ಜೊಹರಲ: ಒಂದು ಕಾಸ್ಮೆಟಿಕ್ಯೂಟಿಕಲ್ಸ್ ಪ್ರೀಮಿಯಂ ಬ್ರ್ಯಾಂಡ್

ಮಹಿಳೆ, ಯಾವಾಗಲೂ ಇತರರ ಪೈಕಿ ತಾನು ಎದ್ದು ಕಾಣಿಸುವ ಹಾಗೆ ಮಾಡುವಂತಹ ಯಾವುದಾದರೂ ವಸ್ತುವನ್ನು ಎದುರು ನೋಡುತ್ತಾಳೆ
ಜೊಹರಲ ಸಮಿ ಡೈರೆಕ್ಟ್
ಜೊಹರಲ ಸಮಿ ಡೈರೆಕ್ಟ್

ಬೆಂಗಳೂರು: ಮಹಿಳೆ ಯಾವಾಗಲೂ ಇತರರ ಪೈಕಿ ತಾನು ಎದ್ದು ಕಾಣಿಸುವ ಹಾಗೆ ಮಾಡುವಂತಹ ಯಾವುದಾದರೂ ವಸ್ತುವನ್ನು ಎದುರು ನೋಡುತ್ತಾಳೆ ಮತ್ತು ಸೌಂದರ್ಯವರ್ಧಕಗಳ ಕಡೆ ಮಹಿಳೆಯರ ಆಕರ್ಷಣೆ ಈಗ ಮುಚ್ಚಿಟ್ಟ ನಿಜವೇನಲ್ಲ. ಈ ಹಿನ್ನೆಲೆಯಲ್ಲಿ ಭಾರತೀಯ ನಾರಿಯರಿಗಾಗಿ ಸಮಿ ಡೈರೆಕ್ಟ್ ಪರಿಚಯಿಸುತ್ತಿದೆ ‘ಜೊಹರ’ಲ, ಒಂದು ಪ್ರೀಮಿಯಂ ಬ್ರ್ಯಾಂಡ್. ಅತೀ ವೇಗವಾಗಿ ಮಾರಾಟವಾಗುವ ಕಂಪನಿಗಳ ಪೈಕಿ ಒಂದಾಗಿರುವ ಹಾಗೂ ಭಾರತೀಯ ಬಹುರಾಷ್ಟ್ರೀಯ ಆರೋಗ್ಯ ವಿಜ್ಞಾನ ಕಂಪನಿ ಸಮಿ ಲ್ಯಾಬ್ಸ್ ಲಿ.ನ ಅಂಗ ಸಂಸ್ಥೆ ಸಮಿ ಡೈರೆಕ್ಟ್, ಚರ್ಮದ ಆರೈಕೆ, ದೇಹದ ಆರೈಕೆ ಹಾಗೂ ದೇಹದ ಬಣ್ಣಕ್ಕೆ ಸಂಬಂಧಪಟ್ಟಂತಹ ಸರಣಿ ಉತ್ಪನ್ನಗಳನ್ನು ಒಳಗೊಂಡ ‘ಜೊಹರಲ’ - ಸೌಂದರ್ಯವರ್ಧಕಗಳ ವಿಜ್ಞಾನ’ ಎಂಬ ಶೀರ್ಷಿಕೆಯಡಿ ಮಹಿಳೆಯರ ಸೌಂದರ್ಯ ಹಾಗೂ ಚರ್ಮದ ತ್ವಚೆಯ ಉತ್ಪನ್ನಗಳ ಮಾರುಕಟ್ಟೆಗೆ ದೊಡ್ಡ ರೀತಿಯಲ್ಲಿ ಪ್ರವೇಶಿಸುತ್ತಿರುವುದನ್ನು ಇಂದು ಘೋಷಿಸಿತು.

