ಮುತ್ತಿನಂಥ ಬಿಳಿಯ ಹಲ್ಲು ಹೊಂದಲು ಇಲ್ಲಿದೆ ಮನೆಯ ಮದ್ದು
ಫಳ ಫಳ ಹೊಳೆಯುವ ಬಿಳಿದಂತದ ಬಣ್ಣದ ಹಲ್ಲು ಹೊಂದಬೇಕು ಎಂಬುದು ಎಲ್ಲರ ಆಸೆ. ಆದರೆ ನಮ್ಮ ಅಭ್ಯಾಸ ಪದ್ಧತಿ, ನೀರು ಮತ್ತಿತರ ಕಾರಣಗಳಿಂದ ಶುಭ್ರವಾದ ಬಿಳಿ ಹಲ್ಲು ನಿಮ್ಮದಾಗಿಸಿಕೊಳ್ಳಬಹುದು. ಮನೆಯಲ್ಲೇ ಸಿಗುವ ಕೆಲ ಪದಾರ್ಥಗಳಿಂದ ಹಲ್ಲನ್ನು ಬಿಳಿಯಾಗಿಸಿಕೊಳ್ಳಬಹುದು.
ಮನೆಯಲ್ಲೇ ಇರುವ ಅರಿಶಿಣ, ಬಾಳೆಹಣ್ಣು ಸಿಪ್ಪೆ, ಸ್ಟ್ರಾಬೆರಿ ಹಣ್ಣು. ವೆನಿಗರ್ ಬಳಸಿ ಹಲನ್ನು ಪ್ರತಿನಿತ್ಯ ಉಜ್ಜಿದರೆ ಹಲ್ಲು ಬಿಳಿಯಾಗುತ್ತದೆ.
ಸ್ಟ್ರಾಬೆರಿ: ಚೆನ್ನಾಗಿ ಮಾಗಿದ ಸ್ಟ್ರಾಬೆರಿ ಹಣ್ಣನ್ನು ಒಪೆನ್ ಮಾಡಿ, ಟೂಟ್ ಬ್ರಷ್ ನಿಂದ ಅದರೊಳಗಿನ ಹಣ್ಣಿನ ರಸವನ್ನು ತೆಗೆದು ನಿಧಾನವಾಗಿ ಹಲ್ಲನ್ನು ಉಜ್ಜಬೇಕು. ಸುಮಾರು 15 ದಿನಗಳ ಕಾಲ ಪ್ರತಿನಿತ್ಯ ಈ ಅಭ್ಯಾಸ ರೂಢಿಸಿಕೊಂಡರೇ ನಿಮ್ಮ ಹಲ್ಲು ಪಳ ಪಳ ಹೊಳೆಯುತ್ತದೆ. ಸ್ಟ್ರಾಬೆರಿ ಯಲ್ಲಿ ಹೆಚ್ಚಿನ ಸಿಟ್ರಿಕ್ ಆಸಿಡ್ ಇರುವುದರಿಂದ ಹಲ್ಲುಗಳನ್ನು ಸ್ವಚ್ಚವಾಗಿಸಿ ಹಳದಿ ಬಣ್ಣವನ್ನು ಹೋಗಲಾಡಿಸುತ್ತದೆ. ಮತ್ತು ಈ ಹಣ್ಣಿನಲ್ಲಿರುವ ಮ್ಯಾಲಿಕ್ ಆಸಿಡ್ ಹಲ್ಲುಗಳನ್ನು ಗಟ್ಟಿಗೊಳಿಸುತ್ತದೆ.
ಅರಿಶಿನ ಪುಡಿ: ಅರ್ಧ ಚಮಚ ಅರಿಶಿನ ಪುಡಿ ತೆಗೆದುಕೊಂಡು ಎರಡು, ಮೂರು ಹನಿ ನೀರು ಹಾಕಿ ಪೇಸ್ಟ್ ರೀತಿ ಕಲೆಸಿಕೊಳ್ಳಿ. ನಂತರ ಅದನ್ನು ಬ್ರಷ್ ನಲ್ಲಿ ಅದ್ದಿ ಹಲ್ಲುಗಳನ್ನು ಚೆನ್ನಾಗಿ ಉಜ್ಜಬೇಕು. ಅರಿಶಿನಕ್ಕೆ ಬ್ಯಾಕ್ಟೀರಿಯಾ ಕೊಲ್ಲುವ ಗುಣವಿರುವುದರಿಂದ ಹಲ್ಲುಗಳ ನಡುವೆ ಇರುವ ಕೀಟಾಣುಗಳನ್ನು ಕೊಲ್ಲುತ್ತದೆ. ಹಲ್ಲನ್ನು ಅರಿಶಿನ ಪೇಸ್ಟ್ ನಿಂದ ಉಜ್ಜಿದ ನಂತರ, ಸುಮಾರು, ಐದಾರು ನಿಮಿಷಗಳ ಕಾಲ ಚೆನ್ನಾಗಿ ನೀರಿನಿಂದ ತೊಳೆಯಬೇಕು.
ಬಾಳೆ ಹಣ್ಣು ಸಿಪ್ಪೆ: ಬಾಳೆ ಹಣ್ಣಿನ ಸಿಪ್ಪೆಯನ್ನು ನಿಧಾನವಾಗಿ ನಿಮ್ಮ ಹಲ್ಲುಗಳ ಮೇಲೆ ಸುಮಾರು 3 ವಾರಗಳ ಕಾಲ ಉಜ್ಜಬೇಕು. ಬಾಳೆ ಹಣ್ಣಿನ ಸಿಪ್ಪೆಯಲ್ಲಿ ಅತ್ಯಧಿಕವಾಗಿ ಪೊಟಾಶಿಯಂ, ಮ್ಯಾಂಗನೀಸ್, ಮತ್ತು ಮೆಗ್ನಿಶಿಯಂ ಇರುವುದರಿಂದ ಕರೆಗಟ್ಟಿರುವ ಹಲ್ಲುಗಳನ್ನು ಬೆಳ್ಳಗಾಗಿಸುತ್ತದೆ.
ವೆನಿಗರ್: ಆಪಲ್ ಪ್ಲೇವರ್ ವೆನಿಗರ್ ಅನ್ನು ನೀರಿನೊಂದಿಗೆ ಮಿಶ್ರಣ ಮಾಡಿ ಪ್ರತಿನಿತ್ಯ ಬಾಯಿ ಹಾಗೂ ಹಲ್ಲನ್ನು ತೊಳೆಯಬೇಕು. ವೆನಿಗರ್ ಕೀಟಾಣುಗಳನ್ನು ಕೊಂದು ಹಲ್ಲು ಮತ್ತು ವಸಡುಗಳನ್ನು ಆರೋಗ್ಯ ವಾಗಿಡುತ್ತದೆ.
ರಾಸಾಯನಿಕ ಅಂಶಗಳಿರುವ ಟೂಟ್ ಪೇಸ್ಟ್ ಉಪಯೋಗಿಸುವುದರ ಬದಲು, ನೈಸರ್ಗಿಕವಾಗಿ ಮನೆಯಲ್ಲೇ ಸಿಗುವ ಪೇಸ್ಟ್ ಗಳನ್ನು ಬಳಸಿಕೊಂಡು ಹಲ್ಲನ್ನು ಬಿಳಿಯಾಗಿಸಿಕೊಳ್ಳಬಹುದು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