ಕಡಿಮೆ ನಿದ್ರೆ ಶೀತ-ನೆಗಡಿಗೆ ಕಾರಣ: ಅಧ್ಯಯನ

ಆರು ಘಂಟೆಗಳು ಅಥವಾ ಅದಕ್ಕಿಂತಲೂ ಕಡಿಮೆ ನಿದ್ದೆ ಮಾಡುವವರು ಶೀತ ಮತ್ತು ನೆಗಡಿಗೆ ಸುಲಭ ತುತ್ತಾಗುತ್ತಾರೆ ಎನ್ನುತ್ತದೆ ಅಧ್ಯಯನವೊಂದು.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ವಾಶಿಂಗ್ಟನ್: ಆರು ಘಂಟೆಗಳು ಅಥವಾ ಅದಕ್ಕಿಂತಲೂ ಕಡಿಮೆ ನಿದ್ದೆ ಮಾಡುವವರು ಶೀತ ಮತ್ತು ನೆಗಡಿಗೆ ಸುಲಭ ತುತ್ತಾಗುತ್ತಾರೆ ಎನ್ನುತ್ತದೆ ಅಧ್ಯಯನವೊಂದು.

ಯು ಎಸ್ ಜರ್ನಲ್ ಸ್ಲೀಪ್ ನಲ್ಲಿ ಪ್ರಕಟವಾಗಿರುವ ಆ ಅಧ್ಯಯನದ ಸಂಶೋಧನೆಗಳು ತಿಳಿಸುವಂತೆ ನಿದ್ದೆ ಮತ್ತು ಆರೋಗ್ಯಕ್ಕೆ ನೇರ ಸಂಬಂಧವಿದೆ ಎನ್ನುತ್ತದೆ.

ಸುಮಾರು ೧೬೪ ಜನ ವಯಸ್ಕರನ್ನು ಒಂದು ವಾರದವರೆಗೆ ಸೆನ್ಸಾರ್ ಗಳನ್ನು ಬಳಸಿ ರಾತ್ರಿಯಿಡೀ ಅವರು ಎಷ್ಟು ಘಂಟೆ ಅವರು ನಿದ್ದೆ ಮಾಡುತ್ತಾರೆ ಎಂದು ದಾಖಲಿಸಿ, ನಂತರ ಅವರನ್ನು ಹೋಟೆಲ್ ನಲ್ಲಿ ಪ್ರತ್ಯೇಕವಾಗಿಸಿ ಮೂಗಿಗೆ ನೇಸಲ್ ಡ್ರಾಪ್ ಮೂಲಕ ನೆಗಡಿ ತರಿಸುವ ವೈರಸ್ ಸೇರಿಸಿ, ವೈರಸ್ ಹೇಗೆ ಹರಡಿದೆ ಎಂದು ತಿಳಿಯಲು ಅವರ ಮೂಗಿನಿಂದ ಇಳಿಯುವ ದ್ರವದ ಮಾದರಿಗಳನ್ನು ಪರೀಕ್ಷಿಸಿದ್ದಾರೆ.

ಏಳು ಘಂಟೆಗಳ ಕಾಲ ನಿದ್ದೆ ಮಾಡುವವರಿಗಿಂತಲೂ, ಆರು ಘಂಟೆ ನಿದ್ದೆ ಮಾಡಿದವರು ನೆಗಡಿ ಹಿಡಿಯುವುದರಲ್ಲಿ ೪.೨ ಬಾರಿ ಮುಂಚೂಣಿಯಲ್ಲಿದ್ದಾರೆ. ಐದು ಘಂಟೆ ನಿದ್ದೆ ಮಾಡುವವರು ನೆಗಡಿ ಹಿಡಿಯುವುದರಲ್ಲಿ ೪.೫ ಬಾರಿ ಹೆಚ್ಚು ಮೂಂಚೂಣಿಯಲ್ಲಿದ್ದಾರೆ ಎಂದು ಈ ಅಧ್ಯಯನ ತಿಳಿಸಿದೆ.

"ಬೇರೆಲ್ಲಾ ಕಾರಣಗಳಿಗಿಂತ ನಿದ್ದೆಯೇ ಅತಿ ದೊಡ್ಡ ಕಾರಣ" ಎನ್ನುತ್ತಾರೆ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಸಹ ಪ್ರೊಫೆಸರ್ ಆರಿಕ್ ಪ್ರಾಥರ್. "ಜನರ ಒತ್ತಡ, ಅವರ ವಿದ್ಯಾಭ್ಯಾಸ ಅವರ ಜನಾಂಗ ಇವೆನ್ನೆಲಾವನ್ನೂ ಅಧ್ಯಯನ ಮಾಡಿದಾಗ್ಯೂ ಇವೆಲ್ಲವೂ ಯಾವುದೂ ಮುಖ್ಯವಲ್ಲ. ನೆಗಡಿ ವೈರಸ್ ಹಿಡಿದುಕೊಳ್ಳಲು ಕಡಿಮೆ ನಿದ್ರೆಯೇ ದೊಡ್ಡ ಕಾರಣ ಎನ್ನುತಾರೆ" ಸಂಶೋಧಕರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com