ಆತಂಕದಿಂದ ಅಸ್ತಮಾ ಉಲ್ಬಣಗೊಳ್ಳುತ್ತದೆ: ಅಧ್ಯಯನ

ಹೆಚ್ಚಿನ ಆತಂಕದಿಂದ ಅಸ್ತಮಾ ಉಲ್ಬಣಗೊಳ್ಳುತ್ತದೆ, ಜೊತೆಗೆ ಶ್ವಾಸಕೋಶದ ಕಾರ್ಯ ನಿರ್ವಹಣೆಯಲ್ಲಿ ಏರುಪೇರು ಉಂಟಾಗುತ್ತದೆ ಎಂದು ಅಧ್ಯಯನ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ವಾಷಿಂಗ್ಟನ್: ಹೆಚ್ಚಿನ ಆತಂಕದಿಂದ ಅಸ್ತಮಾ ಉಲ್ಬಣಗೊಳ್ಳುತ್ತದೆ, ಜೊತೆಗೆ ಶ್ವಾಸಕೋಶದ ಕಾರ್ಯ ನಿರ್ವಹಣೆಯಲ್ಲಿ ಏರುಪೇರು ಉಂಟಾಗುತ್ತದೆ ಎಂದು ಅಧ್ಯಯನ ವರದಿಯೊಂದು ತಿಳಿಸಿದೆ.

ಥೆರಪಿ ಚಿಕಿತ್ಸೆ ತೆಗೆದುಕೊಳ್ಳುವುದರಿಂದ ಆತಂಕ ಕಡಿಮೆಯಾಗಿ ಅಸ್ತಮಾ ರೋಗಿಗಳ ಶ್ವಾಸಕೋಶ ಸರಿಯಾಗಿ ಕಾರ್ಯ ನಿರ್ವಹಿಸಲು ಸಹಾಯವಾಗುತ್ತದೆ ಎಂದು ಅಧ್ಯಯನ ವರದಿ ತಿಳಿಸಿದೆ.

ಅಸ್ತಮಾ ರೋಗಿಗಳು ತುಂಬಾ ಸೂಕ್ಷ್ಮವಾಗಿರುತ್ತಾರೆ. ಆಂತಕದಿಂದ ಭಯ ಉಂಟಾಗಿ ಅವರನ್ನು ಹೆಚ್ಚು ದುರ್ಬಲಗೊಳಿಸುವುದರಿಂದ ಆತಂಕ ಪಟ್ಟುಕೊಳ್ಳುವುದು ಹೆಚ್ಚು ಅಪಾಯಕಾರಿಯಾಗಿದೆ.

ಅಮೆರಿಕಾದ ಸಿಂಕ್ಸಿನ್ನಟಿ ವಿಶ್ವವಿದ್ಯಾನಿಲಯ ನಡೆಸಿದ ಸಂಶೋಧನೆಯಿಂದ ಇದು ಸಾಬೀತಾಗಿದ್ದು, ಹಲವು ಥೆರಪಿಗಳು, ಹಾಗೂ ನಿರಂತರ ವ್ಯಾಯಾಮ, ಅಗತ್ಯ ಔಷಧಿಗಳ ಸೇವನೆಯಿಂದ ಅಸ್ತಮಾ ರೋಗಿಗಳ ಆತಂಕ ದೂರ ಮಾಡಿ ಎದುರಾಹಬಹುದಾದ ಅಪಾಯವನ್ನು ತಪ್ಪಿಸಬಹುದಾಗಿದೆ ಎಂದು ವರದಿ ತಿಳಿಸಿದೆ.


ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com