ವಿಜ್ಞಾನ ಹಾಗೂ ಜಗತ್ತಿನಾದ್ಯಂತ ವಿವಿಧ ಸ್ಥಳಗಳಲ್ಲಿನ ಪುರಾಣಗಳಿಂದ ವಿಕಸನಗೊಳಿಸಿದ, ಆಯ್ದ ಪರಿಣಾಮಕಾರಿ ಸಸ್ಯ ಆಧಾರಿತ ಪದಾರ್ಥಗಳಿಂದ ತಯಾರಿಸಲ್ಪಟ್ಟ ಹಾಗೂ ಸಮಯ ಪರೀಕ್ಷೆಯಲ್ಲಿ ತನ್ನ ಈ ಎಲ್ಲಾ ನೂತನ ಉತ್ಪನ್ನಗಳು ಉತ್ತೀರ್ಣವಾಗಿದೆ ಎಂದು ಸಮಿ ತಿಳಿಸಿದೆ. ಅನೇಕ ವರ್ಷಗಳ ಕಾಲ, ಅತಿ ಎಚ್ಚರಿಕೆಯಿಂದ ನಡೆಸಲ್ಪಟ್ಟ ಸಂಶೋಧನೆಯಿಂದ ಸಿದ್ಧಗೊಂಡ ‘ಜೊಹರಲ’ ಎಂದರೆ ಅರಬ್ಬಿ ಭಾಷೆಯಲ್ಲಿ ‘ಆಭರಣ’ ಎಂದರ್ಥ. ಜೊತೆಗೆ ಈ ಉತ್ಪನ್ನಗಳು ವೈಜ್ಞಾನಿಕವಾಗಿಯೂ ಆಧಾರಿತವಾಗಿದ್ದು, ಇದರ ಫಲಿತಾಂಶ ಕೇವಲ ನಿಜವಾದ ಹಾಗೂ ಶುದ್ಧ ಸೌಂದರ್ಯ.

ಜೊಹರಲದ ಸರಣಿ ಉತ್ಪನ್ನಗಳನ್ನು ಸೌಂದರ್ಯ ಹಾಗೂ ಸೊಬಗಿಗೆ ಸಮರ್ಪಿಸಲಾಗಿದೆ. ಜೊತೆಗೆ ಈ ಉತ್ಪನ್ನಗಳು ಪ್ಯಾರಾಬೆನ್ಸ್, ಸಲ್ಫೇಟ್, ಸಿಂಥೆಟಿಕ್ ಡೈ ಅಥವಾ ಫಾರ್ಮಲ್‍ಡೀಹೈಡ್‍ನಂತಹ ರಾಸಾಯನಿಕಗಳಿಂದ ಮುಕ್ತವಾಗಿದ್ದು, ಪೇಟೆಂಟ್‍ಗಳನ್ನು ಹೊಂದಿರುವ ಫಾರ್ಮುಲಗಳಿವೆ. ಈ ಉತ್ಪನ್ನಗಳು ಚಿಕಿತ್ಸಾಪೂರಕ ಗುಣಮಟ್ಟ ಹೊಂದಿರುವ ಸಸ್ಯಗಳ ಸಾರದಿಂದ ಕೂಡಿದ್ದು, ಚರ್ಮ ವೈದ್ಯಕೀಯಶಾಸ್ತ್ರದ ಪ್ರಕಾರ ಪರಿಶೀಲಿಸಲಾಗಿದೆ ಹಾಗೂ ಇದು ಚರ್ಮಕ್ಕೆ ಯಾವುದೇ ರೀತಿ ಹಾನಿಯುಂಟು ಮಾಡುವುದಿಲ್ಲ. ಈ ಪೈಕಿ ಯಾವುದೇ ಉತ್ಪನ್ನವನ್ನು ಪ್ರಾಣಿಗಳ ಮೇಲೆ ಪ್ರಯೋಗಿಸಲಾಗಿಲ್ಲ. ಅತ್ಯುನ್ನತ ಪರಿಶೀಲನೆಗಳಿಗೆ ಒಳಪಟ್ಟ ನೈಸರ್ಗಿಕ ಸಸ್ಯಗಳಿಂದ ಪಡೆದಿರುವಂತಹ ಪದಾರ್ಥಗಳ ಬಳಕೆ, ಚರ್ಮದ ಬಣ್ಣ ಕುಂದುವುದು ಹಾಗೂ ಚರ್ಮ ಹಾನಿಯಾಗುವುದನ್ನು ತಪ್ಪಿಸುತ್ತದೆ.

