ಹೊಟ್ಟೆಯಲ್ಲಿನ ಬೊಜ್ಜು ಕರಗಿಸಲು ಸುಲಭ ಸೂತ್ರಗಳು

ಹೊಟ್ಟೆಯಲ್ಲಿ ಟಯರ್ ಥರಾ ಬೊಜ್ಜು ಬಂದು ಬಿಟ್ಟಿದೆ ಎಂಬುದು ಹುಡುಗಿಯರನ್ನು ಕಾಡುವ ದೊಡ್ಡ ಸಮಸ್ಯೆ. ತಿಂದದ್ದೆಲ್ಲಾ ಹೊಟ್ಟೆಯಲ್ಲಿ...
ಹೊಟ್ಟೆಯಲ್ಲಿ ಬೊಜ್ಜು (ಸಂಗ್ರಹ ಚಿತ್ರ)
ಹೊಟ್ಟೆಯಲ್ಲಿ ಬೊಜ್ಜು (ಸಂಗ್ರಹ ಚಿತ್ರ)

ಹೊಟ್ಟೆಯಲ್ಲಿ ಟಯರ್ ಥರಾ ಬೊಜ್ಜು ಬಂದು ಬಿಟ್ಟಿದೆ ಎಂಬುದು ಹುಡುಗಿಯರನ್ನು ಕಾಡುವ ದೊಡ್ಡ ಸಮಸ್ಯೆ. ತಿಂದದ್ದೆಲ್ಲಾ ಹೊಟ್ಟೆಯಲ್ಲಿ ಬೊಜ್ಜಾಗಿ ಕುಳಿತುಕೊಂಡದೆಯೇನೋ? ಎಂಬ ಗೊಣಗಾಟ. ಜಿಮ್, ಏರೋಬಿಕ್ಸ್, ಯೋಗ ಮೂಲಕವೂ ಬೊಜ್ಜು ಕರಗಿಸಬಹುದಾದರೂ ಆಹಾರದಲ್ಲಿ ನಿಯಂತ್ರಣ ಮಾಡಿಕೊಂಡರೆ ಸುಲಭದಲ್ಲಿ ಹೊಟ್ಟೆಯಲ್ಲಿನ ಬೊಜ್ಜು ಕರಗಿಸಬಹುದು.

ಹೊಟ್ಟೆಯಲ್ಲಿನ ಬೊಜ್ಜು ಕರಗಿಸಲು ಇಲ್ಲಿದೆ ಸುಲಭ ಸೂತ್ರ


ಉಪ್ಪು ಬಳಕೆ ಕಡಿಮೆ ಇರಲಿ

ಉಪ್ಪು ಸೇವನೆ ಕಡಿಮೆ ಮಾಡುವ ಮೂಲಕ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗುತ್ತದೆ.  ಸಲಾಡ್ ಅಥವಾ ಹಸಿ ತರಿಕಾರಿಗಳಿಗೆ ಉಪ್ಪು ಹಾಕದೇ ತಿನ್ನಿ

ಕಾರ್ಬೋಹೈಡ್ರೇಟ್ಸ್ ಕಡಿಮೆ ಮಾಡಿ

ರೋಟಿ, ಪಾಸ್ತಾ ಮೊದಲಾದ ಆಹಾರಗಳಿಂದ ದೂರವಿರಿ. ಕೊಬ್ಬಿನ ಅಂಶ ಕಡಿಮೆ ಇರುವ ಹಾಗೂ ಪ್ರೊಟೀನ್ ಅಧಿಕವಾಗಿರುವ ಆಹಾರಗಳನ್ನೇ ಸೇವಿಸಿ. ಕಾಳುಗಳ ಸೇವನೆ ಯಥೇಚ್ಛವಾಗಿರಲಿ.

ಜಾಸ್ತಿ ಹಾಲು ಕುಡಿಯಬೇಡಿ
ಹಸುವಿನ ಹಾಲಿನಲ್ಲಿ ಅಧಿಕ ಸಕ್ಕರೆ ಅಂಶ ಬೊಜ್ಜು ಬರಲು ಕಾರಣವಾಗುತ್ತದೆ. ಲ್ಯಾಕ್ಟೋಸ್ ಅಂಶ ಕಡಿಮೆಯಿರುವ ಮೊಸರು, ಗಿಣ್ಣು ಸೇವನೆ ಮಾಡಿ.

ಹಣ್ಣುಗಳನ್ನು ಸೇವಿಸುವಾಗ ಹುಷಾರು
ಎಲ್ಲ ಹಣ್ಣುಗಳು ಆರೋಗ್ಯಕ್ಕೆ ಒಳ್ಳೆಯದು. ಆದರೆ ಗ್ಲುಕೋಸ್, ಫ್ರುಕ್ಟೋಸ್ ಅಂಶ ಕಡಿಮೆ ಇರುವ ಹಣ್ಣುಗಳನ್ನೇ ತಿನ್ನಿ. ದ್ರಾಕ್ಷಿ, ಆರೆಂಜ್, ಮುಸಂಬಿ (ಸಿಟ್ರಸ್ ಫ್ರೂಟ್ ) ಹೆಚ್ಚು ತಿನ್ನಿ.

ಖಾರದ ವಸ್ತು ಬೇಡ
ಮಸಾಲೆಯಿಂದ ಕೂಡಿದ ಖಾರದ ಯಾವುದೇ ಆಹಾರಗಳನ್ನು ತಿನ್ನಬೇಡಿ. ಇದರಿಂದ ಹೊಟ್ಟೆಯಲ್ಲಿ ಅಸಿಡಿಟಿ ಉಂಟಾಗುತ್ತದೆ. ಖಾರದ ಯಾವುದೇ ಆಹಾರಗಳನ್ನು ತಿನ್ನುವುದು ಬೇಡ.

ಇದಕ್ಕೆಲ್ಲಾ ಗುಡ್‌ಬೈ ಹೇಳಿ

ಕಫೈನ್, ರಿಫೈನ್ಡ್ ಶುಗರ್, ಅಲ್ಕೊಹಾಲ್, ಶೇಖರಣೆ ಮಾಡಿದ ಆಹಾರಗಳನ್ನು ಸೇವಿಸುವುದು ಬೇಡವೇ ಬೇಡ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com