• Tag results for ಗೋವಾ

ಪತ್ರಕರ್ತ ತರುಣ್ ತೇಜ್'ಪಾಲ್ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣ: ಮೇ 12ಕ್ಕೆ ತೀರ್ಪು ಪ್ರಕಟ

‘ತೆಹೆಲ್ಕಾ’ ಪತ್ರಿಕೆಯ ಮಾಜಿ ಪ್ರಧಾನ ಸಂಪಾದಕ ತರುಣ್‌ ತೇಜ್‌ಪಾಲ್‌ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣದ ತೀರ್ಪನ್ನು ಮೇ 12ರಂದು ಪ್ರಕಟಿಸಲಾಗುತ್ತದೆ ಎಂದು ಗೋವಾ ಸೆಷನ್ಸ್ ನ್ಯಾಯಾಲಯ ಮಂಗಳವಾರ ಹೇಳಿದೆ.

published on : 27th April 2021

ಬಿಜೆಪಿಗೆ ಬಿಗ್ ಶಾಕ್: ಎನ್ ಡಿಎಯಿಂದ ಹೊರ ಬಂದ ಜಿಎಫ್ ಪಿ

ಗೋವಾ ರಾಜ್ಯ ಬಿಜೆಪಿಗೆ ಬಿಗ್ ಶಾಕ್ ಎದುರಾಗಿದ್ದು ಎನ್ ಡಿಎ ಮೈತ್ರಿಕೂಟದಿಂದ ಗೋವಾ ಫಾರ್ವರ್ಡ್ ಪಾರ್ಟಿ(ಜಿಎಫ್ಪಿ) ಹೊರಕ್ಕೆ ಬಂದಿದೆ. 

published on : 13th April 2021

ಮರಾಠರು ‘ಆಕ್ರಮಣಕಾರರು’ ಎಂದು ಟ್ವೀಟ್ ಮಾಡಿ ನಂತರ ಕ್ಷಮೆಯಾಚಿಸಿದ ಗೋವಾ ಪ್ರವಾಸೋದ್ಯಮ ಇಲಾಖೆ

ಛತ್ರಪತಿ ಶಿವಾಜಿ ಮಹಾರಾಜ್ ನೇತೃತ್ವದ ಮರಾಠ ಯೋಧರು ‘ಆಕ್ರಮಣಕಾರರು’ ಎಂದು ಶುಕ್ರವಾರ ವಿವಾದಾತ್ಮಕ ಟ್ವೀಟ್‌ ಮಾಡಿದ್ದ ಗೋವಾ ಪ್ರವಾಸೋದ್ಯಮ ಇಲಾಖೆ, ನಂತರ ಆ ಟ್ವೀಟ್‌ ಅನ್ನು ಡಿಲೀಟ್ ಮಾಡಿ ಕ್ಷಮೆಯಾಚಿಸಿದೆ.

published on : 2nd April 2021

ಮಹದಾಯಿ ವಿವಾದ: ಕಣಕುಂಬಿಗೆ ಜಂಟಿ ಪರಿಶೀಲನಾ ಸಮಿತಿ ಭೇಟಿ, ಪರಿಶೀಲನೆ

ಸರ್ವೋಚ್ಛ ನ್ಯಾಯಾಲಯದ ಸೂಚನೆಯಂತೆ ಕರ್ನಾಟಕ, ಗೋವಾ ಹಾಗೂ ಮಹಾರಾಷ್ಟ್ರ ರಾಜ್ಯಗಳ ಜಂಟಿ ಪರಿಶೀಲನಾ ಸಮಿತಿ ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಕಣಕುಂಬಿ ಗ್ರಾಮಕ್ಕೆ ಶುಕ್ರವಾರ ಭೇಟಿ ನೀಡಿ ಗ್ರಾಮದಲ್ಲಿ ರಾಜ್ಯ ಸರ್ಕಾರದಿಂದ ಕೈಗೆತ್ತಿಕೊಂಡಿರುವ ಕಳಸಾ ಕಾಲುವೆಯ ಸದ್ಯದ ಪರಿಸ್ಥಿತಿ ಪರಿಶೀಲನೆ ನಡೆಸಿತು.

published on : 20th March 2021

ಗೋವಾದಲ್ಲಿ 'ಸೆಕ್ಸ್‌ ಟಾಯ್ಸ್' ಮಾರಾಟ ಮಳಿಗೆ ಮುಚ್ಚಿಸಿದ ಸ್ಥಳೀಯರು!

