ಬೆಳಿಗ್ಗೆ ಹೊತ್ತು ಹೆಚ್ಚು ಬೆಳಕು ಬಿದ್ದರೆ ಮಕ್ಕಳಲ್ಲಿ ತೂಕ ಹೆಚ್ಚುತ್ತದೆ: ಅಧ್ಯಯನ
ಮೆಲ್ಬೋರ್ನ್:ಮಕ್ಕಳ ತೂಕಕ್ಕೆ ಸಂಬಂಧಿಸಿದಂತೆ ಪೋಷಕರಿಗೆ ಎಚ್ಚರಿಕೆ ನೀಡುವಂತಹ ಹೊಸ ಸಂಶೋಧನೆಯೊಂದು ನಡೆದಿದೆ.
ಜಗತ್ತಿನಲ್ಲಿ ಮೊದಲ ಬಾರಿಗೆ ಮಕ್ಕಳ ತೂಕದ ಮೇಲೆ ಬೆಳಿಗ್ಗೆ ಹೊತ್ತು ಹೆಚ್ಚು ಬೆಳಕು ಬೀರುವ ಪರಿಣಾಮದ ಬಗ್ಗೆ ಅಧ್ಯಯನ ನಡೆದಿದ್ದು ಅತಿ ಹೆಚ್ಚು ಬೆಳಕಿಗೆ ತೆರೆದುಕೊಳ್ಳುವ ಮಕ್ಕಳ ತೂಕ ಹೆಚ್ಚುತ್ತದೆ ಎಂದು ಅಧ್ಯಯನ ವರದಿ ತಿಳಿಸಿದೆ.
ಬ್ರಿಸ್ಬೇನ್ ಶಿಶುಪಾಲನಾ ಕೇಂದ್ರಗಳಲ್ಲಿ 5 -6 ವರ್ಷದ 48 ಮಕ್ಕಳನ್ನು 15 ದಿನಗಳ ವರೆಗೆ ಸಂಶೋಧನೆಗೊಳಪಡಿಸಲಾಗಿತ್ತು. ಈ ಅವಧಿಯಲ್ಲಿ ನಿದ್ದೆ, ಬೆಳಕಿಗೆ ನಿಲ್ಲುವುದು ಸೇರಿದಂತೆ ಪ್ರತಿ ಮಗುವಿನ ಚಟುವಟಿಕೆಗಳ ಬಗ್ಗೆ ವಿಶೆಷ ಗಮನ ನೀಡಲಾಗಿದ್ದು ಅತಿ ಹೆಚ್ಚು ಬೆಳಕು ಬೀಳುವ ಮಕ್ಕಳ ತೂಕ ಹೆಚ್ಚುತ್ತದೆ ಎಂಬುದನ್ನು ಕಂಡುಕೊಳ್ಳಲಾಗಿದೆ.
ಸ್ವಾಭಾವಿಕ ಬೆಳಕಷ್ಟೇ ಅಲ್ಲದೇ ಮೊಬೈಲ್ ಫೋನ್, ರಾತ್ರಿಯ ಬೆಳಕು , ಟ್ಯಾಬ್ ಗಳ ಹೆಚ್ಚು ಬೆಳಕಿನಿಂದಲೂ ಮಕ್ಕಳ ತೂಕ ಹೆಚ್ಚಾಗುತ್ತದೆ ಎಂದು ಕ್ವೀನ್ಸ್ ಲ್ಯಾಂಡ್ ವಿಶ್ವವಿದ್ಯಾನಿಲಯದ ಪಿ.ಹೆಚ್.ಡಿ ವಿದ್ಯಾರ್ಥಿನಿ ಕಸ್ಸಂದ್ರ ಪ್ಯಾಟಿನ್ಸನ್ ಹೇಳಿದ್ದಾರೆ.
ತೀಕ್ಷ್ಣ ಬೆಳಕಲ್ಲಿ ಹೆಚ್ಚು ಕಾಲ ಇರುವ ಮಕ್ಕಳ ತೂಕ ಹೆಚ್ಚಿರುವುದು ಅಧ್ಯಯನ ವರದಿಯಲ್ಲಿ ಸ್ಪಷ್ಟವಾಗಿದೆ. ದೈಹಿಕ ಚಟುವಟಿಕೆ ತೂಕ ಏರುಪೇರಾಗುವುದಕ್ಕೆ ಕಾರಣವಾಗುವುದಿಲ್ಲ. ಆದರೆ ಮಕ್ಕಳು ಮಲಗುವ ಸಮಯ ಹಾಗೂ ಬೆಳಕು ಮಕ್ಕಳ ತೂಕದ ಮೇಲೆ ಪರಿಣಾಮ ಬೀರಲಿದೆ. ಆದರೆ ಇದೇ ವಿಷಯ ವಯಸ್ಕರಿಗೆ ತದ್ವಿರುದ್ಧವಾಗಿದ್ದು ಅತಿ ಹೆಚ್ಚು ಬೆಳಕಿಗೆ ಅನಾವರಣಗೊಳ್ಳುವವರ ತೂಕ ಕಡಿಮೆಯಾಗಲಿದೆ ಎಂದು ಸಂಶೋಧಕರು ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