ಚಳಿಗಾಲದಲ್ಲಿ ಕೂದಲಿನ ಆರೈಕೆಗೆ ಟಿಪ್ಸ್

ಪ್ರತಿಯೊಂದು ಋತುವಿನಲ್ಲೂ (ಸೀಸನ್) ಒಂದೊಂದು ರೀತಿಯ ಕೂದಲಿನ ಸಮಸ್ಯೆ ಇದ್ದೇ ಇರುತ್ತದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಪ್ರತಿಯೊಂದು ಋತುವಿನಲ್ಲೂ (ಸೀಸನ್) ಒಂದೊಂದು ರೀತಿಯ ಕೂದಲಿನ ಸಮಸ್ಯೆ ಇದ್ದೇ ಇರುತ್ತದೆ. ಚಳಿಗಾಲದಲ್ಲಂತೂ ಒರಟು ಕೂದಲು, ಡ್ಯಾಂಡ್ರಫ್(ಹೊಟ್ಟು) ಸ್ಪ್ಲಿಟ್ ಎಂಡ್ಸ್ ನಂತಹ ಸಮಸ್ಯೆಗಳು ಸಾಮಾನ್ಯ. 
ಇದಕ್ಕಾಗಿ ಹೆಚ್ಚು ಯೋಚನೆ ಮಾಡಬೇಕಿಲ್ಲ. ಸಾಮಾನ್ಯ ಎಂಬ ಕಾರಣಕ್ಕಾಗಿ ಅಲ್ಲ, ಬದಲಾಗಿ, ಇದನ್ನು ತಡೆಗಟ್ಟಲು ಸುಲಭ ಮಾರ್ಗಗಳಿರುವುದರಿಂದ ಹೆಚ್ಚು ಯೋಚನೆ ಮಾಡಬೇಕಿಲ್ಲ ಎಂದಿದ್ದು. ಕೆಲವು ಗಿಡಮೂಲಿಕೆಗಳ ಮೂಲಕ ಒರಟು ಕೂದಲು, ಡ್ಯಾಂಡ್ರಫ್ ಸಮಸ್ಯೆ ಹೇಗೆ ತಡೆಗಟ್ಟಬಹುದೆಂಬ ಮಾಹಿತಿ ಇಲ್ಲಿದೆ. 
ಬೇವಿನ ಎಲೆ: ಆಂಟಿಸೆಪ್ಟಿಕ್ ಗುಣಗಳನ್ನು ಹೊಂದಿರುವ ಬೇವಿನ ಎಲೆ ಬಳಕೆಯಿಂದ ಕೂದಲು ಉದುರುವಿಕೆ, ಡ್ಯಾಂಡ್ರಫ್(ಹೊಟ್ಟನ್ನು) ನಿವಾರಿಸಬಹುದು. ಬೇವಿನ ಎಲೆಗಳ ಪೇಸ್ಟ್ ನ್ನು ತಯಾರಿಸಿ ಕೂದಲಿಗೆ ಲೇಪನ ಮಾಡಿ ಅರ್ಧಗಂಟೆಗಳ ನಂತರ ಹೇರ್ ವಾಶ್ ಮಾಡಿದರೆ  ಕೂದಲು ಉದುರುವಿಕೆ, ಡ್ಯಾಂಡ್ರಫ್ ನ್ನು ತಡೆಗಟ್ಟಬಹುದು. 
ಕೊತ್ತಂಬರಿ ಎಲೆ: ಕೊತ್ತಂಬರಿ ಎಲೆಗಳ ಪೇಸ್ಟ್ ತಯಾರಿಸಿ, ಅಥವಾ ಅದರ ಕೊತ್ತಂಬರಿ ರಸವನ್ನು ಹಾಕಿ ಬಿಸಿ ನೀರಿನಿಂದ ಕೂದಲನ್ನು ತೊಳೆಯುವುದರಿಂದಲೂ ಕೂದಲಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು
ಬೀಟ್ರೂಟ್ ಎಲೆ: ಅರಿಶಿನ, ಗೋರಂಟಿಯೊಂದಿಗೆ ಸೇರಿಸಿ ತಯಾರಿಸಿದ ಬೀಟ್ರೂಟ್ ಎಲೆಗಳ ಪೇಸ್ಟ್ ಕೂದಲು ಉದುರುವಿಕೆ ತಡೆಗೆ ಉತ್ತಮ ಮದ್ದಾಗಬಲ್ಲದು, ಇದನ್ನು ಪ್ರತಿನಿತ್ಯವೂ ಬಳಸಬಹುದು.
ಕರಿಬೇವಿನ ಎಲೆ: ಕೂದಲನ್ನು ದಟ್ಟವಾಗಿಸಲು ಕರಿಬೇವಿನ ಎಲೆ  ಅತ್ಯಂತ  ಉತ್ತಮ ಮನೆ ಮದ್ದು, 100 ಎಂಎಲ್ ನಷ್ಟು ಕೊಬ್ಬರಿ ಎಣ್ಣೆಗೆ ಒಂದು ಬೌಲ್ ನಷ್ಟು ಕರಿಬೇವು ಎಲೆಗಳನ್ನು ಸೇರಿಸಿ ಬಿಸಿ ಮಾಡಿ ನಂತರ 15 ನಿಮಿಷದ ವರೆಗೆ ಅದನ್ನು ಕುಡಿಸಿ ಕೂದಲಿಗೆ  ಹಚ್ಚಿಕೊಳ್ಳಬಹುದು. 
ಆಲೋ ವೆರಾ ಜೆಲ್: ಆಲೋ ವೆರಾ ಜೆಲ್ ಹಾಕುವುದರಿಂದ ಕೂದಲು ಉದುರುವುದು ಕಡಿಮೆಯಾಗುವುದಲ್ಲದೆ, ಕೂದಲಿನ ಬೆಳವಣಿಗೆಗೂ ಸಹಕಾರಿಯಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com