ಗಳಗಂಡನಿಗೆ ವಿಚ್ಛೇದನ!

ನಿಮ್ಮ ಉಪ್ಪಿನಲ್ಲಿ ಅಯೋಡಿನ್ ಇದೆಯೇ? ಇದ್ದರೆ ಅದು ನಿಮ್ಮ ಆರೋಗ್ಯಕ್ಕೆ ಒದಗಿದ ಪ್ಲಸ್ ಪಾಯಿಂಟ್ ಅಂತಲೇ ಲೆಕ್ಕ...
ಅಯೋಡಿನ್
ಅಯೋಡಿನ್

ನಿಮ್ಮ ಉಪ್ಪಿನಲ್ಲಿ ಅಯೋಡಿನ್ ಇದೆಯೇ? ಇದ್ದರೆ ಅದು ನಿಮ್ಮ ಆರೋಗ್ಯಕ್ಕೆ ಒದಗಿದ ಪ್ಲಸ್ ಪಾಯಿಂಟ್ ಅಂತಲೇ ಲೆಕ್ಕ...

ಆ ಶಾಲಾ ಬಾಲಕಿಗೆ ಪದೇಪದೆ ಗಂಟಲು ನೋವು. ಇದೇ ಕಾರಣಕ್ಕಾಗಿಯೇ ಯಾವಾಗಲೂ ಗೈರು. ತಪಾಸಣೆಗೆ ವೈದ್ಯರು ಬಂದಾಗ ಅಯೋಡಿನ್ ಕೊರತೆಯಿಂದ ಈ ರೀತಿ ಗಂಟಲುನೋವು ಉಂಟಾಗುತ್ತಿದೆಯೆಂದು ತಿಳಿಸಿದರು. ಆಮ್ಲಜನಕ ಹಾಗೂ ಹೈಡ್ರೋಜನ್ ನಂತೆ ಅಯೋಡಿನ್ ಸಹ ಒಂದು ರಾಸಾಯನಿಕ ಮೂಲವಸ್ತು. ಪರಿಸರದಲ್ಲಿ ಅನೇಕ ರೂಪಗಳಲ್ಲಿ ದೊರೆಯುತ್ತದೆ. ಅಯೋಡಿನ್ ಸಮುದ್ರದ ನೀರಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತದೆ.

ಬೇಕೇ ಬೇಕು ಅಯೋಡಿನ್
ಜೀವಕೋಶಗಳ ಕಾರ್ಯ ಚಟುವಟಿಕೆಗೆ ಅಯೋಡಿನ್ ಅತಿ ಮುಖ್ಯ. ಜೀವಕೋಶಗಳು ಆಹಾರವನ್ನು ಶಕ್ತಿಯನ್ನಾಗಿ ಪರಿವರ್ತಿಸುವಾಗ ಅಯೋಡಿನ್ ಪ್ರಮುಖ ಪಾತ್ರವಹಿಸುತ್ತದೆ. ಜೀವಕೋಶಗಳಲ್ಲಿನ ಥೈರಾಯ್ಡ್ ಗ್ರಂಥಿಯ ಸಕ್ರಿಯ ಕಾರ್ಯನಿರ್ವಹಣೆಗೆ ಅಯೋಡಿನ್ ಅವಶ್ಯ. ಭ್ರೂಣಾವಸ್ಥೆಯಲ್ಲಿರುವ ಮತ್ತು ಬೆಳೆಯುವ ಶಿಶುಗಳಿಗೆ ಅಯೋಡಿನ್ ಕೊರತೆ ಹುಟ್ಟುವ ಮಕ್ಕಳಲ್ಲಿ ಬುದ್ಧಿಮಾಂಧ್ಯತೆ, ನರದೌರ್ಬಲ್ಯ, ಬೆಳವಣೆಗೆ ಕುಂಠಿತವಾಗಬಹುದು. ಗರ್ಭಿಣಿಯರಲ್ಲಿ ಅಯೋಡಿನ್ ಕೊರತೆಯಾದರೆ ಅಕಾಲಿಕ ಪ್ರಸವ ಮತ್ತು ಭ್ರೂಣದ ಬೆಳೆ ವ ಣಿಯಲ್ಲಿ ಏರುಪೇರುಗಳಾಗಬಹುದು. ಯುವತಿಯರಲ್ಲಿ ಇದರ ಕೊರತೆಯಿಂದ ಬಂಜೆತನ ಕಾಡಬಹುದು. ಅಯೋಡಿನ್ ಕೊರತೆಯಿಂದ ಹಲವು ಕಾಯಿಲೆಗಳು ಬರುತ್ತವೆ..

