ಅತಿ ಹೆಚ್ಚು ಕ್ರಿಯಾತ್ಮಕತೆಯಿಂದಲೂ ಆರೋಗ್ಯಕ್ಕೆ ಹೆಚ್ಚಿನ ಹಾನಿ?

ನೀವು ಹೆಚ್ಚು ಕ್ರಿಯಾತ್ಮಕ ವ್ಯಕ್ತಿತ್ವ ಹೊಂದಿದ್ದೀರಾ? ಹಾಗಾದರೆ ನಿಮಗೆ ಸ್ಕಿಜೋಫ್ರೇನಿಯಾ, ಬೈಪೋಲಾರ್ ಡಿಸಾರ್ಡರ್ ಉಂಟಾಗುವ ಸಾಧ್ಯತೆ ಇದೆ.
ಅತಿ ಹೆಚ್ಚು ಕ್ರಿಯಾತ್ಮಕತೆಯಿಂದಲೂ ಆರೋಗ್ಯಕ್ಕೆ ಹೆಚ್ಚಿನ ಹಾನಿ?

ವಾಷಿಂಗ್ಟನ್: ನೀವು ಹೆಚ್ಚು ಕ್ರಿಯಾತ್ಮಕ ವ್ಯಕ್ತಿತ್ವ ಹೊಂದಿದ್ದೀರಾ? ಹಾಗಾದರೆ  ನಿಮಗೆ ಸ್ಕಿಜೋಫ್ರೇನಿಯಾ, ಬೈಪೋಲಾರ್ ಡಿಸಾರ್ಡರ್ ಉಂಟಾಗುವ ಸಾಧ್ಯತೆ ಇದೆ.

ಕಿಂಗ್ಸ್ ಕಾಲೇಜ್ ನಿಂದ ನಡೆಸಿರುವ ಸಂಶೋಧನೆ ಪ್ರಕಾರ,  ವಂಶವಾಹಿಗಳ ಸೃಜನಶೀಲತೆ ಮೇಲೆ ಸ್ಕಿಜೋಫ್ರೇನಿಯಾ, ಬೈಪೋಲಾರ್ ಡಿಸಾರ್ಡರ್ ನೇರ ಪ್ರಭಾವ ಉಂಟಾಗಲಿದೆ. ವೈಜ್ಞಾನಿಕ ಉದ್ದೇಶದಿಂದ ಸೃಜನಶೀಲತೆಯ ಮಿತಿ ನಿರ್ಧರಿಸುವುದು ಕಷ್ಟ ಸಾಧ್ಯವಾದರೂ, ಗ್ರಹಿಕೆ ಪ್ರಕ್ರಿಯೆಯಲ್ಲಿ  ವಿನೂತನ ಮಾರ್ಗವನ್ನು ಅನುಸರಿಸುವ ವ್ಯಕ್ತಿಗಳನ್ನು ಕ್ರಿಯಾತ್ಮಕ ವ್ಯಕ್ತಿತ್ವದವರೆಂದು ಪರಿಗಣಿಸಲಾಗಿದೆ.  

ಸ್ಕಿಜೋಫ್ರೇನಿಯಾ,  ಬೈಪೋಲಾರ್ ಡಿಸಾರ್ಡರ್ ಎಂಬುದು ಆಲೋಚನೆ ಮತ್ತು ಭಾವನೆಗಳ ಅಸ್ವಸ್ಥತೆಗಳಾಗಿದ್ದು, ಈ ರೀತಿಯ ಅಸ್ವಸ್ಥತೆಗೆ ಒಳಗಾದ ವ್ಯಕ್ತಿಯಲ್ಲಿ ಅರಿವಿನ ಮತ್ತು ಭಾವನಾತ್ಮಕ ಪ್ರಕ್ರಿಯೆಯನ್ನು ಬದಲಾವಣೆಗಳು ಕಂಡುಬರುತ್ತವೆ.

ಸ್ಕಿಜೋಫ್ರೇನಿಯಾ, ಬೈಪೋಲಾರ್ ಡಿಸಾರ್ಡರ್  ಆನುವಂಶಿಕವಾಗಿ ಕಾಡುವ ಅಪಾಯ ಇದೆ ಎಂದು ಸಂಶೋಧನೆ ವೇಳೆ ತಿಳಿದುಬಂದಿದೆ. ಕ್ರಿಯಾತ್ಮಕ ವ್ಯಕ್ತಿಗಳಿಗೆ ವಿಭಿನ್ನವಾಗಿ ಯೋಚಿಸುವುದು ಅನುವಂಶಿಕ ಮನೋವೃತ್ತಿಯಾಗಿದ್ದು, ಇದೂ ಸಹ ಪರಿಸರದ ಅಂಶಗಳೊಂದಿಗೆ ಮಾನಸಿಕ ಅಸ್ವಸ್ಥತೆಯ ಕಾರಣವಾಗಬಹುದಾದ ಒಂದು ಅಂಶ ಎಂದು ಖ್ಯಾತ ಲೇಖಕ ರಾಬರ್ಟ್ ಪವರ್ ಹೇಳಿದ್ದಾರೆ. ನೇಚರ್ ನ್ಯುರೊಸೈನ್ಸ್ ಎಂಬ ಪತ್ರಿಕೆಯಲ್ಲಿ ಈ ಸಂಶೋಧನಾ ವರದಿ ಪ್ರಕಟವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com