ಮಕ್ಕಳಿಂದ ಸ್ಮಾರ್ಟ್ ಫೋನ್ ಬಳಕೆ: ಪೋಷಕರಿಗೆ ಕೆಲವು ಟಿಪ್ಸ್

ಇತ್ತೀಚೆಗೆ ಎಲ್ಲರ ಕೈಯಲ್ಲಿ ಸ್ಮಾರ್ಟ್ ಫೋನ್ ಹೆಚ್ಚಾದಂತೆ ಅದನ್ನು ಮಕ್ಕಳಿಂದ ಕಾಪಾಡುವುದು ಹೇಗೆ ಎಂಬುದು ಪೋಷಕರಿಗೆ ತಲೆನೋವಾಗಿ ಪರಿಣಮಿಸಿದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಇತ್ತೀಚೆಗೆ ಎಲ್ಲರ ಕೈಯಲ್ಲಿ ಸ್ಮಾರ್ಟ್ ಫೋನ್ ಹೆಚ್ಚಾದಂತೆ ಅದನ್ನು ಮಕ್ಕಳಿಂದ ಕಾಪಾಡುವುದು ಹೇಗೆ ಎಂಬುದು ಪೋಷಕರಿಗೆ ತಲೆನೋವಾಗಿ ಪರಿಣಮಿಸಿದೆ. ಪೋಷಕರ ಸ್ಮಾರ್ಟ್ ಫೋನ್ ಗಳನ್ನು ಕಂಡ ಮಕ್ಕಳು ತಮಗೂ ಅದೇ ರೀತಿ ಸ್ಮಾರ್ಟ್ ಫೋನ್ ಕೊಡಿಸು ಎಂದು ಹಠ ಹಿಡಿಯುವುದು ಸಹಜವಾಗಿದೆ. ಮನೆಯಲ್ಲಿ ಮಕ್ಕಳು ನಿಮ್ಮ ಫೋನ್ ತೆಗೆದುಕೊಂಡರೆ, ಅದನ್ನು ಕಂಡು ನೀವು ಗದರಿದಾಗ ಅದು ಮಕ್ಕಳ ಮುನಿಸಿಗೆ ಕಾರಣವಾಗುತ್ತದೆ. ಸ್ಮಾರ್ಟ್ ಬಳಸಬೇಡಿ ಎಂದು ಪ್ರೀತಿಯಿಂದ ಹೇಳಿದರೂ ಮಕ್ಕಳು ಕೇಳುವುದಿಲ್ಲ ಎಂಬುದು ಪೋಷಕರ ವಾದ. ಆದರೆ, ಅದನ್ನು ಹೇಳಬೇಕಾದ ರೀತಿಯಲ್ಲಿ ಹೇಳಿದರೆ ಫೋನ್ ಬಳಕೆಯನ್ನು ತಗ್ಗಿಸಬಹುದು. ಅದಕ್ಕಾಗಿ ಕೆಲವು ಟಿಪ್ಸ್ ಇಲ್ಲಿವೆ.

ಸೆಕ್ಯೂರಿಟಿ ಕೋಡ್ ವರ್ಡ್ ಹಾಕಿ
ನೀವು ಮಕ್ಕಳಿಗೆ ಫೋನ್ ಕೊಡಬೇಕಾದರೆ, ನಿಮ್ಮ ಖಾಸಗಿ ವಿಷಯಗಳಿಗೆ ಸಂಬಂಧಿಸಿದಂತ ಆ್ಯಪ್ ಗಳಿಗೆ ಸೆಕ್ಯೂರಿಟಿ ಕೋಡ್ ವರ್ಡ್ ಹಾಕಿ. ಅಲ್ಲದೆ ಕೇವಲ ಮಕ್ಕಳು ಆಡುವಂತಹ ಗೇಮ್ ಗಳು ಹಾಗೂ ಮಕ್ಕಳು ಆಕರ್ಷಿತರಾಗುವ ಇನ್ನಿತರೆ ವಿಷಯಗಳ ಬಗ್ಗೆ ಸೇವ್ ಮಾಡಿ ಇಡಿ. ಇದರಿಂದ ಅವರು ಬೇರೆ ಅಪ್ಲಿಕೇಶನ್ ಅತ್ತ ಹೋಗುವುದು ತಪ್ಪುತ್ತದೆ.

ರಾತ್ರಿ ವೇಳೆ ಫೋನ್ ಸ್ವಿಚ್ ಆಫ್ ಮಾಡಿ
ಮನೆಯಲ್ಲಿರಬೇಕಾದರೆ ರಾತ್ರಿ ವೇಳೆ ಫೋನ್ ಸ್ವಿಚ್ ಆಫ್ ಮಾಡುವುದು ಉತ್ತಮ. ಅಪ್ರಾಪ್ತ ಮಕ್ಕಳು ರಾತ್ರಿ ವೇಳೆ, ಚಾಟಿಂಗ್, ವಿಡಿಯೋ ವಾಚಿಂಗ್ ಮಾಡಿಕೊಂಡು ನಿದ್ದೆ ಮರೆತು ಬಿಡುತ್ತಾರೆ. ಇದರಿಂದ ಅವರ ಆರೋಗ್ಯ ಹದಗೆಡುವುದಲ್ಲದೆ, ಅವರನ್ನು ದಾರಿ ತಪ್ಪಿಸುವು ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಹಾಗಾಗಿ, ರಾತ್ರಿ ಹೊತ್ತು ಫೋನ್ ಸ್ವಿಚ್ ಆಫ್ ಮಾಡಿ ಇಡಬೇಕು.

