ನಾಚಿಕೆ ಮುಳ್ಳಿನ ಗಿಡ ವಿಫುಲ, ವಿಶಿಷ್ಟ ರಾಸಾಯನಿಕಗಳ ಭಾರದಿಂದ ಬಾಗಿದೆಯೇನೋ ಎಂದೆನೆಸುತ್ತದೆ. ಇದರ ನಸು ಗುಲಾಬಿ ವರ್ಣದ ಹೂಗಳು, ಚಳಿಗಾಲದಲ್ಲಿರುವ ಬೀಜಯುಕ್ತ ಕಾಯಿ. ಸಣ್ಣ ಎಲೆಗಳು ಬೇರುಗಳು, ಬಳ್ಳಿಯಂಥ ಗಿಡಗಳೆಲ್ಲವೂ ವಿವಿಧ ವ್ಯಾಧಿಗಳಿಗೆ ಸಿದ್ಧೌಷಧ ಗೋತ್ತಾ?
ಹಲವೆಡೆ ಕೃಷಿ ಭೂಮಿಗೆ ಕಾಲಿಟ್ಟರೆ ಚುಚ್ಚಿಕೊಳ್ಳುವ ನಾಚಿಕೆಮುಳ್ಳು ದಿವ್ಯ ಔಷಧವಾಗಿ ಪುರಾತನ ಕಾಲದಿಂದಲೂ ವಿವಿಧ ವ್ಯಾಧಿಗಳನ್ನು ನಿವಾರಿಸುತ್ತದೆ. ಚರಕ, ಸುಶ್ರುತರಂಥ ಆಯುರ್ವೇದ ಸಂಶೋಧಕರೂ ಇದರ ಗುಣವಿಶೇಷಗಳನ್ನು ವರ್ಣಿಸಿದ್ದರು.
ಎತ್ತರದಿಂದ ಬಿದ್ದು ಉಳುಕಿದರೆ ಎಲುಬು ಮುರಿದಿದ್ದರೆ ನಾಚಿಕೆ ಮುಳ್ಳಿನ ಆಮೂಲಾಗ್ರ ಭಾಗಗಳನ್ನು ನಿಂಬೆರಸದಲ್ಲಿ ಅರೆದು ಬಿಸಿಮಾಡಿ ಲೇಪಿಸಬೇಕು. ಆಗ ನೋವು ಮಾಯವಾಗಿ ಎಲುಬಿನ ಸಂದುಗೂಡಿಸುವಲ್ಲಿ ಮುಖ್ಯ ಪಾತ್ರವಹಿಸುತ್ತದೆ. ಇದೇ ಲೇಪನ ಪೈಲ್ಸ್, ವ್ರಣ, ಗಾಯಗಳನ್ನೂ ಗುಣಪಡಿಸುತ್ತದೆ. ಬೀಜವೂ ಸೇರಿದಂತೆ ಈ ಗಿಡದ ಐದು ಭಾಗಗಳ ರಸ ಸೇವನೆ ರಕ್ತಪಿತ್ಥವನ್ನೂ ಶಮನಗೊಳಿಸುತ್ತದೆ.
ಈ ರಸಕ್ಕೆ ಜೀರಿಗೆ ಹುಡಿ ಬೆರೆಸಿ ಅರ್ಧ ಔನ್ಸ್ ಪ್ರಮಾಣದಲ್ಲಿ ದಿನಕ್ಕೆ ಮೂರು ಸಲ ಸೇವಿಸಿದರೆ ಉರಿ ಮೂತ್ರ, ಮೂತ್ರಬಂಧ ಮೊದಲಾದ ಮೂತ್ರ ದೋಷಗಳನ್ನೂ ನಿವಾರಿಸಬಹುದು. ಜಾನುವಾರುಗಳಿಗೆ ಅಕಾಲದಲ್ಲಿ ಗರ್ಭ ಹೊರಗೆ ಬರುವ ಪ್ರಸಂಗವಿದ್ದಲ್ಲಿ ನಾಚಿಕೆಮುಳ್ಳಿನ ಇಡೀ ಗಿಡವನ್ನು ಸಣ್ಣದಾಗಿ ಕತ್ತರಿಸಿ ತೌಡು ಅಥವಾ ಅಕ್ಕಿಯೊಂದಿಗೆ ಬೇಯಿಸಿ ಆರನೇ ತಿಂಗಳಿಡೀ ನೀಡುತ್ತಿದ್ದರೆ ಸಮಸ್ಯೆ ಪರಿಹಾರ. ಪ್ರಸವ ಕಾಲದ ನಂಜನ್ನು ನಿವಾರಿಸಿ ಅಧಿಕ ಹಾಲು ನೀಡಲೂ ಇದು ಸಹಕಾರಿ. ಆಡುಗಳಿಗೆ ಈ ಗಿಡ ಪ್ರಿಯ ಆಹಾರ.
ಈ ಗಿಡ ಬೇರಿನಲ್ಲಿ ಶೇ.50ರಷ್ಟು ಪೊಟ್ಯಾಷ್ ಮತ್ತು ಟ್ಯಾನಿನ್ ಅಂಶವಿದೆಯಲ್ಲದೆ ಮಿನೋಸಿನ್ ಕ್ಷಾರವಿದೆ. ಕಹಿ ರುಚಿಯ ಬೀಜಕ್ಕೆ ಕಟುವಿಪಾಕ, ಲಘುರೂಕ್ಷ ಗುಣವಿದ್ದು ವಾತ, ಪಿತ್ಥ, ಕಫಗಳೆಂಬ ತ್ರಿದೋಷ ನಾಶಕವಾಗಿದೆ.
ರಕ್ತಶೋಧಕ ಸಾಮರ್ಥ್ಯಮೊರುವ ಈ ಗಿಡ ಮೂಗಿನ ರಕ್ತಸ್ರಾವ ತಡೆದು ಚಿಕ್ಕ ಲೋಮನಾಳಗಳನ್ನು ಸಂಕುಚಿತಗೊಳಿಸುತ್ತದೆ.
ಅತಿಸಾರ, ಎದೆನೋವು, ಮೂಲವ್ಯಾಧಿ, ಸ್ತ್ರೀರೋಗಗಳು, ಮಧುಮೇಹಕ್ಕೂ ಇದು ಒಳ್ಳೆಯದು. ಪುರುಷರ ಶಕ್ತಿಹ್ರಾಸ ತಡೆದು ನವಚೈತನ್ಯ ನೀಡಲು ಸಹಕಾರಿ.
ಬಿದ್ದು ಕೈಕಾಲುಗಳ ಎಲುಬುಗಳಿಗೆ ಘಾಸಿಯಾಗಿದ್ದರೆ ಸಮೂಲಾಗ್ರ ನಾಚಿಕೆ ಗಿಡ ಮತ್ತು ಸಾಸಿವೆ ಸೇರಿಸಿ ತೈಲ ತಯಾರಿಸಿ ಹಚ್ಚುವುದರಿಂದ ಶೀಘ್ರ ಗುಣವಾಗುತ್ತದೆ.
Advertisement