ಸಾಮಾನ್ಯವಾಗಿ ಸೂಚಿಸಲಾಗುವ ಔಷಧಗಳಿಂದ ಮೆದುಳಿನ ಮೇಲೆ ಪ್ರತಿಕೂಲ ಪರಿಣಾಮ!

ಆರೋಗ್ಯದಲ್ಲಿ ಸಣ್ಣ ಏರುಪೇರಾದರೆ ಸಾಮಾನ್ಯವಾಗಿ ಎಲ್ಲರೂ ಒಂದೇ ರೀತಿಯ ಡೆಪ್ರೆಸೆಂಟ್(ಔಷಧ) ತೆಗೆದುಕೊಳ್ಳುವುದು ಮೆದುಳಿನ ಮೇಲೆ ಗಂಭೀರ ಪರಿಣಾಮ ಉಂಟಾಗಲಿದೆ
ಮೆದುಳು
ಮೆದುಳು

ನ್ಯೂಯಾರ್ಕ್: ಆರೋಗ್ಯದಲ್ಲಿ ಸಣ್ಣ ಏರುಪೇರಾದರೆ ಸಾಮಾನ್ಯವಾಗಿ ಒಂದೇ ರೀತಿಯ ಡೆಪ್ರೆಸೆಂಟ್(ಔಷಧ)  ಸೂಚಿಸುವ ರೂಢಿ ಇದೆ. ಆದರೆ ಈ ರೀತಿ ಮಾಡುವುದರಿಂದ ಮೆದುಳಿನ ಮೇಲೆ ಗಂಭೀರ ಪರಿಣಾಮ ಉಂಟಾಗಲಿದೆ ಎಂದು ಹೊಸ ಸಂಶೋಧನೆ ಎಚ್ಚರಿಸಿದೆ.

ಖಿನ್ನತೆಯೂ ಸೇರಿದಂತೆ ವಿವಿಧ ಕಾಯಿಲೆಗಳಿಗೆ ಸಾಮಾನ್ಯವಾಗಿ ಸೂಚಿಸಲಾಗುವ ಔಷಧಗಳು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಸಂಶೋಧನೆ ತಿಳಿಸಿದೆ. ಜೊಲೋಫ್ಟ್ ಎಂಬ ಆಂಟಿ ಡೆಪ್ರೆಸೆಂಟ್ ಖಿನ್ನತೆಗೊಳಗಾದ ಜನರಲ್ಲಿ ಮೆದುಳಿನ ಒಂದು ಪ್ರದೇಶದ ಗಾತ್ರವನ್ನು ಹೆಚ್ಚಿಸಿದರೆ, ಇದೇ ಡ್ರಗ್ ಖಿನ್ನತೆಗೊಳಗಾಗದ ವ್ಯಕ್ತಿಗಳಲ್ಲಿ ಮೆದುಳಿನ ಎರಡೂ ಭಾಗದ ಗಾತ್ರವನ್ನು ಕಡಿಮೆ ಮಾಡಿರುವುದು ಸಂಶೋಧನೆ ಮೂಲಕ ಬೆಳಕಿಗೆ ಬಂದಿದೆ.
ಖಿನ್ನತೆಯೂ ಸೇರಿದಂತೆ ಹಲವು ಕಾಯಿಲೆಗಳಿಗೆ ಜೋಲೋಫ್ಟ್ ಎಂಬ ಔಷಧವನ್ನು ಸಾಮಾನ್ಯವಾಗಿ ಸೂಚಿಸಲಾಗುತ್ತಿದೆ, ಈ ಹಿನ್ನೆಲೆಯಲ್ಲಿ ಸಂಶೋಧನೆಯಲ್ಲಿ ಬೆಳಕಿಗೆ ಬಂದಿರುವ ಅಂಶಗಳನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಸಂಶೋಧನಾ ತಂಡದಲ್ಲಿದ್ದ ಕರೋಲ್ ಶಿವೆಲಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com