ಒಂದು ಅಪ್ಪುಗೆಯಿಂದ ಬದಲಾಗುತ್ತೆ ಮೂಡ್ ‍

ಮಾನಸಿಕ ಖಿನ್ನತೆ ಅಥವಾ ಬೇಸರದಿಂದ ನೊಂದವರಿಗೆ ಒಂದು ಬೆಚ್ಚಗಿನ ಅಪ್ಪುಗೆ ಸಮಾಧಾನ ತರುತ್ತದೆ ಎಂಬುದು ಅಧ್ಯಯನದಿಂದ ತಿಳಿದು ಬಂದಿದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮಕ್ಕಳು ಬಿದ್ದು ಗಾಯ ಮಾಡಿಕೊಂಡೋ, ಅಥವಾ ಬೇಸರ ಮಾಡಿಕೊಂಡು ಅಳುವಾಗ ಅಮ್ಮ ಅಥವಾ ಪ್ರೀತಿ ಪಾತ್ರರಾದವರು ಒಂದು ಬೆಚ್ಚಗಿನ, ಸಮಾಧಾನದ ಅಪ್ಪುಗೆಯಿಂದ ಮಗುವಿಗೆ ಸಾಂತ್ವನ ಸಿಗುತ್ತದೆ.

ಮಾನಸಿಕ ಖಿನ್ನತೆ ಅಥವಾ ಬೇಸರದಿಂದ ನೊಂದವರಿಗೆ ಒಂದು ಬೆಚ್ಚಗಿನ ಅಪ್ಪುಗೆ ಸಮಾಧಾನ ತರುತ್ತದೆ ಎಂಬುದು ಅಧ್ಯಯನದಿಂದ ತಿಳಿದು ಬಂದಿದೆ.

ಒಂದು ಸ್ಪರ್ಶ ಹಲವು ಔಷಧಿಗಳಿಗೆ ಸಮ. ಒಂದು ಚಿಕಿತ್ಸೆಯಾಗುಯೂ ಕೂಡ ಕೆಲಸ ಮಾಡುತ್ತದೆ. ಜೊತೆಗೆ ಒಂದು ಆಲಿಂಗನ ಎರಡು ಮನಸ್ಸುಗಳ ಬಾಂಧವ್ಯವನ್ನು ಗಟ್ಟಿಗೊಳಿಸುತ್ತದೆ.  ಜೊತೆಗೆ ಮಾನಸಿಕ ಸ್ಥೈರ್ಯವನ್ನು ತುಂಬುತ್ತದೆ.

ಒಂದು ದಿನದಲ್ಲಿ 12 ಬಾರಿ ಅಪ್ಪಿಕೊಂಡರೇ , ಆ ದಿನವನ್ನು ಸಮಚಿತ್ತರಾಗಿ ಕಳೆಯಬಹುದು. ನಿಮ್ಮ ಪಾತ್ರರು ಅಥವಾ ನಿಮ್ಮ ಸಂಗಾತಿಯನ್ನು ಒಂದು ದಿನದಲ್ಲಿ 12 ಬಾರಿ ಅಪ್ಪಿಕೊಳ್ಳುವುದರಿಂದ ರಕ್ತದೊತ್ತಡ ಕಡಿಮೆಯಾಗುತ್ತದೆ. ಜೊತೆಗೆ ಒತ್ತಡದಲ್ಲಿರುವ ಮನಸ್ಸನ್ನು ಶಾಂತಗೊಳಿಸುತ್ತದೆ.

ಒಟ್ಟಾರೆ ನಮ್ಮ ಪ್ರೀತಿ ಪಾತ್ರರು ನಮ್ಮನ್ನು ಪ್ರೀತಿಯಿಂದ ಅಪ್ಪಿಕೊಳ್ಳುವುದರಿಂದ ಮನಸ್ಸು ಹಗುರಾಗಿ, ಮೂಡ್ ಬದಲಾವಣೆ ಆಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com