ಚಿಕ್ಕ ವಯಸ್ಸಿನಲ್ಲಿ ತಂದೆಯಾಗುವವರೇ ಹುಷಾರು!

ಮದುವೆಯಾದ ತಕ್ಷಣ ಪುರುಷನೊಬ್ಬ ಬೇಗ ತಂದೆಯಾಗಲು ಹಂಬಲಿಸುತ್ತಾನೆ. ಆದರೆ ಅತಿ ಚಿಕ್ಕ ವಯಸ್ಸಿನಲ್ಲೇ ಅಂದರೆ 25 ವರ್ಷದ ಒಳಗೆ ಅಪ್ಪ ಆದ್ರೆ ಅಂಥಹ ಪುರುಷ .....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನ್ಯೂಯಾರ್ಕ್: ಮದುವೆಯಾದ ತಕ್ಷಣ ಪುರುಷನೊಬ್ಬ ಬೇಗ ತಂದೆಯಾಗಲು ಹಂಬಲಿಸುತ್ತಾನೆ. ಆದರೆ ಅತಿ ಚಿಕ್ಕ ವಯಸ್ಸಿನಲ್ಲೇ ಅಂದರೆ 25 ವರ್ಷದ ಒಳಗೆ ಅಪ್ಪ ಆದ್ರೆ ಅಂಥಹ ಪುರುಷ ಮಧ್ಯ ವಯಸ್ಸಿನಲ್ಲೇ ಅಕಾಲಿಕ ಮರಣಕ್ಕೀಡಾಗುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ವರದಿಯೊಂದು ಬಹಿರಂಗ ಪಡಿಸಿದೆ.

ನ್ಯೂಯಾರ್ಕ್ ನ ಸಮುದಾಯ ಆರೋಗ್ಯ ಎಂಬ ಜರ್ನಲ್ ಈ ವರದಿ ಮಾಡಿದೆ. ಕುಟುಂಬದ ಪರಿಸರ, ಆಗಾಗ್ಗೆ ಕಾಡುವ ಅನಾರೋಗ್ಯ, ಚಿಕ್ಕ ವಯಸ್ಸಿನಲ್ಲೇ ಅಪ್ಪ ಆಗುವವರ ಆಯಸ್ಸಿನ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ ಎಂದು ಹೇಳಿದೆ.

ಕುಟುಂಬದ ಬೇಡಿಕೆಗಳನ್ನುಈಡೇರಿಸುವಲ್ಲಿ ನಿರಂತರ ಹೋರಾಟದಲ್ಲಿ ಮಾನಸಿಕ ಒತ್ತಡ ಉಂಟಾಗುತ್ತದೆ. ಆರೋಗ್ಯದ ಬಗ್ಗೆ ಕಾಳಜಿ ಕಡಿಮೆಯಾಗುತ್ತದೆ. ಹೀಗಾಗಿ ಮಧ್ಯ ವಯಸ್ಸಿನಲ್ಲೇ ದುರ್ಮರಣಕ್ಕೀಡಾಗುವ ಸಾಧ್ಯತೆಗಳಿರುತ್ತದೆ ಎಂದು ಸಂಶೋಧನೆ ತಿಳಿಸಿದೆ.

30 ವರ್ಷದಿಂದ 44 ವರ್ಷದೊಳಗಿನ ವಯಸ್ಸಿನಲ್ಲಿ ತಂದೆಯಾದರೇ ಅಂತವರು ಹೆಚ್ಚು ಕಾಲ ಬದುಕುತ್ತಾರೆ ಎಂದೂ ಸಹ ವರದಿಯಲ್ಲಿ ಹೇಳಿದೆ.  ಅಂದರೆ 30 ವರ್ಷದ ಮೇಲ್ಪಟ್ಟು ಅಪ್ಪ ಆದರೆ ಅಂಥವರು ಅಕಾಲಿಕ ಮರಣಕ್ಕೀಡಾಗುವ ಸಾಧ್ಯತೆ  ಕಡಿಮೆ ಇದೆ ಎಂದು ತಿಳಿಸಲಾಗಿದೆ.

ವ್ಯಕ್ತಿಯ ಶೈಕ್ಷಣಿಕ ಹಿನ್ನಲೆ, ಕುಟುಂಬದ ವಾಸವಿರುವ ಸ್ಥಳ, ವೈವಾಹಿಕ ಸ್ಥಿತಿಗತಿ, ಮಕ್ಕಳ ಸಂಖ್ಯೆ ಮತ್ತಿತರ ಅಂಕಿ ಅಂಶಗಳ ಆಧಾರದ ಮೇಲೆ ಸಂಶೋಧನೆ ನಡೆಸಿ ಈ ವರದಿ ತಯಾರಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com