ಯುವಕರ ನೆನಪಿನ ಶಕ್ತಿ ಕಡಿಮೆ ಮಾಡಲಿದೆ ಪಾಪ್‍ಕಾರ್ನ್, ಚಿಪ್ಸ್!

ನೀವು ಮಲ್ಟಿಪ್ಲೆಕ್ಸ್ ಸಿನಿಮಾ ನೋಡೋಕೆ ಹೋಗ್ತೀರಾ? ನೀವು ಇಂಟರ್ವಲ್‍ನಲ್ಲಿ ನೀವು ಬಾಯ್ ಫ್ರೆಂಡ್ ಅನ್ನು ಪಾಪ್ ಕಾರ್ನ್, ಚಿಪ್ಸ್ ತಾರೋ ಅಂತ ಅಟ್ಟುತ್ತೀರಾ? ಹಾಗಿದ್ದರೆ ನಿಮ್ಮ ಬಾಯ್ ಫ್ರೆಂಡ್ ಮರೆಗುಳಿಯಂತೆ ವರ್ತಿಸಿದರೆ ಅದು ಅವನ ತಪ್ಪಲ್ಲ! ಅಚ್ಚರಿ ಪಡಬೇಡಿ...
ಯುವಕರ ನೆನಪಿನ ಶಕ್ತಿ ಕಡಿಮೆ ಮಾಡಲಿದೆ ಪಾಪ್‍ಕಾರ್ನ್, ಚಿಪ್ಸ್! (ಸಾಂದರ್ಭಿಕ ಚಿತ್ರ)
ಯುವಕರ ನೆನಪಿನ ಶಕ್ತಿ ಕಡಿಮೆ ಮಾಡಲಿದೆ ಪಾಪ್‍ಕಾರ್ನ್, ಚಿಪ್ಸ್! (ಸಾಂದರ್ಭಿಕ ಚಿತ್ರ)

ಲಂಡನ್: ನೀವು ಮಲ್ಟಿಪ್ಲೆಕ್ಸ್ ಸಿನಿಮಾ ನೋಡೋಕೆ ಹೋಗ್ತೀರಾ? ನೀವು ಇಂಟರ್ವಲ್‍ನಲ್ಲಿ ನೀವು ಬಾಯ್ ಫ್ರೆಂಡ್ ಅನ್ನು ಪಾಪ್ ಕಾರ್ನ್, ಚಿಪ್ಸ್ ತಾರೋ ಅಂತ ಅಟ್ಟುತ್ತೀರಾ? ಹಾಗಿದ್ದರೆ ನಿಮ್ಮ ಬಾಯ್ ಫ್ರೆಂಡ್ ಮರೆಗುಳಿಯಂತೆ ವರ್ತಿಸಿದರೆ ಅದು ಅವನ ತಪ್ಪಲ್ಲ!

ಅಚ್ಚರಿ ಪಡಬೇಡಿ. ಯಾಕೆಂದರೆ ಪಾಪ್ ಕಾರ್ನ್, ಚಿಪ್ಸ್ ನಂಥ ಹೆಚ್ಚಿನ ಡಯೆಟರಿ ಟ್ರಾನ್ಸ್ ಫ್ಯಾಟಿ ಆ್ಯಸಿಡ್ಸ್ (ಡಿಟಿಎಫ್ಎ) ಅಥವಾ ಅನ್ ಸ್ಯಾಚುರೇಟೆಡ್ ಫ್ಯಾಟಿ ಆ್ಯಸಿಡ್ ಅನ್ನು ಸಾಮಾನ್ಯವಾಗಿ ಚಿಪ್ಸ್, ಪಾಪ್‍ಕಾರ್ನ್‍ನಲ್ಲಿ ಬಳಸಲಾಗುತ್ತದೆ.

ರುಚಿ ಹಾಗೂ ಹೆಚ್ಚು ಕಾಲ ಕುರುಕುರು ಆಗಿರುವಂತೆ ನೋಡಿಕೊಳ್ಳಲು ಈ ರೀತಿಯ ಆ್ಯಸಿಡ್‍ಗಳನ್ನು ಚಿಪ್ಸ್, ಪಾಪ್‍ಕಾನ್ರ್ ಗಳಲ್ಲಿ ಬಳಸಲಾಗುತ್ತದೆ. ಈ ರೀತಿಯ ಆ್ಯಸಿಡ್‍ಗಳು ಯುವಜನರಲ್ಲಿ ನೆನಪಿನಶಕ್ತಿ ವ್ಯವಸ್ಥೆ ಮೇಲೆ ನೇರ ಪರಿಣಾಮ ಬೀಳುತ್ತವೆ.

ಸರಾಸರಿ 45 ವರ್ಷ ವಯಸ್ಸಿನವರು ಹಾಗೂ ಯುವಕರ ಮೇಲೆ ನಡೆಸಿದ ಸಂಶೋಧನೆಯಲ್ಲಿ ಈ ವಿಚಾರ ಬಹಿರಂಗವಾಗಿದೆ. ಟ್ರಾನ್ಸ್ ಫ್ಯಾಟ್‍ಗಳ ಸೇವನೆ ವ್ಯಕ್ತಿಯ ವರ್ತನೆ ಹಾಗೂ ಮನ ಸ್ಥಿತಿ ಸೇರಿ ಮೆದುಳಿನ ಇತರೆ ಕಾರ್ಯವಿಧಾನಗಳ ಮೇಲೆ ಅಡ್ಡ ಪರಿಣಾಮ ಬೀರುತ್ತದೆ ಎನ್ನುವುದು ಹಿಂದಿನ ಸಂಶೋಧನೆಯಿಂದಲೇ ಬಹಿರಂಗವಾಗಿತ್ತು. ಆದರೆ, ಇದು ಮಹಿಳೆಯರ ಮಿದುಳಿನ ಮೇಲೆ ಹೆಚ್ಚಿನ ಪರಿಣಾಮ ಬೀಳುವುದಿಲ್ಲವಂತೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com