
ಟೊರಂಟೋ: ನಕಾರಾತ್ಮಕ ಭಾವನೆಗಳಿಂದಾಗಿ ಪುರುಷರಿಗಿಂತ ಮಹಿಳೆಯರು ಹೆಚ್ಚು ಖಿನ್ನತೆಗೊಳಗಾಗುತ್ತಾರೆ. ನಕಾರಾತ್ಮಕ ವಿಷಯಗಳನ್ನು ಹೆಚ್ಚು ಭಾವನಾತ್ಮಕವಾಗಿ ಸ್ವೀಕರಿಸುವುದರಿಂದ ಈ ರೀತಿಯ ಪರಿಣಾಮ ಉಂಟಾಗುತ್ತದೆ ಎಂದು ಹೊಸ ಅಧ್ಯಯನ ವರದಿ ತಿಳಿಸಿದೆ.
ಮಹಿಳೆ- ಪುರುಷರ ಮೆದುಳಿನಲ್ಲಿರುವ ಸೂಕ್ಷ್ಮ ವ್ಯತ್ಯಾಸಗಳು ಇದಕ್ಕೆ ಕಾರಣ ಎಂದು ಅಧ್ಯಯನ ವರದಿ ಹೇಳಿದೆ. ನಕಾರಾತ್ಮಕ ವಿಷಯಗಳನ್ನು ಪುರುಷರು ಭಾವನಾತ್ಮಕಕ್ಕಿಂತಲೂ ವಿಶ್ಲೇಷಣಾತ್ಮಕವಾಗಿ ಪರಿಗಣಿಸಲಿದ್ದಾರೆ. ಆದರೆ ಮಹಿಳೆಯರು ಹೆಚ್ಚು ಭಾವನಾತ್ಮಕವಾಗಿರುತ್ತಾರೆ ಆದ್ದರಿಂದ ಇಂತಹ ಘಟನೆಯಿಂದ ಮಹಿಳೆಯರು ಹೆಚ್ಚು ಖಿನ್ನತೆಗೊಳಗಾಗುತ್ತಾರೆ.
ಮೆದುಳಿನ ಕೆಲವು ಪ್ರದೇಶಗಳು ಕಾರ್ಯನಿರ್ವಹಿಸುವ ವಿಧಾನ ಮಹಿಳೆಯರು ಹಾಗೂ ಪುರುಷರಲ್ಲಿ ವಿಭಿನ್ನವಾಗಿರುವುದರಿಂದ ಈ ರೀತಿಯ ಪರಿಣಾಮ ಉಂಟಾಗುತ್ತದೆ ಎಂದು ಸಂಶೋಧಕ ಆಡ್ರಿಯಾನ ಮೆಂಡ್ರೇಕ್ ತಿಳಿಸಿದ್ದಾರೆ. ಬ್ರೈನ್ ಇಮೇಜಿಂಗ್ ಮೂಲಕ ಇದನ್ನು ಕಂಡುಕೊಳ್ಳಲಾಗಿದೆ. ಈ ಅಧ್ಯಯನ ವರದಿ ಸೈಕೋನ್ಯೂರೋಎಂಡೋಕ್ರಿನೊಲೊಜಿ ಕುರಿತಾದ ಪತ್ರಿಕೆಯಲ್ಲಿ ಪ್ರಕಟವಾಗಿದೆ.
Advertisement