
ಚಳಿಗಾಲ ಬಂತೆಂದರೆ ಸಾಕು ಮೈ ತುಂಬಾ ಬಟ್ಟೆ ಧರಿಸಿ ದೇಹವನ್ನು ಬೆಚ್ಚಗಿಡಲು ಮುಂದಾಗುತ್ತೇವೆ. ಅದರಂತೆ ಸ್ವೆಟರ್, ಜಾಕೇಟ್ ಬಳಸಿ ನಮ್ಮ ದೇಹವನ್ನು ಬೆಚ್ಚಗಿಡುತ್ತೇವೆ.
ಪ್ರಿಂಟ್‌ಗಳು
ಪ್ರಿಂಟೆಂಡ್ ಕಿತ್ತಳೆ ಬಣ್ಣದ ಡ್ರೆಸ್ ಧರಿಸುವುದು ಒಂದು ಉತ್ತಮವಾದ ಆಯ್ಕೆ. ಉಡುಪಿನ ಮೇಲೆ ಪ್ರಿಂಟ್ ಇರುವುದು ನಿಮ್ಮ ಕಿತ್ತಳೆ ಬಣ್ಣದ ಡ್ರೆಸ್‌ನ ಹೊಳಪನ್ನು ಹೆಚ್ಚು ಪರಿಣಾಮಕಾರಿಯಾಗಿಸುತ್ತದೆ. ಬಣ್ಣಗಳ ಹೊಂದಾಣಿಕೆಯಾದ ಬಿಳಿ ಮತ್ತು ಕಿತ್ತಳೆ, ನೀಲಿ ಮತ್ತು ಕಿತ್ತಳೆ ಹಾಗೂ ಕಂದುಬಣ್ಣಗಳು ಉತ್ತಮ ಆಯ್ಕೆಗಳಾಗಿರುತ್ತದೆ. ಆದರೆ ಪ್ರಿಂಟ್‌ಗಳು ತುಂಬಾ ಹಳೆಯ ಕಾಲದ್ದಾಗಿರದಂತೆ ಎಚ್ಚರ ವಹಿಸಿ.
ಚಾಕೆಟ್ಸ್
ನೀಲಿ, ಕಪ್ಪು, ಗ್ರೇ, ಬಿಳಿಯ ಬಣ್ಣದ ಜಾಕೇಟ್ ಗಳು ಚಳಿಗಾಲಕ್ಕೆ ಉತ್ತಮ ಉಡುಪು. ಪಾರ್ಕಸ್, ಏನಾರಕ್ಸ್, ಮಿಲಿಟರಿ ಸ್ಟೈಲ್, ಪಫರ್, ಬಾಂಬರ್ ಜಾಕೆಟ್ಸ್ ಗಳು ನಿಮ್ಮ ಟೈಟ್ ಪೆನ್ಸಿಲ್ ಫಿಟ್ ಪ್ಯಾಂಟುಗಳಿಗೆ ಅಥವಾ ಸ್ಕರ್ಟ್ ಗೆ ಹೊಂದಿಕೊಳ್ಳುವುದು. ಇದರಲ್ಲೇ ದೊರಕುವ ಕಕೂನ್ ಕೋಟ್ಸ್ ಮತ್ತು ಪ್ಯಾಂಟ್ ಕೋಟ್ಸ್ ಗಳೂ ಸಾಂಪ್ರದಾಯಿಕ ಜಾಕೆಟ್ ನೋಡಲು ಧರಿಸಲು ಚೆಂದವಾಗಿರುತ್ತದೆ.
ಟ್ರಿಂಚ್ ಕೋಟ್ಸ್
ಗುಂಡಿ ಇರುವ ಟ್ರೆಂಟ್ ಕೋಟ್ಸ್ ಮತ್ತು ಬೆಲ್ಟ್ ಇತ್ತೀಚಿನ ಹೊಸ ಫ್ಯಾಷನ್ ಆಗಿದೆ. ಇದು ಚಳಿಗಾಲಕ್ಕೆ ಹೇಳಿ ಮಾಡಿಸಿದ ಉಡುಪುಗಳು. ಕಡು ವರ್ಣದ ಈ ಕೋಟುಗಳು ಪ್ಯಾಂಟು, ಸ್ಕರ್ಟ್ ಮೇಲೆ ಧರಿಸಿದರೆ ಚೆಂದ. ನೀಲಿ ಕೆಂಪು, ಹಸಿರು ಬಣ್ಣದ ಟ್ರಿಂಚ್ ಕೋಟ್ಸ್ ಇಂದಿನ ಟ್ರೆಂಡ್.
ಸ್ವೆಟರ್
ತೆಳು ಬಣ್ಣದ ವಿನೆಕ್ ಉಳ್ಳ ಸ್ವೇಟರ್ ಚಳಿಗಾಲಕ್ಕೆ ಹೇಳಿ ಮಾಡಿಸಿದ ಉಡುಪು. ತೆಳುವಾದ ಕಾಟನ್ ಬಟ್ಟೆ ಧರಿಸಿ ಅದರ ಮೇಲೆ ಸ್ವೆಟರ್ ಹಾಕಿಕೊಳ್ಳಬಹುದು. ಟೀಶರ್ಟ್ ಒಳಗೆ ಹಾಕಿ ಮೇಲೆ ಸ್ವೇಟರ್ ಹಾಕುವುದಾದರೆ ಅರ್ಧ ತೋಳಿನ ಸ್ವೆಟರ್ ಹಾಕಿಕೊಳ್ಳಿ. ಚೆಕ್ಸ್ ಸ್ವೆಟರ್ ಗಳು ಮಾರುಕಟ್ಟೆಯಲ್ಲಿ ತೆಳುವರ್ಣದ ಬಣ್ಣಗಳಲ್ಲಿ ದೊರಕುತ್ತವೆ. ಬಟನ್ ಸ್ವೆಟರ್ ನಿಮ್ಮ ದೇಹದ ಮೈಮಾಟವನ್ನು ಎತ್ತಿ ತೋರಿಸುತ್ತದೆ ಎಂಬುದು ಮರೆಯಬೇಡಿ.
ಪೆನ್ಸಿಲ್ ಸ್ಕರ್ಟ್
ಉಣ್ಣೆದಾರದಿಂದ ತಯಾರಿಸಿರುವ ಪೆನ್ಸಿಲ್ ಸ್ಕರ್ಟ್ಸ್ ತೆಳ್ಳಗಿನ ಮೈಕಟ್ಟು ಉಳ್ಳವರಿಗೆ ಚೆಂದ ಕಾಣುವುದು. ಗ್ರೇ ಕಲರ್, ಕಪ್ಪು ಸ್ಕರ್ಟ್ ಗಳು ದೊರೆಕುತ್ತವೆ.
- ಮೈನಾಶ್ರೀ
Advertisement