ಬೇಸಿಗೆ ಕಾಲದ ಡಯಟ್ ಗೆ ಆರೋಗ್ಯಕರ ತಿನಿಸು ಹಾಗೂ ಪಾನೀಯಗಳು

ಡಯಟ್ ಮಾಡುವವರಿಗಂತೂ ಬೇಸಿಗೆಯಲ್ಲಿ ಯಾವುದು ತಿನ್ನೋದು, ಏನು ತಿನ್ನೋದು ಎಂಬ ಗೊಂದಲ ಉಂಟಾಗುತ್ತೆ.
ಡಯಟ್ ಆಹಾರಗಳು
ಡಯಟ್ ಆಹಾರಗಳು

ಬೇಸಿಗೆ ಮುಗಿಯುತ್ತಾ ಬಂದರೂ ಸೂರ್ಯನ ಪ್ರಖರ ಬಿಸಿಲು ಮಾತ್ರ ಕಡಿಮೆಯಾಗುತ್ತಿಲ್ಲ. ಒಂದೆಡೆ ನೆತ್ತಿ ಸುಡುವ ಬಿಸಿಲು, ಮತ್ತೊಂದೆಡೆ ಎಷ್ಟೇ ನೀರು ಕುಡಿದರೂ ತಣಿಯದ ಬಾಯಾರಿಕೆ....
ಡಯಟ್ ಮಾಡುವವರಿಗಂತೂ  ಬೇಸಿಗೆಯಲ್ಲಿ ಯಾವುದು ತಿನ್ನೋದು, ಏನು ತಿನ್ನೋದು ಎಂಬ ಗೊಂದಲ ಉಂಟಾಗುತ್ತೆ.  ಹಾಗಂತ ಊಟ ತಿನ್ನದೇ ಉಪವಾಸ ಕೂಡ ಇರೋದಕ್ಕಾಗಲ್ಲ. ದೇಹಕ್ಕೆ ಅಗತ್ಯವಿರುವ ಪೌಷ್ಟಿಕಾಂಶಗಳನ್ನು ಪೂರೈಸಲೇ ಬೇಕಾಗುತ್ತೆ. ಪದೇ ಪದೇ ಕೇವಲ ನೀರನ್ನು ಕಡಿಯಲು ಬೇಜರಾಗುತ್ತೆ. ದೇಹಕ್ಕೆ ನೀರಿನ ಅಂಶ ಕಡಿಮೆಯಾದರೇ ನಿರ್ಜಲೀಕರಣ ಸಮಸ್ಯೆ ಉಂಟಾಗುತ್ತದೆ. ಹೀಗಾಗಿ ಹೆಚ್ಚಾಗಿ ನೀರು ಹಾಗೂ ಫೈಬರ್ ಅಂಶ ಇರುವ ಕೆಲವೊಂದು ಆರೋಗ್ಯಕರ ಆಹಾರ ನೀವು ಸೇವಿಸಬಹುದು. ಅದು ಯಾವ್ಯಾವು ಎನ್ನೋ ಮಾಹಿತಿ ಇಲ್ಲಿದೆ.

ಕಲ್ಲಂಗಡಿ ಹಣ್ಣು:
ನೀರಿನ ಅಂಶ ಹೆಚ್ಚಾಗಿರುವ ಕಲ್ಲಂಗಡಿ ಹಣ್ಣು ಡಯಟ್ ಮಾಡುವವರಿಗೆ ಹೇಳಿ ಮಾಡಿಸಿದ್ದು. ಶೇ. 92 ರಷ್ಟು ನೀರಿನ ಅಂಶ ಹೊಂದಿರುವ ಕಲ್ಲಂಗಡಿ ಹಣ್ಣನ್ನು ಸೇವಿಸುವುದರಿಂದ ಹೇದ ತಂಪಾಗಿರುವುದರ ಜೊತಗೆ ಸೂರ್ಯ ಕಿರಣಗಳಿಂದ ಚರ್ಮಕ್ಕೆ ಉಂಟಾಗುವ ಹಾನಿಯನ್ನು ತಪ್ಪಿಸುತ್ತದೆ.

ಜೋಳ: ಅತಿ ಹೆಚ್ಚಿನ ಫೈಬರ್ ಅಂಶ ಹಾಗೂ ಪೌಷ್ಟಿಕಾಂಶ ಹೊಂದಿರುವ ಹಸಿಜೋಳ ಡಯಟ್ ಪ್ರಿಯರಿಗೆ ಹೆಚ್ಚಿನ ಉಪಯೋಗ. ನಿಯಮಿತವಾಗಿ ಜೋಳ ತಿನ್ನುವುದರಿಂದ ಸೂರ್ಯನ ಅಪಾಯಕಾರಿ ವಿಕಿರಣಗಳಿಂದ ಉಂಟಾಗುವ ಚರ್ಮ ಸಮಸ್ಯೆಯನ್ನು ತಡೆಗಟ್ಟುತ್ತದೆ. ಹಾಗೆಯೇ ಮಹಿಳೆಯರಿಗೆ ಕಾಡುವ ವಯೋಸಹಜವಾದ ಸಮಸ್ಯೆಗಳನ್ನು ಕೂಡ ಬಗೆಹರಿಸುತ್ತೆ.