ಮೊದಲ ಹಂತದ ಉತ್ಪನ್ನಗಳ ಬಿಡುಗಡೆಯಲ್ಲಿ ಜೊಹರಲ ದೇಹದ ಬಣ್ಣಕ್ಕೆ ಸಂಬಂಧಪಟ್ಟಂತಹ ಸೌಂದರ್ಯವರ್ಧಕಗಳು ಹಾಗೂ ದೇಹದ ಆರೈಕೆಯ ಜೊತೆಗೆ ಏಳು ಚರ್ಮದ ತ್ವಚೆಯನ್ನು ಹೆಚ್ಚಿಸುವಂತಹ ಉತ್ಪನ್ನಗಳನ್ನು ಪರಿಚಯಿಸುತ್ತಿದೆ. ಚರ್ಮದ ಆರೈಕೆಯ ಉತ್ಪನ್ನಗಳ ಪೈಕಿ, ಕ್ಲೀನ್ಸರ್‍ನೊಂದಿಗೆ ಜೊಹರಲ ಫೈಟೊಬ್ರೈಟ್‍ಖಿಒ ವೈಟೆನಿಂಗ್ ರೆಜೀಂ, ಮಾಸ್ಕ್, ಡಾರ್ಕ್ ಸ್ಪಾಟ್ ಸರಿಪಡಿಸುವ, ಎಸ್ಸೆನ್ಸ್, ಡೇ ಲೋಷನ್ ಎಸ್‍ಪಿಎಫ್ 20 ಹಾಗೂ ನೈಟ್ ಕ್ರೀಂಗಳು ಸೇರಿವೆ. ದೇಹದ ಬಣ್ಣಕ್ಕೆ ಸಂಬಂಧಪಟ್ಟ ಸೌಂದರ್ಯವರ್ಧಕ ಸರಣಿಯಡಿ ಜೊಹರಲದ 12 ಶೇಡ್‍ಗಳಿವೆ, ಕ್ರೀಂ ರಿಚ್ ಲಿಪ್ ಕಲರ್, ಜೊಹರಲದ 14 ಶೇಡ್‍ಗಳು ಪ್ರೋ ಶೈನ್ ಉಗುರು ಬಣ್ಣ,  ಜೊಹರಲ ಉಗುರಿನ ಬಣ್ಣ ತೆಗೆಯುವ ದ್ರವ. ದೇಹದ ಆರೈಕೆ ಸರಣಿಯಲ್ಲಿ, ಉಲ್ಲಾಸವನ್ನು ನೀಡುವಂತಹ ಸ್ನಾನದ ಸೋಪನ್ನು ಒಳಗೊಂಡಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಸಮಿ ಗ್ರೂಪ್‍ನ ಸ್ಥಾಪಕ & ವ್ಯವಸ್ಥಾಪಕ ನಿರ್ದೇಶಕ ಡಾ. ಮೊಹಮ್ಮದ್ ಮಾಜೀದ್ ಅವರು, “ಗ್ರಾಹಕರ ಸಂತೋಷವೇ ನಮ್ಮ ಮೊದಲ ಆದ್ಯತೆ. ಚರ್ಮದ ಆರೈಕೆಯ ಉತ್ಪನ್ನಗಳು, ವೈಯಕ್ತಿಕ ಖರೀದಿಯಾಗಿದ್ದು, ಪ್ರತಿಯೊಬ್ಬ ಗ್ರಾಹಕರು ನೈಸರ್ಗಿಕವಾಗಿ ತಮ್ಮ ದೇಹದ ಅಂದವನ್ನು ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಈ ರೀತಿ ಉತ್ಪನ್ನಗಳನ್ನು ಖರೀದಿಸುವರು ಎಂದು ನಮ್ಮಗೆ ತಿಳಿದಿದೆ. ಆದ್ದರಿಂದ ಚರ್ಮಕ್ಕೆ ಹಾನಿಯುಂಟು ಮಾಡುವಂತಹ ಕೇವಲ ರಾಸಾಯನಿಕಗಳಿಂದ ತಯಾರಿಸಲ್ಪಟ್ಟ ಸೌಂದರ್ಯವರ್ಧನೆಯ ಉತ್ಪನ್ನಗಳನ್ನು ಪರಿಚಯಿಸದಿರಲು ಎಚ್ಚರಿಕೆಯನ್ನು ವಹಿಸಬೇಕು. ಇದನ್ನು ಗ್ರಹಿಸಿಕೊಂಡು ನಾವು ಕಾಸ್ಮೆಕ್ಯೂಟಿಕಲ್ ವಿಭಾಗದಡಿ, ಆಯುವೇದಿಕ್ ಸಸ್ಯಗಳ ಸಕ್ರಿಯ ಅಂಶಗಳಿಂದ ತಯಾರಿಸಲ್ಪಟ್ಟ ಚರ್ಮದ ಆರೈಕೆ ಹಾಗೂ ಸೌಂದರ್ಯವರ್ಧಕಗಳ ಸರಣಿ ಉತ್ಪನ್ನಗಳನ್ನು ಪರಿಚಯಿಸುತ್ತಿದ್ದೇವೆ,” ಎಂದು ವಿವರಿಸಿದರು.

