ಸೂತ್ರ ಪಾಲಿಸಿ

ವಿಮೆ ಕಂಪನಿಗಳು ಸಂದರ್ಭ ಮತ್ತು ವಿವಿಧತೆಗೆ ಅನುಗುಣವಾಗಿ ನಿಮ್ಮನ್ನು ಬೆಂಬಲಿಸಬಲ್ಲ ಆರೋಗ್ಯ ವಿಮೆ ಯೋಜನೆಗಳನ್ನು ಗ್ರಾಹಕನ ಮುಂದಿಡುತ್ತದೆ.
ಆರೋಗ್ಯ ವಿಮೆ (ಸಂಗ್ರಹ ಚಿತ್ರ)
ಆರೋಗ್ಯ ವಿಮೆ (ಸಂಗ್ರಹ ಚಿತ್ರ)

ವಿಮೆ ಕಂಪನಿಗಳು ಸಂದರ್ಭ ಮತ್ತು ವಿವಿಧತೆಗೆ ಅನುಗುಣವಾಗಿ ನಿಮ್ಮನ್ನು ಬೆಂಬಲಿಸಬಲ್ಲ ಆರೋಗ್ಯ ವಿಮೆ ಯೋಜನೆಗಳನ್ನು ಗ್ರಾಹಕನ ಮುಂದಿಡುತ್ತದೆ.

ಆದರೆ, ಇದಕ್ಕಿಂತ ಮುಖ್ಯವಾಗಿ ಗ್ರಾಹಕನು ಪಾಲಿಸಿ ಕೊಳ್ಳುವ ಮುನ್ನ ಯೋಜನೆ ಬಗ್ಗೆ ಅರ್ಥ ಮಾಡಿಕೊಳ್ಳುವುದು ಮತ್ತು ವಿಶೇಷ ಸಂದರ್ಭಗಳ ಬಗ್ಗೆ ತಿಳಿದುಕೊಳ್ಳುವುದು ಅತೀ ಅಗತ್ಯ. ಮೊದಲ ಬಾರಿಗೆ ಆರೋಗ್ಯ ವಿಮೆ ಪಡೆಯುವವರು ಈ ಕೆಳಗಿನ 5 ಅಂಶಗಳ ಬಗ್ಗೆ ತಿಳಿದುಕೊಳ್ಳಿ.

ವಿಮೆ ಮೊತ್ತ ಎಷ್ಟು?
ಆರೋಗ್ಯ ವಿಮೆ ಕೊಳ್ಳುವ ಮುನ್ನ ನಿಮ್ಮ ಕುಟುಂಬದ ಒಟ್ಟು ಆದಾಯ ಮತ್ತು ಖರ್ಚುಗಳ ನಿಖರ ಮಾಹಿತಿಯಿರಲಿ. ಕುಟುಂಬದ ಸದಸ್ಯರ ಆರೋಗ್ಯ ಸ್ಥಿತಿ ಹಿಂದೆ ಹೇಗಿತ್ತು, ಈಗ ಹೇಗಿದೆ, ಮುಂದೆ ಏನೆಲ್ಲಾ ಅಗತ್ಯತೆ ಉಂಟಾಗಬಹುದು ಎಂಬುದನ್ನು ತಿಳಿದು ದೀರ್ಘಕಾಲದ ರಕ್ಷಣೆ ಪಡೆಯಿರಿ. ನೀವು ಚಿಕಿತ್ಸೆ ಪಡೆಯಬಹುದಾದ ಆಸ್ಪತ್ರೆಯ ಸ್ಥಿತಿಗತಿ, ತುರ್ತು ಸಂದರ್ಭದಲ್ಲಿ ಚಿಕಿತ್ಸೆಗೆ ತಗಲಬಹುದಾದ ವೆಚ್ಚವನ್ನು ವಿಮೆ ಭರಿಸುವಂತಿರಲಿ.

ಎಷ್ಟು ಪಾವತಿಸುತ್ತೀರಿ?
ಆರೋಗ್ಯ ವಿಮೆ ಕೊಳ್ಳುವ ಮುನ್ನ ವರ್ಷಕ್ಕೆ ನೀವು ಎಷ್ಟು ಪಾವತಿಸಬಹುದು ಎಂಬ ಬಗ್ಗೆ ಗಮನಹರಿಸಿ. ಯೋಜನೆಯ ಕಂತುಗಳು, ಕಡಿತಗಳು ಮತ್ತು ವ್ಯಾಪ್ತಿಯ ವಿಚಾರದಲ್ಲಿ ಬಹಳಷ್ಟು ಬದಲಾವಣೆಗಳಿರುತ್ತದೆ. ಕೆಲವು ಸಂಪೂರ್ಣ ವೈದ್ಯಕೀಯ ವೆಚ್ಚವನ್ನು ಭರಿಸಿದರೆ, ಕಡಿಮೆ ಕಂತಿನ ಕೆಲವು ಯೋಜನೆಗೆಳಲ್ಲಿ ನಿಮ್ಮ ಕಿಸೆಯಿಂದಲೂ ಹಣ ಪಾವತಿಸಲು ಅವಕಾಶವಿದೆ.

