
ಸ್ಮಾರ್ಟ್ ಫೋನ್ ಗಳಿಂದ ಸಮಸ್ಯೆಗೆ ಕಾರಣ ಎಂದು ದೂರುವವರಿಗೆ ಇಲ್ಲೊಂದು ಉಲ್ಟಾ ಸುದ್ದಿ. ಬೈಪೋಲಾರ್ ಕಾಯಿಲೆ ಸೇರಿದಂತೆ ಹಲವು ಮನೋರೋಗಗಳನ್ನು ಸ್ಮಾರ್ಟ್ಫೋನ್‍ಗಳ
ಮೂಲಕ ಕಂಡುಹಿಡಿಯಬಹುದೆಂದು ಇಟಲಿಯ ಸಂಶೋಧನಕಾರರು ಅಧ್ಯಯನದ ಮೂಲಕ ಬಹಿರಂಗಪಡಿಸಿದ್ದಾರೆ.
ಸ್ಮಾರ್ಟ್ಫೋನ್‍ಗಳ ಇನ್‍ಬಿಲ್ಟ್ ಸೆನ್ಸಾರ್‍ಗಳನ್ನು ಪ್ರಾಕ್ಸಿಯಾಗಿ ಬಳಸಿ ದಿಢೀರ್ ಮೂಡ್ ಬದಲಾಗುವ ಪರಿಯನ್ನು ಕಂಡುಹಿಡಿಯಬಹುದು. ಆಕ್ಸಿಲೋಮೀಟರ್ ಮತ್ತು ಜಿಪಿಎಸ್ ಈ ಅಧ್ಯಯನದಲ್ಲಿ ಬಳಕೆಗೆ ಬರಲಿದೆ ಎಂದು ಅವರು ಹೇಳಿದ್ದಾರೆ.
Advertisement