆ ಹಸಿ ಹಾಲಿನಿಂದ ಮುಖವನ್ನು ಸ್ವಚ್ಛಗೊಳಿಸಿ.
3.ವಾರಕ್ಕೆ ಮೂರು ಬಾರಿ ಮುಖಕ್ಕೆ 5 ರಿಂದ 8 ನಿಮಿಷ ಹಬೆ ಕೊಡಬಹುದು. ರಾತ್ರಿ ಮಲಗುವಾಗ ಯಾವುದೇ ಮೇಕಪ್ ಇರದ ಹಾಗೆ ನೋಡಿಕೊಳ್ಳಿ. ಒಳ್ಳೆ ಕತ್ತಾಳೆ ಅಥವಾ ಲೋಳೆಸರದಿಂದ ರಾತ್ರಿ ವೇಳೆ ಮುಖ ತೊಳೆದ ನಂತರ 10 ನಿಮಿಷಗಳ ಕಾಲ ಮಸಾಜ್ ಮಾಡಿ.
-ಸವೀನಾ ಪೀಟರ್ಸ್
(ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಸಮೂಹದ 'ಸಖಿ' ಪಾಕ್ಷಿಕದಿಂದ ಆಯ್ದ ಬರಹ)ಸಖಿ ಚಂದಾದಾರರಾಗಲು ಸಂಪರ್ಕಿಸಿ: 9742400220, 9886143555ಆನ್ ಲೈನಲ್ಲಿ ಸಖಿ ಓದಲು http://www.magzter.com/IN/Express-Network-Private-Limited/Sakhi/Women%27s-Interest/40127ಗೆ ಭೇಟಿನೀಡಿ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