ಭಾರತದಲ್ಲಿ ಕಾನೂನುಬದ್ಧವಾಗಿ ಲೈಂಗಿಕ ಆಟಿಕೆಗಳ ಮಾರಾಟ ನಡೆಸುವ ದೇಶದ ಮೊದಲ ಮಳಿಗೆ ಕಾಮ ಗಿಜ್ಮೋಸ್‌ಗೆ ಗೋವಾದಲ್ಲಿ ಕಹಿ ಅನುಭವ ಎದುರಾಗಿದೆ.

published on : 19th March 2021

ಪದ್ಮಭೂಷಣ ಪ್ರಶಸ್ತಿ ವಿಜೇತ ಖ್ಯಾತ ವರ್ಣಚಿತ್ರಕಾರ ಲಕ್ಷ್ಮಣ್ ಪೈ ನಿಧನ

ಖ್ಯಾತ ವರ್ಣಚಿತ್ರಕಾರ ಮತ್ತು ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಲಕ್ಷ್ಮಣ್ ಪೈ (95) ಅವರು ಭಾನುವಾರ ಸಂಜೆ ಗೋವಾದ ತಮ್ಮ ನಿವಾಸದಲ್ಲಿ ನಿಧನರಾದರು.

published on : 15th March 2021

'ಸರ್ಕಾರಿ ಅಧಿಕಾರಿ ರಾಜ್ಯ ಚುನಾವಣಾ ಆಯುಕ್ತರಾಗಲು ಸಾಧ್ಯವಿಲ್ಲ': ಗೋವಾ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಛೀಮಾರಿ

ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರಗಳೊಂದಿಗೆ ಸಹಯೋಗ ಹೊಂದಿರುವ ಅಥವಾ ಸರ್ಕಾರಿ ಉದ್ಯೋಗದಲ್ಲಿರುವ ವ್ಯಕ್ತಿ ರಾಜ್ಯ ಚುನಾವಣಾ ಆಯೋಗದ ಆಯುಕ್ತರಾಗಲು ಸಾಧ್ಯವಿಲ್ಲ, ಚುನಾವಣಾ ಆಯುಕ್ತರಾಗಲು ಸ್ವತಂತ್ರ ವ್ಯಕ್ತಿ ಬೇಕು ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಆದೇಶ ನೀಡಿದೆ.

published on : 12th March 2021

ಕಳಸಾ-ಬಂಡೂರಿ: ಜಂಟಿ ಪರಿಶೀಲನೆ ತಂಡಕ್ಕೆ ಅಧಿಕೃತ ಹೆಸರು ನಾಮನಿರ್ದೇಶನ ಮಾಡಿದ ಕರ್ನಾಟಕ

ನ್ಯಾಯಾಲಯದ ಆದೇಶಗಳನ್ನು ಉಲ್ಲಂಘಿಸಿ ಕರ್ನಾಟಕ ಸರ್ಕಾರ ಮಹದಾಯಿ ಯೋಜನೆಯಡಿ ಮಾಂಡೋವಿ ನೀರನ್ನು ಬೇರೆಡೆಗೆ ತಿರುಗಿಸಿದೆಯೆ ಎಂಬ ಬಗ್ಗೆ ತನಿಖೆ ನಡೆಸಲು ಜಂಟಿ ಪರಿಶೀಲನಾ ಸಮಿತಿಯನ್ನು ರಚಿಸಲು ಸುಪ್ರೀಂ ಕೋರ್ಟ್ ಆದೇಶಿಸಿ ಆರು ದಿನಗಳ ತರುವಾಯ ರಾಜ್ಯ ಸರ್ಕಾರವು ಸಮಿತಿಯನ್ನು ಪ್ರತಿನಿಧಿಸಲು ಹಿರಿಯ ಎಂಜಿನಿಯರ್ ಗಳನ್ನು ನಾಮಕರಣ ಮಾಡಿದೆ. 

published on : 1st March 2021

ಗಾಂಧಿ ಕುಟುಂಬದ ನಿಷ್ಠ ರಾಜಕಾರಣಿ ಕೇಂದ್ರದ ಮಾಜಿ ಸಚಿವ ಕ್ಯಾಪ್ಟನ್ ಸತೀಶ್ ಶರ್ಮಾ ನಿಧನ

ಕಾಂಗ್ರೆಸ್ ಮುಖಂಡ ಹಾಗೂ ಕೇಂದ್ರದ ಮಾಜಿ ಸಚಿವ ಕ್ಯಾಪ್ಟನ್ ಸತೀಶ್ ಶರ್ಮಾ(73), ಬುಧವಾರ ರಾತ್ರಿ ಗೋವಾದಲ್ಲಿ ನಿಧನರಾಗಿದ್ದಾರೆ.

published on : 18th February 2021

ಮಹದಾಯಿ ವಿವಾದ: ಕರ್ನಾಟಕ, ಗೋವಾ ರಾಜ್ಯಗಳು ಸುಪ್ರೀಂಕೋರ್ಟ್ ಆದೇಶ ಅನುಸರಿಸಲಿವೆ- ಸಿಟಿ ರವಿ

ಮಹದಾಯಿ ನದಿ ನೀರು ವಿವಾದ ಸಂಬಂಧ ಕರ್ನಾಟಕ ಹಾಗೂ ಗೋವಾ ರಾಜ್ಯಗಳು ಸುಪ್ರೀಂಕೋರ್ಟ್ ಆದೇಶವನ್ನು ಅನುಸರಿಸಲಿವೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿಯವರು ಭಾನುವಾರ ಹೇಳಿದ್ದಾರೆ.

