ವಿಶ್ವದ ಟಾಪ್ ೧೦ ನೈಟ್ ಲೈಫ್ ನಗರಗಳು: ಗೋವಾಕ್ಕೆ ೬ನೆ ಸ್ಥಾನ

ಮಾಧ್ಯಮ ಸಂಸ್ಥೆಯೊಂದು ನಡೆಸುವ ವಿಶ್ವದ ಟಾಪ್ ೧೦ ನೈಟ್ ಲೈಫ್ ನಗರಗಳ ಪಟ್ಟಿಯಲ್ಲಿ ಗೋವಾ ಆರನೇ ಸ್ಥಾನ ಪಡೆದಿರುವುದಲ್ಲದೆ,
ಗೋವಾ (ಸಂಗ್ರಹ ಚಿತ್ರ)
ಗೋವಾ (ಸಂಗ್ರಹ ಚಿತ್ರ)

ಪಣಜಿ: ಮಾಧ್ಯಮ ಸಂಸ್ಥೆಯೊಂದು ನಡೆಸುವ ವಿಶ್ವದ ಟಾಪ್ ೧೦ ನೈಟ್ ಲೈಫ್ ನಗರಗಳ ಪಟ್ಟಿಯಲ್ಲಿ ಗೋವಾ ಆರನೇ ಸ್ಥಾನ ಪಡೆದಿರುವುದಲ್ಲದೆ, ಸುರಕ್ಷಿತ ಪ್ರವಾಸಿ ತಾಣ ಎಂಬ ಜಾಗತಿಕ ಗೌರವ ದೊರೆತಿದೆ ಎಂದು ಗೋವಾ ಪ್ರವಾಸೋದ್ಯಮ ಸಚಿವ ದಿಲೀಪ್ ಪರುಲೇಕರ್ ತಿಳಿಸಿದ್ದಾರೆ.

'ನ್ಯಾಷನಲ್ ಜಿಯಗ್ರಾಫಿಕ್' ನಡೆಸುವ ಈ ಸಮೀಕ್ಷೆಯಲ್ಲಿ ಗೋವಾಕ್ಕೆ ಈ ೬ ನೆ ಸ್ಥಾನ ದೊರೆತಿರುವುದು. "ಹಲವಾರು ಪ್ರವಾಸೋದ್ಯಮ ಸಂಗತಿಗಳಿಗೆ ಗೋವಾಕ್ಕೆ ಜಾಗತಿಕ ಮನ್ನಣೆ ದೊರಕುತ್ತಿದೆ. ಈಗ ಅತ್ಯುತ್ತಮ ನೈಟ್ಲೈಫ್ ನಗರಗಳ ಪಟ್ಟಿಯಲ್ಲಿ ಸ್ಥಾನ ದೊರಕಿಸಿಕೊಂಡಿದೆ. ಬೀಚ್ ನಲ್ಲಾಗಲೀ, ಬೀಚ್ ನಿಂದ ಹೊರಗಾಗಲೀ ೨೪/೭ ಗೋವಾ ಸುರಕ್ಷಿತ ತಾಣ ಎಂಬ ಮನ್ನಣೆ ನಾವು ಸ್ವೀಕರಿಸಿದ್ದೇವೆ" ಎಂದು ಪರುಲೇಕರ್ ತಿಳಿಸಿದ್ದಾರೆ.

ನಗರ ರಾತ್ರಿ ಸಂತೆಗಳು ಹಾಗೂ ಸಂಗೀತ ಉತ್ಸವಗಳು ಇಲ್ಲಿ ಬಹು ಪ್ರಖ್ಯಾತ ಆದುದರಿಂದ ನಮ್ಮ ಇಲಾಖೆ ಕಾನೂನು ಗೌರವಿಸುವ ಇಂತಹ ಕಾರ್ಯಕ್ರಮಗಳಿಗೆ ಹೆಚ್ಚು ಸಹಕಾರ ನೀಡುತ್ತದೆ ಎಂದಿದ್ದಾರೆ.

ನ್ಯಾಷನಲ್ ಜಿಯಗ್ರಾಫಿಕ್ ನ ಈ ಸಮೀಕ್ಷೆಯಲ್ಲಿ ಐರ್ಲ್ಯಾಂಡ್ ನ ಡಬ್ಲಿನ್ ಮೊದಲ ಸ್ಥಾನ ಪಡೆದರೆ, ಸೆರ್ಬಿಯಾದ ಬೆಲ್ಗ್ರೇಡ್, ಬೊಲಿವಿಯಾದ ಲಾ ಪಾಜ್, ಬ್ರೆಜಿಲ್ ನ ಸಾವೋ ಪೌಲೊ, ಪೊರ್ಟೊರಿಕೋ ದ ಸ್ಯಾನ್ ಜೌನ್, ಭಾರತದ ಗೋವಾ, ಸ್ಪೇನ್ ನ ಅಬಿಜಾ, ಟೆಕ್ಸಾಸ್ ನ ಹೌಸ್ಟನ್, ಗ್ರೀಸ್ ನ ಥೆಸ್ಸೋಲೋನಿಕಿ ಮತ್ತು ಅಜರ್ಬೈಜಾನ್ ನ ಬಾಕು ನಂತರದ ಸ್ಥಾನಗಳಲ್ಲಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com