ಜಿನೀವಾ: 2030ರ ವೇಳೆಗೆ ಜಗತ್ತು ಏಡ್ಸ್ ರೋಗದಿಂದ ಮುಕ್ತವಾಗಲಿದೆ ಎಂದು ವಿಶ್ವಸಂಸ್ಥೆ ತಿಳಿಸಿದೆ.
ಭಾರತ ಸೇರಿದಂತೆ ಅತಿ ಹೆಚ್ಚು ಎಚ್ ಐವಿ ಸೋಂಕು ಪೀಡಿತ 5 ರಾಷ್ಟ್ರಗಳಲ್ಲಿ ಕಳೆದ 15 ವರ್ಷಗಳಿಂದ 30 ದಶಲಕ್ಷ ಸೋಂಕಿತರು ಗುಣಮುಖರಾಗಿದ್ದಾರೆ ಎಂದು ತಿಳಿಸಿದೆ.
ಮಾರ್ಚ್ 15, 2015ರ ವೇಳೆಗೆ ಸುಮಾರು 15 ಮಿಲಿಯನ್ ಜನತೆ ಜೀವರಕ್ಷಕ ಎಚ್ ಐವಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. 2000 ನೇ ಇಸವಿಯಿಂದ ಇಲ್ಲಿಯವರೆಗೂ ಏಡ್ಸ್ ಗೆ ಬಲಿಯಾಗಬಹುದಾಗಿದ್ದ 8 ಮಿಲಿಯನ್ ಮಂದಿಗೆ ಸೋಂಕು ನಿವಾರಣೆ ಮಾಡಲಾಗಿದೆ ಎಂದು ಹೇಳಿದೆ. 2000-2014 ರ ನಡುವೆ ಸುಮಾರು 83 ದೇಶಗಳಲ್ಲಿ ಹೊಸದಾಗಿ ಸೋಂಕು ತಗುಲುವ ಪ್ರಮಾಣ ಶೇ. 35 ರಷ್ಟು ಪ್ರಮಾಣ ಕಡಿಮೆಯಾಗಿದೆ.
ದಕ್ಷಿಣ ಆಫ್ರಿಕಾ, ಭಾರತ, ಮೊಜಾಂಬಿಕ್, ನೈಜಿರೀಯಾ, ಮತ್ತು ಜಿಂಬಾಬ್ವೆಗಳಲ್ಲಿದ್ದ ಎಚ್ ಐವಿ ಸೋಂಕಿನ ಪರಿಸ್ಥಿತಿ ಈಗ ವ್ಯತಿರಿಕ್ತವಾಗಿದೆ. ಅತಿ ಹೆಚ್ಚು ಸೋಂಕು ತಗುಲುತ್ತಿದ್ದ ದಕ್ಷಿಣ ಆಫ್ರಿಕಾದಲ್ಲಿ ಕಳೆದ 15 ವರ್ಷಗಳಲ್ಲಿ ಸೋಂಕಿನ ಪ್ರಮಾಣ ಶೇ.41 ಕ್ಕೆ ಇಳಿದಿದೆ.
ಪ್ರಪಂಚಾದ್ಯಂತ ಸುಮಾರು 22 ಮಿಲಿಯನ್ ಜನತೆ ಎಚ್ ಐವಿ ಪೀಡಿತರಾಗಿ ಜೀವನ ನಡೆಸುತ್ತಿದ್ದು ಇದುವರೆಗೂ ಆಂಟಿ ರೆಟ್ರೋವೈರಲ್ ಚಿಕಿತ್ಸೆ ಪಡೆಯದಯೆ ಹಾಗೇ ಬದುಕುತ್ತಿದ್ದಾರೆ.
ಭಾರತದಲ್ಲಿ 7,85,151 ವಯಸ್ಕರು ಹಾಗೂ 11,724 ಗರ್ಭಿಣಿಯರು 2014 ರಲ್ಲಿ ಈ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಜೊತೆಗೆ 1 ರಿಂದ 14 ವರ್ಷದ ಸುಮಾರು 45.546 ಮಕ್ಕಳು ರೆಟ್ರೋ ವೈರಲ್ ಥೆರಪಿ ಪಡೆದುಕೊಂಡಿದ್ದಾರೆ ಎಂದು ತಿಳಿಸಿದೆ.
Advertisement