ಡೆಂಗೀ ಚಿಕಿತ್ಸೆಗೆ ಮದ್ದು ಪುಣೆ ಕಂಪನಿ ಸಾಧನೆ

ಜಗತ್ತಿನ ಅರ್ಧದಷ್ಟು ಜನಸಂಖ್ಯೆಯನ್ನು ಬಾಧಿಸುವ ಸಾಧ್ಯತೆ ಇರುವ ಡೆಂಗೀಗೆ ಪುಣೆ ಮೂಲದ ಸೀರಮ್ ಇನ್‍ಸ್ಟಿಟ್ಯೂಟ್ ಪರಿಣಾಮಕಾರಿ ಚುಚ್ಚುಮದ್ದು ಅಭಿವೃದ್ಧಿಪಡಿಸಿದೆ...
ಸೊಳ್ಳೆ
ಸೊಳ್ಳೆ

ಮುಂಬೈ: ಜಗತ್ತಿನ ಅರ್ಧದಷ್ಟು ಜನಸಂಖ್ಯೆಯನ್ನು ಬಾಧಿಸುವ ಸಾಧ್ಯತೆ ಇರುವ ಡೆಂಗೀಗೆ ಪುಣೆ ಮೂಲದ ಸೀರಮ್ ಇನ್‍ಸ್ಟಿಟ್ಯೂಟ್ ಪರಿಣಾಮಕಾರಿ ಚುಚ್ಚುಮದ್ದು ಅಭಿವೃದ್ಧಿಪಡಿಸಿದೆ.

ಡೆಂಗೀ ವೈರಸ್ನಿಂದ ಹರಡುವ ಎಲ್ಲಾ ನಾಲ್ಕು ಬಗೆಯ ರೋಗ ಲಕ್ಷಣಗಳಿಗೂ ತನ್ನ ಜೈವಿಕ ಔಷಧ ಪರಿಣಾಮಕಾರಿಯಾಗಿ ಚಿಕಿತ್ಸೆ ಎಂದಿರುವ ಸೀರಮ್, ದೇಶದಲ್ಲಿ ಕ್ಲಿನಿಕಲ್ ಟ್ರಯಲ್ ನಡೆಸಲು ಔಷಧಿ ನೋಂದಣಿಗಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯಕ್ಕೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭಿಸಿದೆ ಎಂದು ಖಾಸಗಿ ಪತ್ರಿಕೆಯೊಂದು ವರದಿ ಮಾಡಿದೆ.

ಸರ್ಕಾರದ ಕಡೆಯಿಂದ ಹಸಿರು ನಿಶಾನೆ ಸಿಕ್ಕರೆ ಡೆಂಗೀ ಗುಣಪಡಿಸಲು ಚಿಕಿತ್ಸೆ ಆರಂಭಿಸಲಿದ್ದು, ಡೋಸ್ ಗೆ ರು. 5ರಿಂದ 10 ಸಾವಿರ ದರದಲ್ಲಿ ಲಸಿಕೆ ಲಭ್ಯವಾಗಲಿದೆ. ಕೇವಲ ಒಂದೇ ಡೋಸ್ನಲ್ಲಿ ಕಾಯಿಲೆ ಸಂಪೂರ್ಣ ವಾಸಿಯಾಗಲಿದೆ ಎಂದು ಕಂಪನಿ ಹೇಳಿದೆ. ಅಮೆರಿಕ ಮೂಲದ ಜೈವಿಕ ತಂತ್ರ ಜ್ಞಾನ ಸಂಸ್ಥೆಯ ಸಹಯೋಗದಲ್ಲಿ ಸೀರಮ್ ಇನ್‍ಸ್ಟಿಟ್ಯೂಟ್ ಈ ಲಸಿಕೆ ಅಭಿವೃದ್ಧಿಪಡಿಸಿದ್ದು, ವಿವಿಧ ಪ್ರಾಣಿಗಳ ಮೇಲಿನ ಪ್ರಯೋಗದಲ್ಲಿ ಉತ್ತಮ ಫಲಿತಾಂಶ ಸಿಕ್ಕಿದೆ. ಸರ್ಕಾರದ ಒಪ್ಪಿಗೆ ಬಳಿಕ ಮುಂದಿನ 1218 ತಿಂಗಳಲ್ಲಿ ವಾಣಿಜ್ಯ ಬಳಕೆಗೆ ಲಸಿಕೆ ಲಭ್ಯವಾಗಬಹುದು ಎಂದು ಸಿಇಒ ಆದಾರ್ ಪೂನಾವಾಲಾ ಹೇಳಿದ್ದಾರೆ.

ಸಿಂಗಪೂರ್‍ನಲ್ಲಿ ಔಷಧದ ಕ್ಲಿನಿಕಲ್ ಟ್ರಯಲ್ ಬಳಕೆಯಲ್ಲಿದ್ದು, ವಿಐಎಸ್ 513 ಹೆಸರಿನ ಈ ಲಸಿಕೆ ಡೆಂಗೀಕಾರಕ ವೈರಸ್ನ ಎಲ್ಲ 4 ಬಗೆಯ ರೋಗದ ಮೇಲೂ ಪರಿಣಾಮಕಾರಿಯಾಗಿ ಕೆಲಸ ಮಾಡಿದೆ ಎನ್ನಲಾಗಿದೆ. ಸನೋಫಿ ಮತ್ತು ನೊವಾರ್ಟಿಸ್ ಕಂಪನಿಗಳು ಕೂಡ ತಮ್ಮದೇ ಆದ ಲಸಿಕೆ ಅಭಿವೃದ್ಧಿಪಡಿಸುತ್ತಿದ್ದು, ಸದ್ಯದಲ್ಲೇ ಅವು ಕೂಡ ಔಷಧದ ಪ್ರಯೋಗಕ್ಕೆ ಮುಂದಾಗಲಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com