ಮೈಗ್ರೇನ್ ಮಹಿಳೆಯರನ್ನೇ ಹೆಚ್ಚು ಕಾಡುವುದೇಕೆ?

ಮೈಗ್ರೇನ್ ಮಹಿಳೆಯರಲ್ಲೇ ಹೆಚ್ಚಿಗೆ ಕಾಣಿಸಿಕೊಳ್ಳುವುದೇಕೆ ಎಂಬುದಕ್ಕೆ ಕೆನಡಾದಲ್ಲಿ ನಡೆದ ಸಮೀಕ್ಷೆಯಲ್ಲಿ ಉತ್ತರ ಕಂಡುಕೊಳ್ಳಲಾಗಿದೆ.
ಮೈಗ್ರೇನ್(ಸಂಗ್ರಹ ಚಿತ್ರ)
ಮೈಗ್ರೇನ್(ಸಂಗ್ರಹ ಚಿತ್ರ)

ವಾಷಿಂಗ್ ಟನ್: ಮನುಷ್ಯನನ್ನು ಅಶಕ್ತಗೊಳಿಸುವ 20 ರೀತಿಯ ರೋಗಗಳ ಪೈಕಿ ಮೈಗ್ರೇನ್ ಕೂಡಾ ಒಂದಾಗಿದ್ದು, ಇತ್ತೀಚಿನ ದಿನಗಳಲ್ಲಿ ಈ ಸಮಸ್ಯೆ ಸಾಮಾನ್ಯವಾಗಿದೆ. ಅಮೇರಿಕಾ ಒಂದರಲ್ಲೇ 36 ಮಿಲಿಯನ್ ಗೂ ಹೆಚ್ಚು ಜನರು ಮೈಗ್ರೇನ್ ನಿಂದ ಬಳಲುತ್ತಿದ್ದಾರೆ. ಈ ಪೈಕಿ ಪುರುಷರಿಗಿಂತ ಮೂರು ಪಟ್ಟು ಹೆಚ್ಚು ಮಹಿಳೆಯರೇ ಹೆಚ್ಚು ಮೈಗ್ರೇನ್ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಕೆನಡಾದಲ್ಲಿ ನಡೆದ ಸಮೀಕ್ಷೆಯಲ್ಲಿ ಈ ವಿಷಯವನ್ನು ಕಂಡುಕೊಳ್ಳಲಾಗಿದ್ದು ಮೈಗ್ರೇನ್ ಮಹಿಳೆಯರಲ್ಲೇ ಹೆಚ್ಚಿಗೆ ಕಾಣಿಸಿಕೊಳ್ಳುವುದಕ್ಕೆ  ಅವರು ಬಾಲ್ಯದಲ್ಲಿ ಎದುರಿಸಿದ್ದ ಪೋಷಕರ ದೌರ್ಜನ್ಯ ಕಾರಣವಾಗುತ್ತದೆ. ಜರ್ನಲ್ ಆಫ್  ಸೈಕೋಸೊಮಾಟಿಕ್ ನಲ್ಲಿ ಪ್ರಕಟವಾದ ಸಂಶೋಧನಾ ವರದಿಯೂ ಮೈಗ್ರೇನ್ ಗೆ ತುತ್ತಾಗಿರುವ ಮಹಿಳೆಯರು ಬಾಲ್ಯದಲ್ಲಿ ಬಾಲ್ಯದ ಮಾನಸಿಕ ಕಿರುಕುಳ ಎದುರಿಸಿರುತ್ತಾರೆ ಎಂದು ಹೇಳಿದೆ.

ಮಾನಸಿಕ ಕುರುಕುಲ ಮಾತ್ರ ಅಲ್ಲದೇ ದೈಹಿಕ ಕಿರುಕುಳವೂ ಸಹ ಮೈಗ್ರೇನ್ ಹೆಚ್ಚಾಗಲು ಕಾರಣವಾಗಿರುತ್ತದೆ. 2012 ರಲ್ಲಿ ನ್ಯೂರಾಲಜಿ ಜರ್ನಲ್ ನಲ್ಲಿ ಪ್ರಕಟವಾಗಿದ್ದ ಡಾನ್ ಬ್ಯೂಸ್ ಅವರ ವರದಿಯಲ್ಲಿ ಆಘಾತದ ನಂತರದ ಉಂಟಾಗುವ ಒತ್ತಡಕ್ಕೂ ಮೈಗ್ರೇನ್ ಗೂ ಸಾಮ್ಯತೆ ಇದೆ ಎಂದು ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com