ಮಾರುಕಟ್ಟೆ ಸಂಶೋಧನೆ ಮಾಡುವ ಜಗತ್ತಿನ ಪ್ರಮುಖ ಸಂಸ್ಥೆ ಎಸಿ ನೀಲ್ಸನ್‍ನ ವರದಿಯ ಪ್ರಕಾರ, 2010ರಲ್ಲಿ ಭಾರತದ ವೈಟೆನಿಂಗ್ ಕ್ರೀಂ ಮಾರುಕಟ್ಟೆ 432 ದಶಲಕ್ಷ ಡಾಲರ್‍ಗಳಷ್ಟಿತ್ತು ಮತ್ತು ಇದು ಪ್ರತಿ ವರ್ಷ 18%ರಷ್ಟು ಹೆಚ್ಚಾಗುತ್ತಿದೆ. ಡಾಟಾಮಾನಿಟರ್ಸ್ ಕನ್ಸ್ಯೂಮರ್ ಸರ್ವೆ 2013ರಲ್ಲಿ, ಜಗತ್ತಿನಾದ್ಯಂತ 24 ವಿವಿಧ ಮಾರುಕಟ್ಟೆಗಳಲ್ಲಿ, 25,000ಕ್ಕೂ ಹೆಚ್ಚಿನ ಸಂಖ್ಯೆಯ ಗ್ರಾಹಕರನ್ನು ಒಳಗೊಂಡಂತೆ ನಡೆಸದ ಸಮೀಕ್ಷೆಯು, ಏಷ್ಯಾ ಖಂಡದಲ್ಲಿರುವ ಗ್ರಾಹಕರು ಚರ್ಮದ ಆರೈಕೆಗೆ ಸಂಬಂಧಪಟ್ಟ ಉತ್ಪನ್ನಗಳ ಶ್ರೇಣಿಯಡಿ, ಚರ್ಮದ ಬಣ್ಣ ತಿಳಿಗೊಳಿಸುವ/ಪ್ರಕಾಶಗೊಳಿಸುವ ಲಾಭಗಳಿರುವಂತಹ ಉತ್ಪನ್ನಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ ಎಂಬ ಅಂಶವನ್ನು ಸೂಚಿಸಿದೆ. ಪಾಶ್ಚಿಮಾತ್ಯ ಯೂರೊಪ್ ಹಾಗೂ ಉತ್ತರ ಅಮೇರಿಕ ಖಂಡಗಳಲ್ಲಿ, ಇದರ ಕಾಲುಭಾಗಕ್ಕಿಂತ ಕಡಿಮೆ ಸಂಖ್ಯೆಯ ಜನರು ಇದಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ. ಜೊಹರಲ ಶ್ರೇಣಿಯ ಉತ್ಪನ್ನಗಳು ಭಾರತದಾದ್ಯಂತ ವಿತರಕರ ಮೂಲಕ ಲಭ್ಯವಿದೆ.

