ಅಧಿಕ ರಕ್ತದೊತ್ತಡದಿಂದ ಭಾರತದಲ್ಲಿ ಹೆಚ್ಚುತ್ತಿವೆ ಹೃದಯ ಸಂಬಂಧಿ ಕಾಯಿಲೆ !

ಅಧಿಕ ರಕ್ತದೊತ್ತಡ, ಡಯಾಬಿಟೀಸ್, ತಂಬಾಕು ಸೇವನೆ ಹಾಗೂ ಅಧಿಕ ಕೊಲೆಸ್ಟರಾಲ್ ಸೇವನೆ ಭಾರತದಲ್ಲಿ ಹೃದಯ ಸಂಬಂಧಿ ಕಾಯಿಲೆ ಹೆಚ್ಚಾಗಲು ಕಾರಣ
ಹೃದ್ರೋಗ(ಚಿತ್ರ ಕೃಪೆ: ಇಂಡಿಯನ್ ಎಕ್ಸ್ ಪ್ರೆಸ್ )
ಹೃದ್ರೋಗ(ಚಿತ್ರ ಕೃಪೆ: ಇಂಡಿಯನ್ ಎಕ್ಸ್ ಪ್ರೆಸ್ )

ವಾಷಿಂಗ್ಟನ್: ಅಧಿಕ ರಕ್ತದೊತ್ತಡ, ಡಯಾಬಿಟೀಸ್, ತಂಬಾಕು ಸೇವನೆ ಹಾಗೂ ಅಧಿಕ ಕೊಲೆಸ್ಟರಾಲ್ ಸೇವನೆ ಭಾರತದಲ್ಲಿ ಹೃದಯ ಸಂಬಂಧಿ ಕಾಯಿಲೆ ಹೆಚ್ಚಾಗಲು ಕಾರಣ ಎಂಬುದು  ಅಮೆರಿಕಾದ ಹೃದ್ರೋಗ ಕಾಲೇಜಿನ ಸಮೀಕ್ಷೆ ಮೂಲಕ ತಿಳಿದುಬಂದಿದೆ.

ಹೃದ್ರೋಗ ಸಮಸ್ಯೆ ಹಾಗೂ ಅದನ್ನು ನಿಯಂತ್ರಿಸುವ ಬಗ್ಗೆ ಜಾಗತಿಕ ಮಟ್ಟದಲ್ಲಿ ಸಂಶೋಧನೆ ನಡೆಸುತ್ತಿರುವ ಅಮೇರಿಕಾ ಸಂಶೋಧಕರು ಭಾರತದಲ್ಲಿ ಹೆಚ್ಚುತ್ತಿರುವ ಹೃದಯ ಸಂಬಂಧಿತ ಕಾಯಿಲೆಗೆ ಕಾರಣವನ್ನು ಪತ್ತೆಹಚ್ಚಿದ್ದಾರೆ.  ಆದರೆ ಹೃದ್ರೋಗಿಯ ಬಗ್ಗೆ ಕಾಳಜಿ ವಹಿಸುವ ವಿಚಾರದಲ್ಲಿ  ಅತಿ ಕಡಿಮೆ ಮಾಹಿತಿ ದೊರೆತಿದೆ ಎಂದು ತಿಳಿಸಿದ್ದಾರೆ.  ವಿಶ್ವದ ಎರಡನೇ ಪ್ರಸಿದ್ಧ ರಾಷ್ಟ್ರ ಭಾರತ ದಿನದಿಂದ ದಿನಕ್ಕೆ ಹೆಚ್ಚು ಹೃದ್ರೋಗ ಸಮಸ್ಯೆಗಳನ್ನು ಎದುರಿಸುತ್ತಿದೆ, ತಂಬಾಕು ಸೇವನೆ ಹಾಗೂ ದೈಹಿಕ ಚಟುವಟಿಕೆಗಳಲ್ಲಿ ಹಾಗೂ ಆಹಾರ ಸೇವನೆಯಲ್ಲಿ ಶಿಸ್ತು ಇಲ್ಲದೇ ಇರುವುದು ಇದಕ್ಕೆ ಪ್ರಮುಖ ಕಾರಣ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಅಮೆರಿಕಾದ ಹೃದ್ರೋಗ ಕಾಲೇಜು ನಡೆಸಿರುವ ಸಮೀಕ್ಷೆಯಲ್ಲಿ 68 ವಯೋಮಾನದ ಮೇಲ್ಪಟ್ಟ ಸುಮಾರು 196 ಜನರಿಂದ ಪ್ರರಿಕ್ರಿಯೆ ಪಡೆಯಲಾಗಿದೆ. ಹೃದಯ ಕಾಯಿಲೆಗಳು ಬಾಧಿಸುವುದಕ್ಕೆ  ಅಧಿಕ ರಕ್ತದೊತ್ತಡವೇ ಪ್ರಮುಖ ಕಾರಣ ಎಂದು ಶೇ.30 ಮಂದಿ ಅಭಿಪ್ರಾಯಪಟ್ಟಿದ್ದಾರೆ.

ಹೃದಯ ಸಂಬಂಧಿ ರೋಗಿಗಳ ಕಾಳಜಿಯ ಗುಣಮಟ್ಟ ಸುಧಾರಣೆ ಮಾಡಲು
ಸಮೀಕ್ಷೆ ನಡೆಸಿರುವ ಸಂಸ್ಥೆ  ಭಾರತದೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಈ ವರದಿಯನ್ನು ಅಮೆರಿಕಾದ ಪತ್ರಿಕೆಯಲ್ಲಿ ಪ್ರಕಟಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com