ರೇಟು ಚಿನ್ನವಾದ್ರೂ ಈರುಳ್ಳಿ ಯಾಕ್ಬೇಕು ಗೊತ್ತಾ?

ರೇಟ್ ಜಾಸ್ತಿ ಆದ್ರೂ ಈರುಳ್ಳಿ ತಿನ್ನೋದನ್ನು ಬಿಡ್ಬೇಡಿ. ಇದು ಆರೋಗ್ಯಸ್ನೇಹಿ. ನಿಮಗೆ ತುಂಬಾ ಜ್ವರ ಬಂದಿದ್ದರೆ, ಆಗ ಅತ್ಯುತ್ತಮ ಮದ್ದಾಗುವುದು ಈರುಳ್ಳಿಯೇ...
ಈರುಳ್ಳಿ ಪ್ರಯೋಜನ (ಸಂಗ್ರಹ ಚಿತ್ರ)
ಈರುಳ್ಳಿ ಪ್ರಯೋಜನ (ಸಂಗ್ರಹ ಚಿತ್ರ)

ರೇಟ್ ಜಾಸ್ತಿ ಆದ್ರೂ ಈರುಳ್ಳಿ ತಿನ್ನೋದನ್ನು ಬಿಡ್ಬೇಡಿ. ಇದು ಆರೋಗ್ಯಸ್ನೇಹಿ. ನಿಮಗೆ ತುಂಬಾ ಜ್ವರ ಬಂದಿದ್ದರೆ, ಆಗ ಅತ್ಯುತ್ತಮ ಮದ್ದಾಗುವುದು ಈರುಳ್ಳಿಯೇ.

ಈರುಳ್ಳಿ, ಆಲೂಗಡ್ಡೆಯನ್ನು ಸಣ್ಣಗೆ ಹೆಚ್ಚಿ, ಇದಕ್ಕೆ ಜಜ್ಜಿದ ಬೆಳ್ಳುಳ್ಳಿಯನ್ನೂ ಮಿಶ್ರಣ ಮಾಡಿ ಒಂದು ಸಾಕ್ಸೊಳಗೆ ಹಾಕಿಕೊಳ್ಳಿ. ಆ ಸಾಕ್ಸನ್ನು ಧರಿಸಿ ಮಲಗಿ ಒಂದು ನಿದ್ದೆ ಹೊಡೆದರೆ, ಒಂದೂವರೆ  ತಾಸೊಳಗೆ ಜ್ವರ ಹತೋಟಿಗೆ ಬರುತ್ತದೆ. ಅಥವಾ ಈರುಳ್ಳಿಯ ವೃತ್ತಾಕಾರದ ತುಣುಕನ್ನು ಹಣೆ ಮೇಲೆ ಇಟ್ಟುಕೊಂಡು, ಬಟ್ಟೆ ಸುತ್ತಿದರೂ ಆದೀತು. ಈರುಳ್ಳಿಯನ್ನು ಹೆಚ್ಚು ತಿನ್ನೋದ್ರಿಂದ  ನಿದ್ರಾಹೀನತೆ ದೂರವಾಗುತ್ತದೆ.

ಲೈಂಗಿಕ ಶಕ್ತಿ ಪ್ರಚೋದಕವಿದು. ಕೆಮ್ಮು ನಿವಾರಕ. ಜೀರ್ಣಾವಸ್ಥೆ ಚೆನ್ನಾಗಿರುತ್ತೆ. ಜೇನು ಹುಳು ಕಡಿದ ಜಾಗದಲ್ಲಿ ಈರುಳ್ಳಿ ತುಣುಕನ್ನಿಟ್ಟುಕೊಂಡರೆ ಉರಿ ನಿವಾರಣೆ ಆಗುತ್ತೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com