ಸುಂದರ ತ್ವಚೆಗೆ ಪಂಚ ಸೂತ್ರಗಳು

ಮಹಿಳೆಯರಿಗೆ ಸೌಂದರ್ಯ ಪ್ರಜ್ಞೆ ಹೆಚ್ಚು. ಹೀಗಾಗಿ ಯಾವಾಗಲು ತಾವು ಸುಂದರವಾಗಿ ಕಾಣಲು ಬಯಸುತ್ತಾರೆ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಮಹಿಳೆಯರಿಗೆ ಸೌಂದರ್ಯ ಪ್ರಜ್ಞೆ ಹೆಚ್ಚು. ಹೀಗಾಗಿ ಯಾವಾಗಲು ತಾವು ಸುಂದರವಾಗಿ ಕಾಣಲು ಬಯಸುತ್ತಾರೆ. ಸುಂದರವಾಗಿ ಕಾಣಲು ಬರಿ ಮೇಕಪ್ ಮಾಡಿಕೊಂಡರೆ ಸಾಲದು.  ಆರೋಗ್ಯವಂತ ಚರ್ಮ ಅವಶ್ಯಕ.

ಮುಖದ ಚರ್ಮ ಸುಂದರವಾಗಿ ಆರೋಗ್ಯವಾಗಿ ಇರಬೇಕೆಂದರೆ ನಾವು ಪ್ರತಿನಿತ್ಯ ಸೇವಿಸುವ ಆಹಾರದಲ್ಲಿ ಕ್ರಮ ಬದ್ದತೆ ಇರಬೇಕು. ಯಾವುದನ್ನು ತಿನ್ನಬೇಕು ಎನ್ನುವುದಕ್ಕಿಂದ ಯಾವುದನ್ನು ತಿನ್ನಬಾರದು ಎಂದು ತಿಳಿದುಕೊಳ್ಳುವುದು ಸಹ ಮುಖ್ಯ.

ಸುಂದರ ತ್ವಚೆ ನಿಮ್ಮದಾಗಬೇಕು ಎಂದಾದರೇ ಈ ಐದು ಆಹಾರ ಸೇವಿಸುವುದನ್ನು ನಿಲ್ಲಿಸಿ.
1. ಜಂಕ್ ಫುಡ್: ಜಂಕ್ ಫುಡ್ ನಲ್ಲಿ ಸ್ಯಾಚುರೇಟೆಡ್ ಫ್ಯಾಟ್ ಹೆಚ್ಚಾಗಿ ಇರುವ ಕಾರಣ ಹೆಚ್ಚು ಹೆಚ್ಚು ಸೇವಿಸಿದರೇ ಮುಖದಲ್ಲಿ ಮೊಡವೇ ಹೆಚ್ಚುತ್ತದೆ. ಹಾಗೇಯೆ ಫಾಸ್ತಾ, ವೈಟ್ ಬ್ರೆಡ್ ಕೇಕ್ ಗಳಲ್ಲಿ ಗ್ಲೈಸೆಮಿಕ್ ಎಂಬ ರಸಾಯನಿಕ ಇರುತ್ತದೆ. ಅದರಿಂದಲೂ ಕೂಡ ಚರ್ಮ ತನ್ನ ಕಾಂತಿ ಕಳೆದುಕೊಳ್ಳುತ್ತದೆ. ಇವುಗಳನ್ನು ತಿನ್ನುವ ಬದಲು ಮೊಳಕೆ ಕಟ್ಟಿದ ಕಾಳುಗಳನ್ನು ತಿನ್ನುವುದು ಹೆಚ್ಚು ಉಪಯುಕ್ತ.

