ಓಡಿದರೆ ಆಯಸ್ಸು ವೃದ್ಧಿ

ವ್ಯಕ್ತಿಯ ಶರೀರದಲ್ಲಿ ಮೈಟೊಕಾಂಡ್ರಿಯಾ ಎಂಬ ಸಣ್ಣ ಅಂಶಗಳಿದ್ದು...
ಓಡಿದರೆ ಆಯಸ್ಸು ವೃದ್ಧಿ
Updated on

ವ್ಯಕ್ತಿಯ ಶರೀರದಲ್ಲಿ ಮೈಟೊಕಾಂಡ್ರಿಯಾ ಎಂಬ ಸಣ್ಣ ಅಂಶಗಳಿದ್ದು ಇದನ್ನು ಕೋಶಗಳ 'ಗರಡಿಮನೆ' ಎನ್ನುತ್ತಾರೆ.

ಇವು ಅಡೊನೊಸಿನ್ ಟ್ರೈಫಾಸ್ಫೇಟ್ (ಎಟಿಪಿ) ಎಂಬ ರಾಸಾಯನಿಕ ಶಕ್ತಿಯನ್ನು ಉತ್ಪಾದಿಸುತ್ತದೆ. ಇದು, ಚಲಿಸಲು, ವಸ್ತುಗಳನ್ನು ಎತ್ತಲು ಮತ್ತು ಓಡುವಾಗ ಸ್ನಾಯು ತಂತುಗಳಿಗೆ ಸಹಕರಿಸುತ್ತದೆ. ನಿಯಮಿತವಾಗಿ ವ್ಯಾಯಾಮ ಮಾಡುವವರ ಶರೀರದಲ್ಲಿ ಮೈಟೊಕಾಂಡ್ರಿಯಾದ ಪ್ರಮಾಣ ಹೆಚ್ಚಾಗಿರುತ್ತದೆ...

ಕಾವಲನ್ನು ತಡೆಯೋದು ಯಾರೂ ಇಲ್ಲ. ಪ್ರತಿವರ್ಷ ಜನ್ಮ ದಿನವನ್ನು ಆಚರಿಸಿಕೊಂಡಾಗಲೂ ನಾವು ಸಾವನ್ನು ಸಮೀಪಿಸುತ್ತಿದ್ದೇವೆ ಎಂದರ್ಥ.


ಅಧ್ಯಯನವೊಂದರ ಪ್ರಕಾರ ಜಾಗಿಂಗ್ ಮೂಲಕ ವಯಸ್ಸನ್ನು ಮುಂದಕ್ಕೆ ಹಾಕಬಹುದು... ಅರವತ್ತು/ಎಪ್ಪತ್ತು ವರ್ಷ ವಯಸ್ಸಾದರೂ ನಮ್ಮಲ್ಲಿ ಹೆಚ್ಚಿನ ಶಕ್ತಿ ಹರಿಯಲು ಜಾಗಿಂಗ್ ನಮಗೆ ಸಹಕರಿಸುತ್ತದೆ. ಇದು ವಯಸ್ಸಾಗುವ ಪ್ರಕ್ರಿಯೆಯನ್ನು ತಕ್ಕಮಟ್ಟಿಗೆ ತಡೆಯುತ್ತದೆ.

ಅಮೆರಿಕದ ವಿಜ್ಞಾನಿಗಳು, ದೈಹಿಕವಾಗಿ ಸದೃಢರಾವಾಗಿ, ಸಕ್ರಿಯರಾಗಿದ್ದ 60-70 ವರ್ಷ ವಯಸ್ಸಿನ ವೃದ್ಧರ ಸಮೀಕ್ಷೆ ನಡೆಸಿ ಈ ತೀರ್ಮಾನಕ್ಕೆ ಬಂದಿದ್ದಾರೆ. ಈ ಪೈಕಿ ಅರ್ಧದಷ್ಟು ಮಂದಿ ನಿಯಮಿತವಾಗಿ ಜಾಗಿಂಗ್ ಮಾಡುತ್ತಿದ್ದರು. ಉಳಿದರ್ಧ ಮಂದಿ ವಾರಕ್ಕೆ ಕನಿಷ್ಠ ಮೂರು ಅಥವಾ ಅದಕ್ಕೂ ಹೆಚ್ಚು ಬಾರಿ ಜಾಗಿಂಗ್ ಮಾಡುತ್ತಿದ್ದರು. ಇವರಲ್ಲಿ ಅನೇಕರು ಪ್ರತಿನಿತ್ಯ 20 ವರ್ಷ ವಯಸ್ಸಿನವರಷ್ಟೇ ಶಕ್ತಿಯನ್ನು ವ್ಯಯಿಸುತ್ತಿದ್ದರು.