published on : 7th February 2021

ಆರೋಗ್ಯದಲ್ಲಿ ಚೇತರಿಕೆ, ನಾಲ್ಕೈದು ದಿನಗಳ ಬಳಿಕ ಡಿಸ್ಚಾರ್ಚ್: ಶ್ರೀಪಾದ್ ನಾಯಕ್

ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಗೋವಾ ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೇಂದ್ರ ಸಚಿವ ಶ್ರೀಪಾದ್ ನಾಯಕ್ ಅವರು ಚೇತರಿಸಿಕೊಳ್ಳುತ್ತಿದ್ದು, ಇನ್ನು ನಾಲ್ಕೈದು ದಿನಗಳ ಬಳಿಕ ಡಿಸ್ಚಾರ್ಚ್ ಮಾಡಲಾಗುತ್ತದೆ.

published on : 19th January 2021

ಗೋವಾದಲ್ಲಿ 51ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ: ಕಿಚ್ಚ ಸುದೀಪ್ ಗೆ ಸನ್ಮಾನ 

ಗೋವಾದಲ್ಲಿ 51ನೇ ಅಂತರರಾಷ್ಟ್ರೀಯ ಚಲನ ಚಿತ್ರೋತ್ಸವ ನಡೆಯುತ್ತಿದೆ. ಕರ್ನಾಟಕದಿಂದ ಕನ್ನಡ ಚಲನಚಿತ್ರರಂಗದ ಪ್ರತಿನಿಧಿಯಾಗಿ ಕಿಚ್ಚ ಸುದೀಪ್ ಭಾಗವಹಿಸಿದ್ದಾರೆ.

published on : 17th January 2021

ಧಾರವಾಡ ಬಳಿ ಭೀಕರ ಅಪಘಾತ: ಮೃತ 10 ಮಹಿಳೆಯರು ಶಾಲಾ ಗೆಳತಿಯರು, ಗೋವಾಕ್ಕೆ ಟ್ರಿಪ್ ಹೊರಟಿದ್ದರು!

ಸಂಕ್ರಾಂತಿ ಮಾರನೇ ದಿನವೇ ಧಾರವಾಡ ಬಳಿ ಭೀಕರ ಅಪಘಾತ ಸಂಭವಿಸಿದ್ದು, ದಾವಣಗೆರೆಯ ಕೆಲವು ವೈದ್ಯಕೀಯ ವೃತ್ತಿಪರರ ಕುಟುಂಬಗಳು ತೀವ್ರ ಆಘಾತಕ್ಕೊಳಗಾಗಿವೆ.

published on : 15th January 2021

ಗೋವಾದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೇಂದ್ರ ಸಚಿವ ಶ್ರೀಪಾದ್ ನಾಯಕ್: ಉಪ ರಾಷ್ಟ್ರಪತಿ ಭೇಟಿ, ಆರೋಗ್ಯ ವಿಚಾರಿಸಿದ ಪ್ರಧಾನಿ 

ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಗೋವಾ ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೇಂದ್ರ ಆಯುರ್ವೇದ, ಯೋಗ, ಯುನಾನಿ, ನ್ಯಾಚುರೋಪಥಿ ಖಾತೆ ರಾಜ್ಯ ಸಚಿವ ಶ್ರೀಪಾದ್ ನಾಯಕ್ ಅವರನ್ನು ಶುಕ್ರವಾರ ಉಪ ರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ.

published on : 15th January 2021

ಗೋವಾ ಅಂತರರಾಷ್ಟ್ರೀಯ ಸಿನಿಮೋತ್ಸವ: 50 ಚಲನಚಿತ್ರ ಪ್ರದರ್ಶನ

ಗೋವಾದಲ್ಲಿ ನಡೆಯಲಿರುವ 51ನೇ ಅಂತರರಾಷ್ಟ್ರೀಯ ಸಿನಿಮಾ ಉತ್ಸವದಲ್ಲಿ ವಿಶ್ವ ಪನೊರಮಾ ವಿಭಾಗದಲ್ಲಿ ಪ್ರದರ್ಶಿಸಲಾಗುವ ಸಿನಿಮಾಗಳ ಪಟ್ಟಿಯನ್ನು ಕೇಂದ್ರ ಮಾಹಿತಿ ಮತ್ತು ಪ್ರಸಾರ ಇಲಾಖೆ ಪ್ರಕಟಿಸಿದೆ.

published on : 13th January 2021
1 2 3 >