2. ತಂಪು ಪಾನೀಯ ಮತ್ತು ಸೋಡಾ:  ತಂಪು ಪಾನೀಯಗಳಲ್ಲಿ ಹೆಚ್ಚಿನ ಪ್ರಮಾಣದ ಸಕ್ಕರೆ ಇರುತ್ತದೆ. ಈ ಸಕ್ಕರೆ ಅಂಶ ಚರ್ಮಕ್ಕೆ ಹಾನಿಯುಂಟು ಮಾಡುತ್ತದೆ. ಇನ್ನು ಸೋಡಾವನ್ನು ಹೆಚ್ಚು ಕುಡಿದರೇ ಅತಿ ಚಿಕ್ಕ ವಯಸ್ಸಿನಲ್ಲೇ ಚರ್ಮ ತನ್ನ ಕಾಂತಿ ಕಳೆದು ಕೊಂಡು ವಯಸ್ಸಾದಂತೆ ಕಾಣುತ್ತದೆ. ಜೊತೆಗೆ ಸೋಡಾ ವನ್ನು ಹೆಚ್ಚು ಕುಡಿಯುವುದರಿಂದ ಕ್ಯಾನ್ಸರ್ ಗೆ ದಾರಿ ಮಾಡಿಕೊಡುತ್ತದೆ. ಇದರ ಬದಲು ಎಳನೀರು ಇಲ್ಲವೇ ಉಗುರು ಬೆಚ್ಚಗಿನ ನೀರಿಗೆ ನಿಂಬೆ ಹಣ್ಣು ಮತ್ತು ಜೇನುತುಪ್ಪ ಸೇರಿಸಿ ಕುಡಿದರೆ ಚರ್ಮ ಸುಂದರವಾಗುತ್ತದೆ.

3. ಕರಿದ ತಿಂಡಿಗಳು:
ಕರಿದ ತಿಂಡಿಗಳನ್ನು ಹೆಚ್ಚು ತಿನ್ನುವುದರಿಂದ ಅದು ಬೇಗ ಜೀರ್ಣವಾಗದೇ ದೇಹದಲ್ಲಿ ಕೊಬ್ಬಿನ ಅಂಶ ಹಾಗೂ ಕ್ಯಾಲರಿ  ಹೆಚ್ಚುವಂತೆ ಮಾಡುತ್ತದೆ. ಜೊತೆಗೆ ಚರ್ಮದ ಮೇಲೆ ಎಣ್ಣೆಯ ಅಂಶ ಹೆಚ್ಚು ಮಾಡಿ ತ್ವಚೆಯನ್ನು ಕಳಾಹೀನವಾಗಿಸುತ್ತದೆ. ಇದರ ಬದಲು ಹಸಿ ತರಕಾರಿ, ಸೌತೇಕಾಯಿ ಬಳಸುವುದು ಉಪಯಕ್ತ.

4. ಮದ್ಯ ಸೇವನೆ: ಅತಿಯಾದ ಆಲ್ಕೋಹಾಲ್ ಸೇವನೆ ಚರ್ಮಕ್ಕೆ ಹಾನಿಕರ. ಹೆಚ್ಚಿನ ಮದ್ಯ ಸೇವನೆಯಿಂದ ಶುಷ್ಕ ಚರ್ಮ, ನಿರ್ಜಲೀಕರಣ, ಚರ್ಮದಲ್ಲಿ ಬೇಗ ಸುಕ್ಕು ಬರಲು ಕಾರಣವಾಗುತ್ತದೆ. ಜೊತೆಗೆ ಎಕ್ಸಿಮಾ, ಸೋರಿಯಾಸಿಸ್ ನಂತರ ಚರ್ಮ ಕಾಯಿಲೆಗಳು ಬರುತ್ತದೆ.

5. ಹೆಚ್ಚು ಕಾಫಿ ಸೇವನೆ ಚರ್ಮಕ್ಕೆ ಹಾನಿಕರ: ದೇಹದಲ್ಲಿ ನಿರ್ಜಲೀಕರಣಕ್ಕೆ ಕಾಪಿ ಕಾರಣವಾಗುತ್ತದೆ. ಜೊತೆಗೆ ರೋಗ ನಿರೋಧಕ ಶಕ್ತಿಯನ್ನು ಕುಂದಿಸಿ ತರ್ಮವನ್ನು ಕಪ್ಪಾಗಿಸುತ್ತದೆ. ಜೊತೆಗೆ ಚರ್ಮವನ್ನು ತೆಳ್ಳಗಾಗಿಸುತ್ತದೆ. ಕಾಫಿ ಹೆಚ್ಚಾಗಿ ಕುಡಿಯುವುದರಿಂದ ಮಹಿಳೆಯರಲ್ಲಿ ಹಾರ್ಮೋನ್ ಸಮಸ್ಯೆ ಕೂಡ ಉಂಟಾಗುತ್ತದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com