ಕಿಡ್ನಿ ಕಲ್ಲಿನ ಸಮಸ್ಯೆಯಿಂದ ಮಕ್ಕಳಲ್ಲಿ ಹೃದಯ ಸಂಬಂಧಿ ಸಮಸ್ಯೆಯೂ ಎದುರಾಗುವ ಸಾಧ್ಯತೆ!

ಮಕ್ಕಳಲ್ಲಿ ಕಂಡುಬರುವ ಮೂತ್ರಪಿಂಡದ ಕಲ್ಲುಗಳ ಸಮಸ್ಯೆಗಳು ಹೃದಯ ರೋಗಗಳಿಗೂ ಸಂಬಂಧಿಸಿರುತ್ತವೆ ಎಂಬ ಅಂಶ ಹೊಸ ಸಂಶೋಧನೆಯಿಂದ ಹೊರಬಿದ್ದಿದೆ.
ಕಿಡ್ನಿ ಕಲ್ಲಿನ ಸಮಸ್ಯೆ
ಕಿಡ್ನಿ ಕಲ್ಲಿನ ಸಮಸ್ಯೆ

ನ್ಯೂಯಾರ್ಕ್: ಮಕ್ಕಳಲ್ಲಿ ಕಂಡುಬರುವ ಮೂತ್ರಪಿಂಡದ ಕಲ್ಲುಗಳ ಸಮಸ್ಯೆಗಳು ಹೃದಯ ರೋಗಗಳಿಗೂ ಸಂಬಂಧಿಸಿರುತ್ತವೆ ಎಂಬ ಅಂಶ ಹೊಸ ಸಂಶೋಧನೆಯಿಂದ ಹೊರಬಿದ್ದಿದೆ.
ಈ ಹಿಂದಿನ ಸಂಶೋಧನೆಯಲ್ಲಿ ಕಿಡ್ನಿ ಸಮಸ್ಯೆಯಿಂದ ಉಂಟಾಗುವ ಅಥೆರೋಸ್ಕ್ಲೆರೋಸಿಸ್ ಎಂಬ ಸ್ಥಿತಿಯಿಂದಾಗಿ ವಯಸ್ಕರಿಗೆ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳು ಸಂಭವಿಸುತ್ತವೆ ಎಂದು ಹೇಳಲಾಗಿತ್ತು. ಆದರೆ ಇತ್ತೀಚಿನ ಸಂಶೋಧನೆ ಪ್ರಕಾರ ಅಥೆರೋಸ್ಕ್ಲೆರೋಸಿಸ್ ಯಿಂದಾಗಿ ಮಕ್ಕಳಿಗೂ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳು ಉಂಟಾಗುತ್ತವೆ ಎಂದು ಹೇಳಲಾಗಿದೆ.
ಸಾಮಾನ್ಯವಾಗಿ ಮಕ್ಕಳಿಗೆ ರಕ್ತನಾಳ ಕಾಯಿಲೆಗಳು ಉಂಟಾಗುವುದಿಲ್ಲ ಎಂದು ಭಾವಿಸಲಾಗುತ್ತದೆ. ಆದರೆ ಕಿಡ್ನಿ ಸಮಸ್ಯೆಯಿಂದ ಬಳಸುವ ಮಕ್ಕಳಿಗೆ ರಕ್ತನಾಳಗಳು ಹಾಗೂ ಹೃದಯಕ್ಕೆ ಸಂಬಂಧಿಸಿದ ರೋಗಗಳು ಬರುವ ಸಾಧ್ಯತೆ ಇದೆ ಎಂದು ಸಂಶೋಧನೆಯಿಂದ ಸಾಬೀತಾಗಿದೆ ಎಂದು ಓಹಿಯೋ ಆಧಾರಿತ ರಾಷ್ಟ್ರವ್ಯಾಪಿ ಮಕ್ಕಳ ಆಸ್ಪತ್ರೆಯ ವೈದ್ಯರಾದ ಕರ್ಸ್ಟನ್ ಕುಸುಮಿ ತಿಳಿಸಿದ್ದಾರೆ.
ಅಪ್ರಾಪ್ತರಲ್ಲಿ ಕಿಡ್ನಿ ಕಲ್ಲುಗಳ ರಚನೆ ಪ್ರಕ್ರಿಯೆ ವೇಳೆ ಆರ್ತೆರಿಯಸ್ ಸಮಸ್ಯೆ ಪ್ರಾರಂಭವಾಗುತ್ತವೆ ಎಂದು ಕರ್ಸ್ಟನ್ ಕುಸುಮಿ ಹೇಳಿದ್ದಾರೆ. ವಯಸ್ಕರಷ್ಟೇ ಅಪಾಯ ಅಪ್ರಾಪ್ತರಿಗೂ ಕಾಡುತ್ತದೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com