ಮನೆಯಲ್ಲಿ ಹೆಚ್ಚು ಫೋನ್ ಬಳಸದಿರೆ
ಕುಟುಂಬಸ್ಥದವರೊಡನೆ ಇರಬೇಕಾದರೆ, ಫೋನ್ ಬಳಕೆ ಕಡಿಮೆ ಮಾಡಿ. ಸ್ಮಾರ್ಟ್ ಫೋನ್ ಹೆಚ್ಚಾಗಿ ಬಳಸುವುದನ್ನು ಕಂಡರೆ ಮಕ್ಕಳು ಕೂಡ ಅದರತ್ತ ಆಕರ್ಷಿತರಾಗುತ್ತಾರೆ. ಇದರಿಂದ ಅವರು ಪೋಷಕರೊಂದಿಗೆ ಸಮಯ ಕಳೆಯುವ ಬದಲು ಸ್ಮಾರ್ಟ್ ಫೋನ್ ಬಳಕೆಯಲ್ಲಿ ಸಮಯ ಕಳೆಯುತ್ತಾರೆ. ಇದರಿಂದ ಅವರ ಚಲನವಲನ ಗಮನಿಸುವುದು ಕಡಿಮೆಯಾಗುತ್ತದೆ. ಅಲ್ಲದೇ ಅವರು ಯಾವ ಗೊಂದಲಕ್ಕೆ ಸಿಲುಕಿದ್ದಾರೆ ಎಂಬುದು ಅರಿಯಲು ಸಾಧ್ಯವಾಗುವುದಿಲ್ಲ.

ಮಕ್ಕಳನ್ನು ಹೆಚ್ಚು ಕ್ರಿಯಾಶೀಲರನ್ನಾಗಿ ಮಾಡಿ
ಮಕ್ಕಳು ಬಿಡುವಾಗಿದ್ದರೆ, ಸ್ಮಾರ್ಟ್ ಫೋನ್ ನತ್ತ ಕಣ್ಣಾಯಿಸುತ್ತಾರೆ. ಹಾಗಾಗಿ ಅವರನ್ನು ಹೆಚ್ಚು ಕ್ರಿಯಾಶೀಲರನ್ನಾಗಿ ಮಾಡಿ. ಅವರಿಗೆ ಆಸಕ್ತಿ ಇರುವಂತಹ ಕೆಲಸಗಳಲ್ಲಿ ಅವರನ್ನು ತೊಡಗಿಸಿ. ಅಲ್ಲದೇ, ಮನೆಯ ಪರಿಸ್ಥಿತಿ ಬಗ್ಗೆ ವಿವರಿಸುತ್ತಾ ಹಾಗೂ ಸಮಾಜದಲ್ಲಿ ಆಗುವ ಬದಲಾವಣೆಗಳ ಬಗ್ಗೆ ತಿಳುವಳಿಕೆ ನೀಡಿ. ಹೀಗೆ ಮಾಡುವುದರಿಂದ ಅವರು ತಮ್ಮ ಮಾತನ್ನು ತೆಗೆದುಹಾಕುವ ಪರಿಸ್ಥಿತಿ ಎದುರಾಗುವುದು ಕಡಿಮೆಯಾಗುತ್ತದೆ. ನೇರವಾಗಿ ಕಠೋರವಾಗಿ ಹೇಳಿದರೆ ಮಕ್ಕಳು ಮಂಡುತನ ಹಿಡಿಯುತ್ತಾರೆ. ಆದ್ದರಿಂದ ಹೇಳಬೇಕಾದರೆ ಸಂದರ್ಭಕ್ಕೆ ತಕ್ಕ ರೀತಿಯಲ್ಲಿ ತಿಳುವಳಿಕೆ ನೀಡಿ. ಅಲ್ಲದೇ, ಸಾಮಾಜಿಕ ಜಾಲತಾಣಗಳಿಂದ ಆಗುವ ಉಪಯೋಗ ಮತ್ತು ದುರುಪಯೋಗದ ಬಗ್ಗೆ ವಿವರಿಸಿ.

ಮಕ್ಕಳ ಮೇಸೆಜ್ ಗಳನ್ನು ಚೆಕ್ ಮಾಡಿ
ಮಕ್ಕಳು ಮಾಡುವಂತಹ ಮೆಸೇಜ್ ಗಳನ್ನು ಚೆಕ್ ಮಾಡಬೇಕು. ಅವರು ಟೈಪ್ ಮಾಡಿರುವ ಟೆಕ್ಟ್ಸ್ ನ್ನು ಎರಡು ಮೂರು ಸಲ ಓದಿ ಅರ್ಥೈಸಿಕೊಳ್ಳಿ. ಕೆಲವೊಮ್ಮೆ ಮಕ್ಕಳು ಕೋಡ್ ವರ್ಡ್ ಗಳನ್ನು ಬಳಕೆ ಮಾಡಿ ಮಾತನಾಡುತ್ತಾರೆ. ಅವರು ಯಾರ ಬಳಿ ಚಾಟ್ ಮಾಡುತ್ತಾರೆಂಬುದನ್ನು ತಿಳಿದುಕೊಂಡು, ಅವರ ಬಗ್ಗೆ ಪೂರ್ಣವಾದ ಮಾಹಿತಿ ಕಲೆ ಹಾಕಲು ಯತ್ನಿಸಿ. ಏಕೆಂದರೆ, ಮಕ್ಕಳು ಹಾದಿ ತಪ್ಪಲು ಕೆಲವೊಮ್ಮೆ ಸ್ನೇಹಿತರೂ ಕಾರಣರಾಗಿರುತ್ತಾರೆ. ನಿಮ್ಮ ಮಕ್ಕಳ ಸ್ನೇಹಿತರ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಪ್ರಯತ್ನಿಸಿ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com