ಜಾಗಿಂಗ್ ಮಾಡುವ ಬದಲು ವಾಕಿಂಗ್ ಮಾಡುತ್ತಿದ್ದ ನಿವೃತ್ತಿ ಅಂಚಿಗೆ ತಲುಪಿದವರು 20 ವರ್ಷದವರಿಗೆ ಹೋಲಿಸಿದಲ್ಲಿ, ಶೇ.22ರಷ್ಟು ಹೆಚ್ಚು ಶಕ್ತಿಯನ್ನು ವ್ಯ.ಯಿಸುತ್ತಿದ್ದರು.

  • ವ್ಯಕ್ತಿಯ ಶರೀರದಲ್ಲಿ ಮೈಟೊಕಾಂಡ್ರಿಯಾ ಎಂಬ ಸಣ್ಣ ಅಂಶಗಳಿದ್ದು ಇದನ್ನು ಕೋಶಗಳ 'ಗರಡಿಮನೆ' ಎನ್ನುತ್ತಾರೆ. ಇವು ಅಡೆನೊಸಿನ್ ಟ್ರೈಫಾಸ್ಫೇಟ್ (ಎಟಿಪಿ) ಎಂಬ ರಾಸಾಯನಿಕ ಶಕ್ತಿಯನ್ನು ಉತ್ಪಾದಿಸುತ್ತದೆ. ಇದು, ಚಲಿಸಲು, ವಸ್ತುಗಳನ್ನು ಎತ್ತಲು ಮತ್ತು ಓಡುವಾಗ ಸ್ನಾಯು ತಂತುಗಳಿಗೆ ಸಹಕರಿಸುತ್ತದೆ. ನಿಯಮಿತವಾಗಿ ವ್ಯಾಯಾಮ ಮಾಡುವವರ ಶರೀರದಲ್ಲಿ ಮೈಟೊಕಾಂಡ್ರಿಯಾದ ಪ್ರಮಾಣ ಹೆಚ್ಚಾಗಿರುತ್ತದೆ. ಸ್ನಾಯುಗಳಿಗೆ ಇದು ಹೆಚ್ಚಿನ ಶಕ್ತಿ ನೀಡುತ್ತದೆ.
  • ಓಡುವುದರಿಂದ ದೇಹ ಸದೃಢವಾಗಿರುತ್ತದೆ. ಕನಿಷ್ಠ ಪಕ್ಷ ಶಕ್ತಿಯನ್ನು ಹೆಚ್ಚಿಸುತ್ತದೆ.
  • ನಡಿಗೆಯಿಂದ ಹೃದ್ರೋಗ, ಮಧುಮೇಹ, ತೂಕ ಹೆಚ್ಚಾಗುವಿಕೆ ಮತ್ತು ಖಿನ್ನತೆಯನ್ನೂ ದೂರವಿಡಬಹುದು.
  • ಹಂಬೋಲ್ಟ್ ವಿವಿ ಸಂಶೋಧಕರು ಸರಾಸರಿ 69 ವಷಂ ವಯಸ್ಸಿನ ತಲಾ 15 ಪುರುಷ ಮತ್ತು ಮಹಿಳೆಯರನ್ನು ಸಮೀಕ್ಷೆಯಲ್ಲಿ ಮಾತನಾಡಿಸಿದ್ದಾರೆ. ಇವರು ವಾರದಲ್ಲಿ ಮೂರು ದಿನ ನಿಯಮಿತವಾಗಿ ವಾಕ್ ಅಥವಾ ವ್ಯಾಯಾಮ ಮಾಡುತ್ತಿದ್ದರು.
  • ಕನಿಷ್ಠ 30 ನಿಮಿಷ, ಆರು ತಿಂಗಳು ಇವರು ಈ ಚಟುವಟಿಕೆಗಳಲ್ಲಿ ನಿರತರಾಗುತ್ತಿದ್ದರು.
  • ಹೆಚ್ಚು ಪ್ರಮಾಣದ ವ್ಯಾಯಾಮ ಇತ್ಯಾದಿ ಚಟುವಟಿಕೆಯಲ್ಲಿ ನಿರತರಾಗಿದ್ದ ವೃದ್ಧರು, ನಿಷ್ಕ್ರಿಯ ಹಿರಿಯರಿಗೆ ಹೋಲಿಸಿದಲ್ಲಿ ಹೆಚ್ಚು ಶಕ್ತಿ ವ್ಯಯಿಸುತ್ತಿದ್ದರು.
  • ವಯಸ್ಸಾದಂತೆ ಮನುಷ್ಯರಲ್ಲಿನ ಶಕ್ತಿ ಕುಂದುತ್ತದೆ. ಓಟಗಾರರ ವಿಷಯದಲ್ಲೂ ಇದು ನಿಜ. ಆದರೆ ಹಿರಿಯ ಓಟಗಾರರು ನಿತ್ಯ ವ್ಯಾಯಾಮದಿಂದ  ತಮ್ಮ ಶಕ್ತಿಯನ್ನು ಉಳಿಸಿಕೊಂಡಿರುತ್ತಾರೆ.
- ಪ್ರೇಮ್

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com