ಆರೋಗ್ಯವಾಗಿರಲು ಪ್ರತೀ ದಿನ ತಿನ್ನಿ ಈರುಳ್ಳಿ

ಈರುಳ್ಳಿ ಎಂದಾಕ್ಷಣ ಎಲ್ಲರಿಗೂ ಮೊದಲು ತಲೆಗೆ ಹೊಳೆಯುವುದು ಕಣ್ಣಲ್ಲಿ ನೀರು, ಕಣ್ಣು ಉರಿ. ಆದರೆ, ಪ್ರತೀ ದಿನ ಕಣ್ಣಲ್ಲಿ ನೀರು ತರಿಸುವ ಈ ಈರುಳ್ಳಿ ದೇಹದ ಆರೋಗ್ಯವಾಗಿರಿಸುವಲ್ಲಿ ಚಮತ್ಕಾರಿ ಗುಣಗಳನ್ನು ಹೊಂದಿದೆ. ಈರುಳ್ಳಿಯಲ್ಲಿ ದೇಹಳಲ್ಲೆ ಉತ್ತಮ ಪೋಷಣೆ...
ಆರೋಗ್ಯವಾಗಿರಲು ಪ್ರತೀ ದಿನ ತಿನ್ನಿ ಈರುಳ್ಳಿ
ಆರೋಗ್ಯವಾಗಿರಲು ಪ್ರತೀ ದಿನ ತಿನ್ನಿ ಈರುಳ್ಳಿ
Updated on

ಈರುಳ್ಳಿ ಎಂದಾಕ್ಷಣ ಎಲ್ಲರಿಗೂ ಮೊದಲು ತಲೆಗೆ ಹೊಳೆಯುವುದು ಕಣ್ಣಲ್ಲಿ ನೀರು, ಕಣ್ಣು ಉರಿ. ಆದರೆ, ಪ್ರತೀ ದಿನ ಕಣ್ಣಲ್ಲಿ ನೀರು ತರಿಸುವ ಈ ಈರುಳ್ಳಿ ದೇಹವನ್ನು ಆರೋಗ್ಯವಾಗಿರಿಸುವಲ್ಲಿ ಚಮತ್ಕಾರಿ ಗುಣಗಳನ್ನು ಹೊಂದಿದೆ. ಈರುಳ್ಳಿಯಲ್ಲಿ ದೇಹಕ್ಕೆ ಉತ್ತಮ ಪೋಷಣೆ ಒದಗಿಸಬಲ್ಲ ವಿಟಮಿನ್ ಗಳು ಹೇರಳವಾಗಿದ್ದು, ಇದು ನಮ್ಮ ದೇಹದ ಆರೋಗ್ಯವನ್ನು ಹೆಚ್ಚಿಸುವಲ್ಲಿ ಸಹಾಕಾರಿಯಾಗಿದೆ. ಆರೋಗ್ಯ ವೃದ್ಧಿಗೆ ಸಿದ್ಧೌಷಧವಾಗಿರುವ ಈ ಈರುಳ್ಳಿಯನ್ನು ಪ್ರತೀ ನಿತ್ಯ  ಸೇವಿಸುತ್ತಾ ಬಂದರೆ ಹದಗೆಟ್ಟ ಆರೋಗ್ಯವೂ ಸುಧಾರಿಸುತ್ತದೆ. ವೈದ್ಯ ಪ್ರಪಂಚದಲ್ಲಿಯೂ ಔಷಧಿಗಳಿಗೆ ಈರುಳ್ಳಿಯನ್ನು ಬಳಕೆ ಮಾಡುವುದುಂಟು.

ಈರುಳ್ಳಿಯ ಕೆಲವು ಔಷಧೀಯ ಗುಣಗಳು ಈ ಕೆಳಗಿನಂತಿವೆ...

ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ
ಈರುಳ್ಳಿಯಲ್ಲಿ ಸಸ್ಯಜನ್ಯ ಪೋಷಕಾಂಶಗಳು ಹೆಚ್ಚಾಗಿದ್ದು, ದೇಹಕ್ಕೆ ಅಗತ್ಯವಿರುವ ವಿಟಮಿನ್ ಸಿ ಪೋಷಕಾಂಶವನ್ನು ನೀಡುತ್ತದೆ.

ಅಸ್ತಮಾದಿಂದ ನಿವಾರಣೆಗೆ ಸಹಕಾರಿ

ಈರುಳ್ಳಿಯಲ್ಲಿ ಆ್ಯಂಟಿ ಆಕ್ಸಿಡೆಂಟ್ ಹೆಚ್ಚಾಗಿದ್ದು, ಇದು ಹಿಸ್ಟಮೀನ್ ನ್ನು ಕಡಿಮೆ ಮಾಡುತ್ತದೆ. ದೇಹಕ್ಕೆ ಬರುವ ಅಲರ್ಜಿ ಹಾಗೂ ಅಸ್ತಮಾ ರೋಗಗಳಿಂದ ದೂರವಿಡುತ್ತದೆ. ಈರುಳ್ಳಿರಸಕ್ಕೆ ಜೇನುತುಪ್ಪ ಸೇರಿಸಿ ಸಮಪ್ರಮಾಣದಲ್ಲಿ ಸೇವಿಸುವುದರಿಂದ ಅಸ್ತಮಾದಿಂದ ದೂರವಿರಬಹುದು.

