ಪೋಷಕರ ಪ್ರಾಬಲ್ಯ ಮಕ್ಕಳ ಆತ್ಮವಿಶ್ವಾಸವನ್ನು ಕುಗ್ಗಿಸುತ್ತದೆ!

ಪೋಷಕರ ಪ್ರಾಬಲ್ಯಯುತ ವರ್ತನೆ, ಮಕ್ಕಳ ಸ್ವಾಭಿಮಾನದ ಮೇಲೆ ಪರಿಣಾಮ ಬೀರಲಿದೆಯಂತೆ.
ಪೋಷಕರ ಪ್ರಾಬಲ್ಯಯುತ ವರ್ತನೆ(ಸಾಂದರ್ಭಿಕ ಚಿತ್ರ)
ಪೋಷಕರ ಪ್ರಾಬಲ್ಯಯುತ ವರ್ತನೆ(ಸಾಂದರ್ಭಿಕ ಚಿತ್ರ)

ವಾಷಿಂಗ್ಟನ್: ಪೋಷಕರ ಪ್ರಾಬಲ್ಯಯುತ ವರ್ತನೆ, ಮಕ್ಕಳ ಸ್ವಾಭಿಮಾನದ ಮೇಲೆ ಪರಿಣಾಮ ಬೀರಲಿದೆಯಂತೆ.
ಬ್ರಿಟನ್ ನ  ಸಸೆಕ್ಸ್ ವಿಶ್ವವಿದ್ಯಾಲಯದ ಸಂಶೋಧನಾ ನಿರತ ವಿಜ್ಞಾನಿಗಳು ಮೊದಲ ಬಾರಿಗೆ ವಿವಿಧ ಸಂಸ್ಕೃತಿಗಳಲ್ಲಿರುವ ಅಧಿಕಾರಯುತವಾದ ವರ್ತನೆ ಮಕ್ಕಳ ಸ್ವಾಭಿಮಾನದ ಮೇಲೆ ಬೀರುವ ಪರಿಣಾಮದ ಬಗ್ಗೆ ಸಂಶೋಧನೆ ಮಾಡಿದ್ದಾರೆ. 
ಪಶ್ಚಿಮ ಲಂಡನ್ ನಲ್ಲಿ ವಾಸಿಸುವ 125 ಇಂಗ್ಲೀಶ್ ಹಾಗೂ ಭಾರತೀಯ ಕುಟುಂಬದವರನ್ನು ಸಂದರ್ಶಿಸಿರುವ ಮನಶಾಸ್ತ್ರಜ್ಞರು ಇಂಗ್ಲೀಶ್ ಸಂಸ್ಕೃತಿಯ ತಾಯಂದಿರು ಹೆಚ್ಚು ಋಣಾತ್ಮಕ ಪೋಷಕರ ಲಕ್ಷಣಗಳನ್ನು ಹೊಂದಿದ್ದು ಮಕ್ಕಳ ಆತ್ಮವಿಶ್ವಾಸವನ್ನು ಕುಗ್ಗಿಸುತ್ತದೆ ಎಂದು ಹೇಳಿದ್ದಾರೆ. ಭಾರತೀಯ ಸಂಸ್ಕೃತಿಯಲ್ಲಿ ತಂದೆಯೇ ಕುಟುಂಬದ ಮುಖ್ಯಸ್ಥನಾಗಿದ್ದು ಭಾರತೀಯ ಮಕ್ಕಳ ಮೇಲೆ ತಂದೆಯ ವರ್ತನೆ ಹೆಚ್ಚು ಪರಿಣಾಮ ಬೀರಲಿದೆ ಎಂದು ಸಂಶೋಧಕರು ಹೇಳಿದ್ದಾರೆ.
ಪಾಶ್ಚಿಮಾತ್ಯ ಸಂಸ್ಕೃತಿಯಲ್ಲಿ ತಾಯಂದಿರಿಗೆ ಮಕ್ಕಳನ್ನು ಪೋಷಿಸುವ ಜವಾಬ್ದಾರಿ ಹೆಚ್ಚಿದೆ. ಬೇರೆ ಬೇರೆ ಸಂಸ್ಕೃತಿಗಳಲ್ಲಿ ತಂದೆ-ತಾಯಿಯರ ಪಾತ್ರ ಬೇರೆ ಬೇರೆ ರೀತಿಯಲ್ಲಿದ್ದು ಸಂಶೋಧನೆ ವೇಳೆ ತಿಳಿದುಬಂದಿರುವ ಅಂಶಗಳು ಪೋಷಕರ ಅಧಿಕಾರಯುತವಾದ ವರ್ತನೆ ಮಕ್ಕಳ ಆತ್ಮವಿಶ್ವಾಸದ ಮೇಲೆ ಪರಿಣಾಮ ಬೀರಲಿದೆ ಎಂದು ಸಂಶೋಧಕರು ಹೇಳಿದ್ದಾರೆ. ಕ್ರಾಸ್ ಕಲ್ಚರಲ್ ಸೈಕಾಲಜಿ ಗೆ ಸಂಬಂಧಿಸಿದ ಜರ್ನಲ್ ನಲ್ಲಿ ಈ ಅಧ್ಯಯನ ವರದಿ ಪ್ರಕಟವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com