ವಧುವಿನ ಕಾ೦ತಿಯುಕ್ತ ತ್ವಚೆಗಾಗಿ ಸಲಹೆಗಳು

ಸುಂದರ ತ್ವಚೆ ಯಾರಿಗೆ ತಾನೆ ಬೇಡ ಹೇಳಿ? ಅದರಲ್ಲೂ ವಿವಾಹ ಕಾರ್ಯಕ್ರಮಗಳು ಆಕರ್ಷಕವಾಗಿ ಕಾಣುವಂತೆ ತಯಾರಾಗಲು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಸುಂದರ ತ್ವಚೆ ಯಾರಿಗೆ ತಾನೆ ಬೇಡ ಹೇಳಿ? ಅದರಲ್ಲೂ ವಿವಾಹ ಕಾರ್ಯಕ್ರಮಗಳು ಆಕರ್ಷಕವಾಗಿ ಕಾಣುವಂತೆ ತಯಾರಾಗಲು ಹೇಳಿ ಮಾಡಿಸಿದ ಸಮಾರಂಭ. ವಿವಾಹ ಸಮಾರಂಭದ ಕೇಂದ್ರ ಬಿಂದು ವಧುವಿಗಂತೂ ಆಕರ್ಷಕವಾಗಿ ಕಾಣುವುದು ಮುಖ್ಯ. ಅದಕ್ಕೆ ಅಗತ್ಯವಿರುವ ಕೆಲವು ಸ್ಕಿನ್ ಕೇರ್ ಸಲಹೆಗಳು ಇಲ್ಲಿವೆ.
ಹೆಚ್ಚು ನೀರಿನ ಸೇವನೆ: ನಿಮ್ಮ ತ್ವಚೆ ಯಾವುದೇ ರೀತಿ ಇದ್ದರೂ, ತ್ವಚೆಯಲ್ಲಿ ತೇವಾಂಶವನ್ನು ಉಳಿಸಿಕೊಳ್ಳುವುದು ಮುಖ್ಯ. ನೀರಿನ ಅಂಶವುಳ್ಳ ಕಲ್ಲಂಗಡಿ, ದ್ರಾಕ್ಷಿ, ಬ್ರಾಕಲಿ ಲೆಟಿಸ್ ನಂತಹ ಆಹಾರ ಸೇವಿಸುವುದರಿಂದ ತ್ವಚೆ ಮಿನುಗುವಂತೆ ಮಾಡಬಲ್ಲವು.
ಎಕ್ಸ್ ಫೊಲೆಟ್: ನಿಯಮಿತವಾಗಿ ನಿಮ್ಮ ತ್ವಚೆಗೆ ಎಕ್ಸ್ ಫೊಲೆಟ್ ಮಾಡಿ. ಕನಿಷ್ಟ ಒಂದು ವಾರದಲ್ಲಿ ಒಮ್ಮೆಯಾದರೂ ಇದನ್ನು ಪ್ರಯತ್ನಿಸಿ. 
ಫೇಶಿಯಲ್: ಕನಿಷ್ಠ ತಿಂಗಳಿಗೊಮ್ಮೆಯಾದರೂ ಫೇಶಿಯಲ್ ಮಾಡಿಸಿಕೊಳ್ಳಿ, ಮದುವೆ ಸಮಾರಂಭಕ್ಕೂ ಮುನ್ನ ಒಂದು ತಿಂಗಳ ಮುಂಚೆ ಫೇಶಿಯಲ್ ಮಾಡಿಸಿಕೊಳ್ಳುವುದರಿಂದ ತ್ವಚೆಯ ಕಾಂತಿ ಕಡಿಮೆಯಾಗುವುದನ್ನು ಹಾಗೂ ಮೊಡವೆ ಕಲೆಗಳನ್ನು ನಿವಾರಿಸಬಹುದು. 
ಮಾಶ್ಚರೈಸ್: ಪ್ರತಿದಿನಕ್ಕೆ ಎರಡು ಬಾರಿ ನಿಮ್ಮ ತ್ವಚೆಗೆ ಮಾಶ್ಚರೈಸ್ ನೀಡಲು ಮರೆಯಬೇಡಿ. ಒಣತ್ವಚೆ ಇರುವ ಭಾಗದಕ್ಕೆ ಹೆಚ್ಚು ಮಹತ್ವ ನೀಡಿ. 
