ರಕ್ತದೊತ್ತಡ ಕಡಿಮೆಯಾಗಲು ಅಕ್ವೇರಿಯಂ ನೋಡಿ!

ಹೊಸ ಸಂಶೋಧನಾ ವರದಿಯ ಪ್ರಕಾರ ಅಕ್ವೇರಿಯಂ ವೀಕ್ಷಣೆಯಿಂದ ಒತ್ತಡದ ಮನಸ್ಥಿತಿಯನ್ನು ಸುಧಾರಿಸಿ ರಕ್ತದೊತ್ತಡ ಕಡಿಮೆಯಾಗಲಿದೆ
ಅಕ್ವೇರಿಯಂ(ಸಂಗ್ರಹ ಚಿತ್ರ)
ಅಕ್ವೇರಿಯಂ(ಸಂಗ್ರಹ ಚಿತ್ರ)

ಲಂಡನ್:  ಹೊಸ ಸಂಶೋಧನಾ ವರದಿಯ ಪ್ರಕಾರ ಅಕ್ವೇರಿಯಂ ವೀಕ್ಷಣೆಯಿಂದ ಒತ್ತಡದ ಮನಸ್ಥಿತಿಯನ್ನು ಸುಧಾರಿಸಿ ರಕ್ತದೊತ್ತಡ ಕಡಿಮೆಯಾಗಲಿದೆ ಎಂಬುದನ್ನು ಕಂಡುಕೊಳ್ಳಲಾಗಿದೆ.

ವೈದ್ಯರು ತಮ್ಮ ಕೊಠಡಿಯೋಅಗೆ ಅಕ್ವೇರಿಯಂ ಇರಿಸುವ ಮೂಲಕ ರೋಗಿಗಳ ಮನಸನ್ನು ಪ್ರಶಾಂತವಾಗಿರಿಸಲು ಯತ್ನಿಸುತ್ತಾರೆ, ಇದರಿಂದಾಗಿ ರೋಗಿಗಳ ರಕ್ತದೊತ್ತಡ ಹಾಗೂ ಮಾನಸಿಕ ಒತ್ತಡ ಸುಧಾರಿಸಲಿದೆ ಎಂದು ಬ್ರಿಟನ್ ನ ಸಂಶೋಧಕ ಸಂಶೋಧಕ ಡೆಬೊರಾ ಹೇಳಿದ್ದಾರೆ.  

ಅಕ್ವೇರಿಯಂ ನೋಡುವುದರಿಂದಾಗಿ ಆರೋಗ್ಯ ಉತ್ತಮಗೊಳ್ಳಲಿದೆ ಎಂಬುದು ಅಧ್ಯಯನ ವರದಿಯಿಂದ ದೃಢಪಟ್ಟಿದೆ, ಎದೆ ಬಡಿತ, ರಕ್ತದೊತ್ತಡ, ಮನಸ್ಥಿತಿ ಎಲ್ಲವೂ ಅಕ್ವೇರಿಯಂ ನೋಡುವುದರಿಂದ ಸ್ಥಿಮಿತದಲಿರಲಿವೆ ಎಂದು ಅಧ್ಯಯನ ವರದಿ ತಿಳಿಸಿದೆ. ಕೆಲಸದೊತ್ತಡ ಹೆಚ್ಚಾದಾಗ ಅಕ್ವೇರಿಯಂ ನೋಡುವುದು ಸೂಕ್ತ ಎಂದು ಬ್ರಿಟನ್ ನ ಮತ್ತೋರ್ವ ಸಂಶೋಧಕ ಸಬೈನ್ ಪಾಲ್ ಸಲಹೆ ನೀಡಿದ್ದಾರೆ. ಈ ಅಧ್ಯಯನ ವರದಿ ಪರಿಸರ ಮತ್ತು ನಡವಳಿಕೆಗೆ ಸಂಬಂಧಿಸಿದ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com