ವಿಮಾ ವ್ಯಾಪ್ತಿ ನೋಡಿಕೊಳ್ಳಿ
ವಿಮಾ ಕಂಪನಿಗಳು ಗ್ರಾಹಕರ ನಿರಂತರ ಆರೋಗ್ಯ ತಪಾಸಣೆ ಮತ್ತು ಮೌಲ್ಯವರ್ಧಿತ ಸೇವಾ ಸೌಲಭ್ಯವನ್ನು ಒಳಗೊಂಡಿರುತ್ತದೆ. ವಿಮಾ ಕಂತುಗಳನ್ನು ಹೊಂದಾಣಿಕೆ ಮಾಡಿಕೊಂಡು ವಿಮೆಯೋಜನೆ ಆಯ್ಕೆ ಮಾಡುವ ಬದಲು ಅದರ ಸಂಪೂರ್ಣ ಮಾಹಿತಿ ಪಡೆದು ಆಯ್ಕೆ ಮಾಡಿಕೊಳ್ಳಿ. ವಿಮೆಗೆ ನೀಡುವ ದಾಖಲೆಗಳನ್ನು ಸರಿಯಾಗಿ
ಓದಿಕೊಳ್ಳಿ. ಅವಧಿ ಮತ್ತು ನಿಯಮಗಳ ಬಗ್ಗೆ ಮಾಹಿತಿ ಇರಲಿ.

ಸೇವಾ ಮಟ್ಟ ಹೇಗಿದೆ?
ವಿಮಾ ಯೋಜನೆಗಳನ್ನು ಪರಿಶೀಲಿಸುವುದು, ಹೋಲಿಸಿ ನೋಡುವುದು ಅವಶ್ಯಕ. ಅದ್ದರಿಂದ ಕ್ಲೈಮ್ ಪಾವತಿ ಮೊತ್ತ, ಅವಧಿ ಯಾವ ಆಸ್ಪತ್ರೆಯಲ್ಲಿ ಸೇವಾ ಸೌಲಭ್ಯವಿದೆ ಮೊದಲಾದ ವಿಚಾರಗಳ ಪರಿಶೀಲನೆ ಅಗತ್ಯ. ಇದಕ್ಕಾಗಿ ವೆಬ್ ಸೈಟ್‍ನಲ್ಲಿ ಮಾಹಿತಿಗಳಿರುತ್ತದೆ.

ಸೂಕ್ತ ವಯಸ್ಸಿನಲ್ಲಿ ಖರೀದಿಸಿ
ಆರೋಗ್ಯ ವಿಮೆಯನ್ನು ಸಣ್ಣ ವಯಸ್ಸಿನಲ್ಲೇ ಪಡೆದರೆ ಉತ್ತಮ. ಏಕೆಂದರೆ ಇದು ಕಡಿಮೆ ಕಂತು ಮತ್ತು ಹೆಚ್ಚು ಸೌಲಭ್ಯವನ್ನು ಒದಗಿಸುತ್ತದೆ. ಆರೋಗ್ಯ ವಿಮೆಯನ್ನು ಕೊಳ್ಳುವ ಮುನ್ನ ಈ ಅಂಶಗಳನ್ನು ಗಮನದಲ್ಲಿಟ್ಟುಕೊಂಡರೆ ಆಯ್ಕೆ ಸುಲಭವಾಗಬಹುದು. ಅತೀ ಶೀಘ್ರದಲ್ಲಿ ಉತ್ತಮವಾದ ಪಾಲಿಸಿ ಆಯ್ಕೆ ಮಾಡಿಕೊಳ್ಳಿ.

ಆರೋಗ್ಯಕರ ಜೀವನ ನಿಮ್ಮದಾಗಲಿ.?
(ಲೇಖಕರು ಲ್ಯಾಂಬೋರ್ಡ್ ಜಿಐಸಿ
ಲಿಮಿಟೆಡ್‍ನ ಐಸಿಐಸಿಐ ಹೆಲ್ತ್ ಅಂಡರ್ವೈಟಿಂಗ್
ಆ್ಯಂಡ್ ಕ್ಲೈಮ್ಸ್ ವಿಭಾಗದ ಉಪಾಧ್ಯಕ್ಷ)?
-ಅಮಿತ್ ಭಂಡಾರಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com