ನಿದ್ದೆ: ನಿದ್ದೆ ಸರಿಯಾಗಿ ಮಾಡದೇ ಇದ್ದರೆ ಇಷ್ಟೆಲ್ಲಾ ಮಾಡಿದ್ದೂ ವ್ಯರ್ಥವಾಗುತ್ತದೆ. ಆದ್ದರಿಂದ ಕನಿಷ್ಠ 8 ಗಂಟೆ ನಿದ್ದೆ ಮಾಡಿದರೆ ತ್ವಚೆಗೆ ಪ್ರಯೋಜನಕಾರಿಯಾಗುತ್ತದೆ. 
ತ್ವಚೆಯ ಕಾಂತಿಯನ್ನು ಹೆಚ್ಚಿಸುವ ಆಹಾರಗಳನ್ನು ಸೇವಿಸಿ: ಕೆಲವೊಂದು ಆಹಾರಗಳು ತ್ವಚೆಗೆ ಸಹಜ ಹೊಳಪು ನೀಡುತ್ತವೆ.  ಸಾಲ್ಮನ್, ಅರಿಶಿನ, ಬೀಟ್ರೂಟ್, ಆವಕಾಡೊ, ಮಾವಿನಕಾಯಿ, ಕಿವಿ, ಹಸಿರು ತರಕಾರಿಗಳು, ಕಾಳುಗಳು ಮತ್ತು ಕೋಸುಗಡ್ಡೆ ಈ ಆಹಾರ ಪದಾರ್ಥಗಳನ್ನು ಸೇವಿಸಿದರೆ ತ್ವಚೆ ಸಹಜ ಹೊಳಪು ಪಡೆದುಕೊಳ್ಳುತ್ತದೆ. 
ನಯವಾದ ತುಟಿಗಳು: ಒಣ ತುಟಿ ಇದ್ದರೆ, ಮೃದು ಬ್ರಿಸ್ಟಲ್ಡ್ ಬ್ರಷ್ ಮೂಲಕ ಎಕ್ಸ್ ಫೊಲೆಟ್ ಮಾಡಿ ಲಿಪ್ ಬಾಮ್ ಹಚ್ಚಿ.   
ಟೋನರ್ ಬಳಕೆ: ಪ್ಯಾರಬೆನ್ ಗಳನ್ನೊಳಗೊಂಡ ಟೋನರ್ ಬಳಕೆ ನಿಲ್ಲಿಸಿ 
ಲಿಪ್ ಸ್ಟಿಕ್ ಬಳಕೆ: ಒಂದು ವರ್ಷಕ್ಕಿಂತ ಹಳೆಯದಾದ ಲಿಪ್ ಸ್ಟಿಕ್ ಗಳನ್ನು ಬಳಸಬೇಡಿ. 
ಸನ್ ಸ್ಕ್ರೀನ್: ಬಿಸಿಲಿನಿಂದ ನಿಮ್ಮ ತ್ವಚೆಯನ್ನು ರಕ್ಷಿಸಲು ನಿಮ್ಮ ಕುತ್ತಿಗೆ, ಮುಖ, ಮತ್ತೆ, ಮತ್ತು ಕೈಗಳಿಗೆ ಸನ್ ಸ್ಕ್ರೀನ್ ಲೇಪನ ಮಾಡಿ ವಾರದಲ್ಲಿ ಎರಡು ಬಾರಿ ಕೂದಲಿಗೆ ಬಾದಾಮಿ ಎಣ್ಣೆ ಲೇಪಿಸುವುದರಿಂದ ಕೂದಲನ್ನು ಸಂವೃದ್ಧಿಯಾಗಿ ಪೋಷಣೆ ಮಾಡಿ. ಮೊಡವೆಗಳು ಅಧಿಕವಾದರೆ ನಿಮ್ಮ ಚರ್ಮರೋಗ ತಜ್ಞರನ್ನು ಭೇಟಿ ಮಾಡಿ. ನಿಮ್ಮ ತ್ವಚೆ ಪರಿಪೂರ್ಣವಾಗಿ ಆಕರ್ಷಕವಾಗಬೇಕೆಂದರೆ ವಿವಾಹ ಕಾರ್ಯಕ್ರಮಕ್ಕೂ ಒಂದು ದಿನ ಮುಂಚಿತವಾಗಿ ಬ್ಯೂಟಿ ಪಾರ್ಲರ್ ಗೆ ಹೋಗುವುದನ್ನು ಮರೆಯಬೇಡಿ!

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com