ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಜನಪ್ರಿಯ ವಯಸ್ಕರ ಚಲನಚಿತ್ರದ ಮೂಲಕ ವೃಷಣ ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸಲು ಪ್ರಯತ್ನ

ವೃಷಣ (ಟೆಸ್ಟಿಕಲ್) ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸಲು ಈ ರೀತಿಯ ಮೊದಲ ಅಭಿಯಾನದಲ್ಲಿ ಆಸ್ಟ್ರೇಲಿಯಾ ಮೂಲದ ಜಾಹೀರಾತು ಸಂಸ್ಥೆ ಮತ್ತು ವಯಸ್ಕರ ಸಿನೆಮಾ

ಸಿಡ್ನಿ: ವೃಷಣ (ಟೆಸ್ಟಿಕಲ್) ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸಲು ಈ ರೀತಿಯ ಮೊದಲ ಅಭಿಯಾನದಲ್ಲಿ ಆಸ್ಟ್ರೇಲಿಯಾ ಮೂಲದ ಜಾಹೀರಾತು ಸಂಸ್ಥೆ ಮತ್ತು ವಯಸ್ಕರ ಸಿನೆಮಾ ಸ್ಟುಡಿಯೋ ಜಂಟಿಯಾಗಿ, ಹೊಸದಾಗಿ ಬಿಡುಗಡೆಯಾದ ಪೋರ್ನ್ ಸಿನೆಮಾವೊಂದರಲ್ಲಿ ಸಾರ್ವಜನಿಕ ಆರೋಗ್ಯ ಸಂದೇಶವನ್ನು ಸೇರಿಸಿದ್ದಾರೆ.

'ಗೇಮ್ ಆಫ್ ಬಾಲ್ಸ್' ಎಂಬ ಈ ವಯಸ್ಕರ ಸಿನೆಮಾದಲ್ಲಿ ನಟಿ ಈವಾ ಲೋವಿಯಾ ಸಿನೆಮಾ ಆಕ್ಷನ್ ಮಧ್ಯೆ ನೋಡುಗನ ಜೊತೆ ನೇರವಾಗಿ ಮಾತನಾಡಿ ವೃಷಣ ಕ್ಯಾನ್ಸರ್ ಪತ್ತೆ ಹಚ್ಚುವ ವಿಧಾನವನ್ನು ಪ್ರದರ್ಶನ ನೀಡುತ್ತಾರೆ. ಇದಕ್ಕೆ ತನ್ನ ಸಹ ನಟರನ್ನು ಕೂಡ ಬಳಸಿಕೊಂಡಿದ್ದಾರೆ ಎಂದು ಕ್ಯಾಂಪೈನ್ ಏಷಿಯಾ.ಕಾಂ ವರದಿ ಮಾಡಿದೆ,

ನಂತರ ವೃಷಣ ಕ್ಯಾನ್ಸರ್ ಬಗ್ಗೆ ಹೆಚ್ಚಿನ ಮಾಹಿತಿ ನೀಡುವ playwithyourself.org ಅಂತರ್ಜಾಲ ತಾಣವನ್ನು ನೋಡುವಂತೆ ಮನವಿ ಮಾಡುತ್ತಾರೆ.

ಇದು ಹಾಲಿವುಡ್ಡಿನ 'ಗೇಮ್ ಆಫ್ ತ್ರೋನ್' ಸಿನೆಮಾವನ್ನು ಕುಚೋದ್ಯ ಮಾಡುವ ಸಿನೆಮಾ ಆಗಿದೆ. ಆಸ್ಟ್ರೇಲಿಯಾದ ಪುರುಷರು ಅತಿ ಹೆಚ್ಚು ಭೇಟಿ ನೀಡುವ www.digitalplayground.com ತಾಣದಲ್ಲಿ ಈ ಪೋರ್ನ್ ವಿಡಿಯೋವನ್ನು ಪ್ರಕಟಿಸಲಾಗಿದೆ.

ಇಲ್ಲಿಯವರೆಗೂ ಸುಮಾರು ೨ ಲಕ್ಷಕ್ಕೂ ಜನ ಈ ತಾಣಕ್ಕೆ ಭೇಟಿ ನೀಡಿದ್ದು, ೧.೫ ದಶಲಕ್ಷಕ್ಕೂ ಹೆಚ್ಚು ಬಾರಿ ಈ ವಿಡಿಯೋ ವೀಕ್ಷಿಸಿದ್ದಾರೆ.

Related Stories

No stories found.

Advertisement

X

Advertisement

X
Kannada Prabha
www.kannadaprabha.com