ಗಳಗಂಡ
ಅಯೋಡಿನ್ ಕೊರತೆಯಿಂದ ಬಳಲುತ್ತಿರುವ ಅನೇಕರಲ್ಲಿ ಹೆಚ್ಚಾಗಿ ಕಂಡುಬರುವ ರೋಗ ಗಳಗಂಡ. ಥೈರಾಯ್ಡ್ ಹಾರ್ಮೋನುಗಳ ಉತ್ಪತ್ತಿಯಲ್ಲಿ ವ್ಯತ್ಯಾಸ ಉಂಟಾಗುವುದರಿಂದ ಗಳಗಂಡ ಉಂಟಾಗುತ್ತದೆ. ಇದರಿಂದಾಗಿ ಧ್ವನಿಯಲ್ಲಿ ಏರುಪೇರು, ಶ್ವಾಸಕೋಶದ ತೊಂದರೆ, ಉಸಿರಾಟದ ತೊಂದರೆ, ಕೆಮ್ಮು ಮುಂತಾದ ಸಮಸ್ಯೆಗಳು ಕಾಡುತ್ತವೆ.

ಹೈಪೊಥೈರಾಯ್ಡಿಸಮ್
ಅಯೋಡಿನ್ ಕೊರತೆಯಿರುವ ವ್ಯಕ್ತಿಗಳಲ್ಲಿ ಕಂಡುಬರುವ ಮತ್ತೊಂದು ಸಮಸ್ಯೆಯೆಂದರೆ ಹೈಪೊಥೈರಾಯ್ಡಿಸಮ್. ಇದರಿಂದ ಸುಸ್ತು, ತೂಕ ಹೆಚ್ಚಳ, ಶೀತ, ಶುಷ್ಕ ಚರ್ಮ, ಮಲಬದ್ಧತೆ, ಕಣ್ಣಿನ ತೊಂದರೆ, ಖಿನ್ನತೆ ಮುಂತಾದ ತೊಂದರೆಗಳು ಕಂಡುಬರುತ್ತವೆ.

ಕ್ರೆಟಿನಿಸಮ್
ಕ್ರೆಟಿನಿಸಮ್ ನಲ್ಲಿ ನರಗಳಲ್ಲಿ ದೌರ್ಬಲ್ಯ ಕಂಡುಬಂದು, ಮೈತುಂಬ ನೀರು ತುಂಬಿಕೊಳ್ಳುತ್ತದೆ.

ಬುದ್ಧಿಮಾಂದ್ಯತೆ
ಇದರ ಕೊರತೆಯು ಚಿಕ್ಕ ಮಕ್ಕಳಲ್ಲಿ ಬುದ್ಧಿಮಾಂದ್ಯತೆಯಂಥ ಭೀಕರ ಸಮಸ್ಯೆಗಳನ್ನು ಉಂಟುಮಾಡುತ್ತವೆ.

ಅಯೋಡಿನ್ ಕೊರತೆ ನೀಗಿಸುವುದು ಹೇಗೆ?
ಪ್ರತಿದಿನ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಸೇವನೆ. ಅಯೋಡಿನ್ ಉಪ್ಪು ಸೇವನೆ. ಅಯೋಡಿನ್ ಅಧಿಕ ಪ್ರಮಾಣದಲ್ಲಿರುವ ತರಕಾರಿ, ಸೊಪ್ಪು, ರೊಟ್ಟಿಯಂಥ ಆಹಾರಗಳ ಸೇವನೆ. ಹೆಚ್ಚು ಹೆಚ್ಚು ಸಮತೋಲಿತ ಆಹಾರ ಸೇವಿಸುವುದು.

ಉಪ್ಪಿನಲ್ಲಿ ಅಯೋಡಿನ್ ಪತ್ತೆ ಹೇಗೆ?
ನಾವು ಬಳಸುವ ಉಪ್ಪಿನಲ್ಲಿ ಅಯೋಡಿನ್ ಇದೆಯೋ ಇಲ್ಲವೋ ಎಂಬುದನ್ನು ಪತ್ತೆಹಚ್ಚಲು ಅಕ್ಕಿ ಅಥವಾ ಜೋಳದ ಗಂಜಿಗೆ ಉಪ್ಪನ್ನು ಹಾಕಿದರೆ, ಗಂಜಿಯು ನೇರಳೆ ಬಣ್ಣಕ್ಕೆ ತಿರುಗಿದರೆ ಅದು ಅಯೋಡಿನ್‍ಯುಕ್ತ ಉಪ್ಪೆಂದೂ ಇಲ್ಲವಾದಲ್ಲಿ ಅಯೋಡಿನ್ ರಹಿತ ಉಪ್ಪೆಂದೂ ತಿಳಿಯಬಹುದು.

-ಪ.ನಾ. ಹಳ್ಳಿ ಹರೀಶ್ ಕುಮಾರ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com