
ವಾಷಿಂಗ್ಟನ್: ಮಾಂಸಾಹಾರ ಆರೋಗ್ಯಕ್ಕೆ ಮಾರಕ ಎಂಬ ಮಾತುಗಳ ನಡುವೆ ಇದೀಗ ಸಂಸ್ಕರಿತ ಮಾಂಸದಿಂದ ಕ್ಯಾನ್ಸರ್ ಬರುವ ಅಪಾಯ ಎದುರಾಗಿದೆ.
ಧೂಮಪಾನದಿಂದ ಬರಬಹುದಾದ ಕ್ಯಾನ್ಸರ್ ರೋಗವನ್ನೇ ಸಂಸ್ಕರಿತ ಮಾಂಸಗಳೂ ತರಲಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ. ಶೀಘ್ರದಲ್ಲಿಯೇ ಒಣಗಿಸಿದ ಹಂದಿ ಮಾಂಸ, ಸಾಸೇಜ್‍ಗಳು ಮತ್ತಿತರ ಸಂಸ್ಕರಿತ ಮಾಂಸಗಳಿಂದ ಕ್ಯಾನ್ಸರ್ ಬರಲಿದೆ ಎಂದು ಡಬ್ಲುಹೆಚ್‍ಓ ಅಧಿ ಕೃತವಾಗಿ ಘೋಷಿಸಲಿದ್ದು ಈ ಪಟ್ಟಿಯಲ್ಲಿ ರೆಡ್ ಮೀಟ್‍ಅನ್ನೂ ಸೇರಿಸುವುದು ಖಚಿತ ಎನ್ನಲಾಗಿದೆ. ಡೈಲಿ ಮೇಲ್ ಗೆ ವರದಿ ಬಂದಿರುವ ಪ್ರಕಾರ ಇದೇ ಸೋಮವಾರ ಘೋಷಣೆಯಾಗಲಿದ್ದು, ಸಿಗರೇಟು, ಮದ್ಯಮತ್ತು ಕಲ್ನಾರುಗಳ ರೀತಿಯೇ ಇದನ್ನೂ ನಿಬಂಧನೆ ಗೊಳಪಡಿಸಲಾಗುತ್ತದಂತೆ.
ದಶರಾಷ್ಟ್ರಗಳ ವಿಜ್ಞಾನಿಗಳು ಎಲ್ಲ ತಪಾಸಣೆ ಮತ್ತು ಸಾಕ್ಷ್ಯಗಳನ್ನು ಆಧರಿಸಿ ವರದಿ ತಯಾರಿಸಿದ್ದು, ಮನುಷ್ಯರಿಗೆ ಕರುಳು ಕ್ಯಾನ್ಸರ್ ತರುವ ಅಂಶಗಳು ಇದರಲ್ಲಿ ಕಂಡುಬಂದಿದೆ. ವಿಶ್ವಸಂಸ್ಥೆಯೇ ಈ ಎಚ್ಚರಿಕೆ ನೀಡಿರುವುದರಿಂದ ಇನ್ನುಮುಂದೆ ಮಾಂಸದ ಪ್ಯಾಕ್‍ಗಳ ಮೇಲೆ ಎಚ್ಚರಿಕೆ ಸಂದೇಶ ಹಾಕಬೇಕಾಗಬಹುದು. ಕಡಿಮೆ ಮಾಂಸ ತಿನ್ನುವವರಿಗೆ ಅಪಾಯ ಸಾಧ್ಯತೆಯೂ ಕಮ್ಮಿ ಎನ್ನಲಾಗಿದ್ದು, ಗೋಮಾಂಸ, ಕುರಿ ಮತ್ತು ಹಂದಿ ಮಾಂಸಗಳು ಕಡಿಮೆ ಪ್ರಮಾಣದಲ್ಲಿ ತಿನ್ನೋದು ಆರೋಗ್ಯಕ್ಕೆ ಉಪಯುಕ್ತವಂತೆ. ಇದರಿಂದ ಉತ್ತಮ ಪ್ರೊಟೀನ್ ಲಭಿಸುವುದು ಎಂದು ಆರೋಗ್ಯತಜ್ಞರು ಹೇಳಿದ್ದಾರೆ.
Advertisement