ಯಾವಾಗ ಯಾವ ಫುಡ್ ತಿನ್ಬೇಕು?

ನಾವು ತಿನ್ನುವ ಎಲ್ಲ ಆಹಾರಗಳು ಎಲ್ಲ ವೇಳೆಯಲ್ಲೂ ಕರೆಕ್ಟ್ ಅಲ್ಲ. ಹಾಗಾದರೆ, ನಾವು ಯಾವ್ಯಾವ ಸಂದರ್ಭದಲ್ಲಿ ಏನನ್ನು ತಿನ್ನಬೇಕು? ಯಾವ ಆಹಾರವನ್ನು ದೂರವಿಡಬೇಕು?
ಯಾವಾಗ ಯಾವ ಫುಡ್ ತಿನ್ಬೇಕು?

ನಾವು ತಿನ್ನುವ ಎಲ್ಲ ಆಹಾರಗಳು ಎಲ್ಲ ವೇಳೆಯಲ್ಲೂ ಕರೆಕ್ಟ್ ಅಲ್ಲ. ಹಾಗಾದರೆ, ನಾವು ಯಾವ್ಯಾವ ಸಂದರ್ಭದಲ್ಲಿ ಏನನ್ನು ತಿನ್ನಬೇಕು? ಯಾವ ಆಹಾರವನ್ನು ದೂರವಿಡಬೇಕು?

ಒತ್ತಡಯುಕ್ತ ಕೆಲಸದ ವೇಳೆ: ಕಚೇರಿಯಲ್ಲಿ ಕೆಲಸ ಹೆಚ್ಚಿರುವಾಗ ಸಹಜವಾಗಿ ಒತ್ತಡವಿರುತ್ತದೆ. ಹಾರ್ಟ್ ರೇಟನ್ನು ಜಾಸ್ತಿ ಮಾಡುವ ಕೆಲವು ಆಹಾರವನ್ನು ಈ ವೇಳೆ ತಿನ್ನಲೇಬಾರದು. ನರಗಳ ಮೇಲೆ ನೇರವಾಗಿ ಪ್ರಭಾವ ಬೀರುವ ಕಾಫಿ, ಚಾಕೊಲೇಟ್, ಎನರ್ಜಿ ಡ್ರಿಂಕ್ಸ್ ಗಳನ್ನು ಆದಷ್ಟು ದೂರವಿಡಬೇಕು.
ಬ್ಲ್ಯಾಕ್ ಟೀ, ಗೋದಿ ಬ್ರೆಡ್, ಹಣ್ಣಿನ ರಸಗಳನ್ನು ಈ ವೇಳೆ ಸೇವಿಸುವುದರಿಂದ ಹೃದಯವು ಸರಾಸರಿ ಧಾಟಿಯಲ್ಲಿ ಕೆಲಸ ನಿರ್ವಹಿಸುತ್ತದೆ. ಮಾಡುವ ಕೆಲಸಗಳ ಫಲಿತಾಂಶವೂ ಚೆನ್ನಾಗಿರುತ್ತದೆ.
ವರ್ಕೌಟ್ ಮಾಡುವಾಗ :ಜ್ಯೂಸ್, ಸೋಡಾದಂಥ ಹೆಚ್ಚು ಸಕ್ಕರೆಯುಳ್ಳ ಪೇಯಗಳನ್ನು ಸೇವಿಸಬಾರದು. ಕರಿದ ಪದಾರ್ಥಗಳನ್ನು ಮುಟ್ಟಲೇಬಾರದು. ಕೊಬ್ಬು ಹೆಚ್ಚಿರುವ ಪದಾರ್ಥಗಳ ಸಹವಾಸಕ್ಕೂ ಹೋಗಬೇಡಿ. ಬೇಯಿಸಿದ ಆಲೂಗಡ್ಡೆಯಲ್ಲಿ ಕಾರ್ಬೋಹೈಡ್ರೇಟ್ ಅಂಶ ಹೆಚ್ಚಿರುತ್ತದೆ. ಅದನ್ನು ಸೇವಿಸಿ. ಮೊಳಕೆ ಬರಿಸಿದ ಕಾಳು, ಮೀನು, ಸ್ಲಿಮ್ ಮಿಲ್ಕ್ ಸೇವಿಸಿ. ಆದಷ್ಟು ನೀರು ಕುಡಿಯಿರಿ. ಋತುಚಕ್ರದ ವೇಳೆ: ಉಷ್ಣಯುಕ್ತ ಪದಾರ್ಥ ಸೇವನೆ ಬೇಡ. ಕಾಫಿ, ಟೀ ಬಿಟ್ಟುಬಿಡಿ. ರಕ್ತದಲ್ಲಿನ ಶುಗರ್ ಪ್ರಮಾಣವನ್ನು ಏರುಪೇರುಗೊಳಿಸುವ ಯಾವುದೇ ಆಹಾರವನ್ನು ಸೇವಿಸಲು ಹೋಗಬೇಡಿ. ಐಸ್‍ ಕ್ರೀಮ್ ಅನ್ನು ದೂರವಿಡಿ. ಮಶ್ರೂಮ್ , ಡೈರಿ ಉತ್ಪನ್ನಗಳು, ಮೊಟ್ಟೆಯಲ್ಲಿ ಅತ್ಯಧಿಕ `ವಿಟಮಿನ್ ಡಿ' ಅಂಶಗಳು ಇರುತ್ತವೆ. ಇವು ಹಾರ್ಮೋನ್ ಏರುಪೇರಾಗುವಿಕೆಯನ್ನು ನಿಯಂತ್ರಿಸುತ್ತವೆ. ಹಾಲು, ಸೊಪ್ಪು, ಹಣ್ಣಿನ ಸೇವನೆ ಒಳ್ಳೆಯದು.
ಸೆಕ್ಸ್‍ಗೂ ಮುನ್ನ:
ಹೊಟ್ಟೆಯಲ್ಲಿ ಗ್ಯಾಸ್ ಅನ್ನು ಉತ್ಪಾದಿಸುವ ಬೀನ್ಸ್ ಅನ್ನು ಅವಾಯ್ಡ್ ಮಾಡಿ. ಕರಿದ ಪದಾರ್ಥಗಳು ನಿಮ್ಮ ಮೂಡನ್ನು ಕಸಿಯಬಹುದು. ಹಲಸಿನ ಹಣ್ಣಿನ ಸೇವನೆ ಒಳ್ಳೆಯದಲ್ಲ. ಸಮತೋಲಿತ ಆಹಾರ. ಹಣ್ಣು, ನುಗ್ಗೇಕಾಯಿ, ಶುದ್ಧನೀರು, ಪ್ರೊಟಿನ್ ಯುಕ್ತ ಮೀನು, ಕಲ್ಲಂಗಡಿ, ಜೇನುತುಪ್ಪ, ಬೆಳ್ಳುಳ್ಳಿ, ಈರುಳ್ಳಿ, ವೆನಿಲಾ, ಬಾಳೇಹಣ್ಣನ್ನು ಆದಷ್ಟು ಸೇವಿಸಿ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com