ಸಮಿ ಡೈರೆಕ್ಟ್ ಕುರಿತು

2010ರಲ್ಲಿ ಸ್ಥಾಪಿತವಾದ ಸಮಿ ಡೈರೆಕ್ಟ್, ಭಾರತೀಯ ಬಹುರಾಷ್ಟ್ರೀಯ ಆರೋಗ್ಯ ವಿಜ್ಞಾನ ಕಂಪನಿ ಸಮಿ ಲ್ಯಾಬ್ಸ್ ಲಿ.ನ ಅಂಗಸಂಸ್ಥೆಯಾಗಿದ್ದು, ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನೇರ ಮಾರಾಟ ಕಂಪನಿಗಳ ಪೈಕಿ ಒಂದಾಗಿದೆ. ಪೇಟೆಂಟ್‍ವುಳ್ಳ ಫಾರ್ಮುಲಾಗಳಿರುವಂತಹ, ವಿವಿಧ ನ್ಯೂಟ್ರಾಕ್ಯೂಟಿಕಲ್ ಹಾಗೂ ಕಾಸ್ಮೆಕ್ಯೂಟಿಕಲ್ ಉತ್ಪನ್ನಗಳನ್ನು ಮೊಟ್ಟ ಮೊದಲ ಬಾರಿಗೆ ಪರಿಚಯಿಸಿದ ಹೆಗ್ಗಳಿಕೆ ಸಮಿ ಲ್ಯಾಬ್ಸ್ ಲಿ.ಗೆ ಸಲ್ಲುತ್ತದೆ.

ಸಮಿ ಡೈರೆಕ್ಟ್, ಎರಡೂವರೆ ದಶಕಗಳವರೆಗೆ, ನಿರಂತರ ಸಂಶೋಧನೆ ಹಾಗೂ ಅಭಿವೃದ್ಧಿಯ ಸಂಯೋಜನೆಯ ಫಲಿತಾಂಶವಾಗಿದೆ. ಸಂಸ್ಥೆಯು ಬೆಂಗಳೂರಿನಲ್ಲಿರುವ ಸಮಿ ಲ್ಯಾಬ್ಸ್ ಲಿ., ಎಂಬ ಹೆಸರಿನ ತನ್ನದೇ ಆದ ಸ್ವಂತ ಆರ್&ಡಿ ಸೌಲಭ್ಯವನ್ನು ಹೊಂದಿದೆ. ಇಲ್ಲಿ ಸುರಕ್ಷಿತ ಹಾಗೂ ಪರಿಣಾಮಕಾರಿಯಾದ ಉತ್ಪನ್ನಗಳನ್ನು ತಯಾರಿಸುವ ಸಂಬಂಧ ತೀವ್ರ ಸಂಶೋಧನಾ ಚಟುವಟಿಕೆಗಳು ನಡೆಯುತ್ತವೆ. ಈ ಅತ್ಯಾಧುನಿಕ, ಬಹುಶಿಸ್ತುಗಳನ್ನು ಹೊಂದಿರುವ ವಿಭಾಗದಲ್ಲಿ, ವಿವಿಧ ಕ್ಷೇತ್ರಗಳಲ್ಲಿ ಸಂಶೋಧನೆಯನ್ನು ಕೈಗೊಳ್ಳುವಂತಹ 120ಕ್ಕೂ ಹೆಚ್ಚಿನ ಸಂಖ್ಯೆಯ ವಿಜ್ಞಾನಿಗಳಿದ್ದಾರೆ ಮತ್ತು ಇವರೆಲ್ಲರೂ ಆಧುನಿಕ ವಿಜ್ಞಾನದ ಹಿನ್ನೆಲೆಯಿರುವಂತಹ ಸಾಂಪ್ರದಾಯಿಕ ಸಸ್ಯ ಆಧಾರಿತ ಔಷಧಗಳಿಂದ ಹೊಂದುವಂತಹ ಕ್ರಿಯಾಶೀಲ ಉತ್ಪನ್ನಗಳನ್ನು ಸೃಷ್ಟಿಸಲು ಶ್ರಮವಹಿಸುತ್ತಾರೆ. 96 ಪೇಟೆಂಟ್‍ಗಳನ್ನು ಪಡೆದಿರುವ ಸಂಸ್ಥೆ ಇನ್ನೂ ಹಲವಾರು ಪೇಟೆಂಟ್‍ಗಳನ್ನು ಹೊಂದುವ ಹಾದಿಯಲ್ಲಿದೆ. ಸಮಿ ಡೈರೆಕ್ಟ್‍ನ ಎಲ್ಲಾ ಉತ್ಪನ್ನಗಳು ಜಾಗತಿಕ ಗುಣಮಟ್ಟಗಳ ಪ್ರಕಾರದ ಸೂತ್ರಗಳನ್ನು ಹೊಂದಿದೆ.