ಕ್ಯಾನ್ಸರ್ ರೋಗ ತಡೆಗೆ ಉತ್ತಮ ತರಕಾರಿ
ಈರುಳ್ಳಿಯಲ್ಲಿ ವಿಟಮಿನ್ ಸಿ ಅಂಶ ಇರುವುದರಿಂದ ಕ್ಯಾನ್ಸರ್ ನಂತಹ ರೋಗಗಳನ್ನು ತಡೆಗಟ್ಟಲು ಸಹಕಾರಿಯಾಗಿದೆ.

ಸಕ್ಕರೆ ಖಾಯಿಲೆಯಿಂದ ದೂರವಿರಬಹುದು.
ಈರುಳ್ಳಿಯನ್ನು ಹೇರಳವಾಗಿ ತಿನ್ನುವುದರಿಂದ ಇದು ದೇಹದಲ್ಲಿ ಉತ್ಪತ್ತಿಯಾಗುವ ಗ್ಲೂಕೋಸ್ ನ್ನು ಕಡಿಮೆ ಮಾಡಿ, ಇನ್ಸುಲಿನ್ ನ್ನು ಹೆಚ್ಚಾಗುವಂತೆ ಮಾಡುತ್ತದೆ. ಇದರಿಂದ ನಾವು ಸಕ್ಕರೆ ಖಾಯಿಲೆಯಿಂದ ದೂರವಿರಬಹುದು.

ದಂತ ಕ್ಷಯದಿಂದ ರಕ್ಷಣೆ
ಈರುಳ್ಳಿಯನ್ನು ಪ್ರತೀನಿತ್ಯ ಸೇವಿಸುವುದರಿಂದ ಬಾಯಿಯ ಆರೋಗ್ಯ ಉತ್ತಮವಾಗಿರುತ್ತದೆ. ಈರುಳ್ಳಿಯನ್ನು ಜಗಿದು ತಿನ್ನುವುದರಿಂದ ಇದು ಹಲ್ಲಿನ ಆರೋಗ್ಯವನ್ನು ಹೆಚ್ಚಿಸುತ್ತದೆ. ಪ್ರತೀ ನಿತ್ಯ 3 ನಿಮಿಷಕ್ಕಿಂತ ಹೆಚ್ಚಾಗಿ ಈರುಳ್ಳಿಯನ್ನು ಜಗಿಯುವುದರಿಂದ ಇದು ಹಲ್ಲಲ್ಲಿರುವ ಬ್ಯಾಕ್ಟೀರಿಯಾವನ್ನು ಕೊಲ್ಲುತ್ತದೆ.

ಕೂದಲಿನ ರಕ್ಷಣೆಗೆ ಉಪಯೋಗಕಾರಿ
ಈರುಳ್ಳಿ ದೇಹದ ಆರೋಗ್ಯವಷ್ಟೇ ಅಲ್ಲದೆ, ಸೌಂದರ್ಯ ವೃದ್ಧಿಗೂ ಸಹಕಾರಿಯಾಗಿದ್ದು, ಕೂದಲಿನ ಆರೈಕೆಗೆ ಉತ್ತಮ ಔಷಧವೆನ್ನಬಹುದು. ಈರುಳ್ಳಿಯಲ್ಲಿ ವಿಟಮಿನ್ ಎ ಹಾಗೂ ಸಿ ಇರುವುದರಿಂದ ಇದು ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ. ಕೂದಲಿನ ಬುಡವನ್ನು ಗಟ್ಟಿಯಾಗಿಸುತ್ತದೆ. ಈರುಳ್ಳಿಯ ರಸವನ್ನು ಕೂದಲಿನ ಬುಡಕ್ಕೆ ಹಚ್ಚುತ್ತಾ ಬಂದರೆ ಕೂದಲು ಉದುರುವುದು ಕ್ರಮೇಣವಾಗಿ ನಿಯಂತ್ರಣಕ್ಕೆ ಬರುತ್ತದೆ. ಅಲ್ಲದೆ, ರಕ್ತ ಸಂಚಲನ ಸುಗಮವಾಗುತ್ತದೆ.

ದೇಹ ಕರಗಿಸುವಲ್ಲಿ ಉಪಕಾರಿ
ದಢೂತಿ ದೇಹ ಕರಗಿಸುವಲ್ಲಿಯೂ ಈರುಳ್ಳಿ ಸಹಕಾರಿಯಾಗುತ್ತದೆ. ಡಯಟ್ ಮತ್ತು ವ್ಯಾಯಾಮ ಮಾಡುವವರಿಗೆ ಕೊಬ್ಬನ್ನ ಕರಗಿಸಲು ಅನುಕೂಲಕರವಾಗಿದೆ. ಇದಕ್ಕೆ ಸ್ಪ್ರಿಂಗ್ ಆನಿಯನ್ ಹೆಚ್ಚು ಪರಿಣಾಮಕಾರಿಯಂತೆ.

ನಿದ್ರಾಹೀನತೆ ನಿವಾರಣೆ
ನಿದ್ರಾಹೀನತೆಯಿಂದ ಬಳಲುತ್ತಿರುವವರಿಗೆ ಈರುಳ್ಳಿ ಒಳ್ಳೆಯ ಔಷಧಿ. ರಾತ್ರಿ ಊಟಕ್ಕೂ ಮುನ್ನ ಈರುಳ್ಳಿ ಸೂಪ್ ಸೇವಿಸಿದರೆ ಚೆನ್ನಾಗಿ ನಿದ್ರೆ ಬರುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com