ಕೋಲ್ಡ್ ಕಾಫಿ: ಬೇಸಿಗೆಯಲ್ಲಿ ಬೆಳಗ್ಗಿನ ಜಾವ ಕೋಲ್ಡ್ ಕಾಫಿ ಸೇವಿಸುವುದು ಉತ್ತಮ.  ಪ್ರತಿದಿನ ಒಂದು ಲೋಟ ಕೋಲ್ಡ್ ಕಾಫಿ ಕುಡಿಯುತ್ತಾ ಬಂದರೆ ಚರ್ಮದ ಕ್ಯಾನ್ಸರ್ ಅನ್ನು ಕಡಿಮೆ ಮಾಡುತ್ತದೆ.

ಸೌತೆಕಾಯಿ: ತಾಜಾ ಸೌತೆಕಾಯಿ ಉರಿ ಬಿಸಿಲಿಗೆ ದೇಹವನ್ನು ತಂಪು ಮಾಡುವ ತರಕಾರಿ. ಸೌತೆಕಾಯಿ ಎಷ್ಟು ತಿನ್ನುತ್ತಿರೋ ಅಷ್ಟು ಒಳ್ಳೆಯದು. ಸೌತೆಕಾಯಿಯಲ್ಲಿ ನೀರಿನ ಅಂಶ ಹೆಚ್ಚು ಇರುವುದರಿಂದ ದೇಹದಲ್ಲಿರುವ ಕೆಟ್ಟ ವಿಷಕಾರಿ ಅಂಶಗಳನ್ನು ಹೊರ ಹಾಕುತ್ತದೆ. ಜೊತೆಗೆ ಡಿ ಹೈಡ್ರೇಶನ್ ತಡೆಗಟ್ಟುತ್ತದೆ.

ಐಸ್ ಟೀ: ಪ್ರತಿನಿತ್ಯ ಒಂದು ಲೋಟ ಐಸ್ ಟೀ ಕುಡಿಯುವುದರಿಂದ ನಿಮ್ಮ ಇಡಿ ದಿನ ಚೆನ್ನಾಗಿರುತ್ತದೆ. ಸಕ್ಕರೆ ಕಾಯಿಲೆ ಇರುವವರಿಗೆ ಇದು ತುಂಬಾ ಉಪಕಾರಿ. ಡಯಾಬಿಟಿಕ್ ರೋಗಿಗಳ ಹಲ್ಲು, ಮತ್ತು ವಸಡು ಹಾಗೂ ಮೂಳೆಯನ್ನು ಗಟ್ಟಿಯಾಗಿಸುತ್ತದೆ.

ಮೊಸರು: ಮೊಸರಿನಲ್ಲಿ ಅಧಕ ಪೊಟ್ಯಾಶಿಯಂ, ಕ್ಯಾಲ್ಸಿಯಂ, ಪ್ರೋಟೀನ್ ಮತ್ತು ವಿಟಮಿನ್ ಇರುವುದರಿಂದ ದೇಹಕ್ಕೆ ಉತ್ತಮ. ಮೊಸರು ಸೇವನೆಯಿಂದ ಗ್ಯಾಸ್ಟ್ರಿಕ್ ಸಮಸ್ಯೆ ಬರುವುದಿಲ್ಲ. ಜೊತೆಗೆ ಉದರ ಸಂಬಂಧ ರೋಗಗಳಿಂದ ದೂರವಿರಬಹುದು.

ಮಾವಿನ ಹಣ್ಣು: ಹಣ್ಣುಗಳ ರಾಜಾ ಮಾವು. ಇದರಲ್ಲಿ ಅಘಾದ ಪ್ರಮಾಣದ ಪೊಟ್ಯಾಸಿಯಂ ಇರುತ್ತದೆ. ಬೇಸಿಗೆಯೇ ಈ ಹಣ್ಣು ಬರುವ ಸೀಸನ್. ಮಾವಿನ ಹಣ್ಣನ್ನು ಹೆಚ್ಚೆಚ್ಚು ತಿನ್ನುವುದರಿಂದ ರಕ್ತದ ಒತ್ತಡ ನಿಯಂತ್ರಿಸುತ್ತದೆ. ಜೊತೆಗೆ ಹೃಯದ ಸಂಬಂಧಿ ರೋಗಗಳಿಂದ ದೂರವಿಡುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com