‘ಜೊಹರಲ’ – ಚರ್ಮದ ಆರೈಕೆ, ದೇಹದ ಆರೈಕೆ & ದೇಹದ ಬಣ್ಣಕ್ಕೆ ಸಂಬಂಧಪಟ್ಟ ಸೌಂದರ್ಯವರ್ಧನೆ ಉತ್ಪನ್ನಗಳ ಮೂಲಕ ಮಹಿಳಾ ಸೌಂದರ್ಯ ಮಾರುಕಟ್ಟೆಗೆ ‘ಸಮಿ ಡೈರೆಕ್ಟ್’ ಪ್ರವೇಶ

•    ಬ್ರ್ಯಾಂಡ್ ಹೆಸರು ‘ಜೊಹರಲ - ಸೌಂದರ್ಯವರ್ಧಕಗಳ ವಿಜ್ಞಾನ’, ಅಂದರೆ ಅರಬ್ಬಿ ಭಾಷೆಯಲ್ಲಿ ‘ಆಭರಣ’ ಎಂದರ್ಥ
•    ಮೊದಲನೆಯ ಹಂತದಲ್ಲಿ ಬಿಡುಗಡೆ ಮಾಡಲಾಗುತ್ತಿರುವ ಉತ್ಪನ್ನಗಳ ಪೈಕಿ ಏಳು ಚರ್ಮದ ಆರೈಕೆಯ ಉತ್ಪನ್ನಗಳು, ಮೂರು ದೇಹದ ಬಣ್ಣಕ್ಕೆ ಸಂಬಂಧಪಟ್ಟಂತಹ ಸೌಂದರ್ಯವರ್ಧಕಗಳು ಹಾಗೂ ಒಂದು ದೇಹದ ಆರೈಕೆಗೆ ಸಂಬಂಧಪಟ್ಟ ಉತ್ಪನ್ನ ಸೇರಿದೆ.

ಸಮಿ ಡೈರೆಕ್ಟ್, ಜಹೊರಲ ಬ್ರ್ಯಾಂಡ್ ಹೆಸರಿನಡಿ, ನ್ಯೂಟ್ರಾಕ್ಯೂಟಿಕಲ್ ಉತ್ಪನ್ನ ಶ್ರೇಣಿಯಡಿ ಬಯೊಪ್ರೊಟೆಕ್ಟೆಂಟ್™, ಕ್ಯಾಲ್ಸಿ ಡಿ ಮ್ಯಾಕ್ಸ್™, ಕ್ರನ್ ಡಿಎಂ ಪ್ಲಸ್™, ಸಿಒಕ್ಯೂ ಎನರ್ಜೈಸರ್™, ಕರ್‍ಕ್ಯೂಮಿನ್ ಸಿ3 ಪವರ್™, ಗ್ಲೈಕಾಕೇರ್™,  ಐಜಿಜಿ ಪ್ಲಸ್™, ಲೀನ್‍ಗಾರ್ಡ್™, ಲೀನ್‍ಗಾರ್ಡ್™, ಪ್ರೋಟಿನ್ ಪೇಯದ ಮಿಶ್ರಣ™, ಲಿವ್‍ಸ್ಟ್ರಾಂಗ್™, ಲೈಕೊಪೆನ್™, ಮಾಕ್ಯೂಮ್ಯಾಕ್ಸ್™, ಮಾಯ್ಸಚರೈಸಿಂಗ್ ಕ್ರೀಂ™, ಒಮೆಗಾ ಬಯೊಪ್ಲಸ್™, ಆಗ್ರ್ಯಾನಿಕ್ ಸ್ಪಿರುಲಿನಾ™, ಆಸ್ಟಿಯೊಸ್ಟ್ರಾಂಗ್™, ಆರ್3 ಪವರ್™, ಟಾಕ್ಸಿಫ್ಲಶ್™, ವಿಟಾ ಅಗತ್ಯಗಳು ಹಾಗೂ ಕಾಸ್ಮೆಕ್ಯೂಟಿಕಲ್ ಉತ್ಪನ್ನಗಳ ಸರಣಿಯನ್ನು ಹೊಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com