ಕೇರಳದ ಧೂಮಪಾನಿಗಳಿಂದ ಹೃದಯ ಸಂಬಂಧಿ ಚಿಕಿತ್ಸೆ ಪಡೆಯಲು ವಾರ್ಷಿಕ 226 ಕೋಟಿ ಖರ್ಚು

ಕೇರಳದ ಧೂಮಪಾನಿಗಳು ಹೃದಯ ಸಂಬಂಧಿ ಸಮಸ್ಯೆಗಳಿಗೆ ಚಿಕಿತ್ಸೆ ಪಡೆಯಲು ವಾರ್ಷಿಕ 226 ಕೋಟಿ ಖರ್ಚು ಮಾಡುತ್ತಾರೆ ಎಂದು ಅಧ್ಯಯನ ವರದಿಯೊಂದು ಹೇಳಿದೆ.
ಧೂಮಪಾನ
ಧೂಮಪಾನ
Updated on

ತಿರುವನಂತಪುರಂ: ಕೇರಳದ ಧೂಮಪಾನಿಗಳು ಹೃದಯ ಸಂಬಂಧಿ ಸಮಸ್ಯೆಗಳಿಗೆ ಚಿಕಿತ್ಸೆ ಪಡೆಯಲು ವಾರ್ಷಿಕ 226 ಕೋಟಿ ಖರ್ಚು ಮಾಡುತ್ತಾರೆ ಎಂದು ಅಧ್ಯಯನ ವರದಿಯೊಂದು ಹೇಳಿದೆ.

ತಂಬಾಕು ಉತ್ಪನ್ನಗಳಿಂದ ಉಂಟಾಗುವ ಸಮಸ್ಯೆಗಳಿಂದ ಉಂಟಾಗುವ ಆರ್ಥಿಕ ಹೊರೆ ಎಂಬ ವಿಷಯದ ಬಗ್ಗೆ ವಾರ್ಷಿಕ ಅಧ್ಯಯನ ನಡೆದಿದ್ದು, ರಾಜ್ಯದ ಒಟ್ಟಾರೆ ವೈದ್ಯಕೀಯ ವೆಚ್ಚದ ಶೇ.51 ರಷ್ಟು ಧೂಮಪಾನಿಗಳಿಂದ ಖರ್ಚಾಗುತ್ತದೆ ಎಂದು ವರದಿಯಿಂದ ತಿಳಿದುಬಂದಿದೆ. ತಂಬಾಕು ಉತ್ಪನ್ನಗಳಿಂದ ಉಂಟಾಗುವ ಹೃದಯ ಸಂಬಂಧಿ ಚಿಕಿತ್ಸೆಗಳಿಗೆ ದಕ್ಷಿಣ ಭಾರತದದಲ್ಲಿ ಅತಿ ಹೆಚ್ಚು  ಖರ್ಚು ಮಾಡುವವರು ಕೇರಳದ ನಾಗರಿಕರು ಎಂದು ತಿಳಿದುಬಂದಿದೆ.

ತಮಿಳುನಾಡಿನಲ್ಲಿ ಒಟ್ಟಾರೆ ವೈದ್ಯಕೀಯ ಚಿಕಿತ್ಸೆಯ ಶೇ.46 ರಷ್ಟು ತಂಬಾಕಿನಿಂದ ಉಂಟಾಗುವ ಹೃದಯ ಸಂಬಂಧಿತ ಚಿಕಿತ್ಸೆಗಳಿಗೆ ಖರ್ಚಾಗುತ್ತಿದ್ದರೆ, ಆಂಧ್ರಪ್ರದೇಶದಲ್ಲಿ ಶೇ.48 , ಕರ್ನಾಟಕದಲ್ಲಿ ಶೇ.40 ರಷ್ಟು ವೆಚ್ಚವಾಗುತ್ತದೆ.  2011 ರಲ್ಲಿ 35 -69 ವಯಸ್ಸಿನವರು ಹೆಚ್ಚು ತಂಬಾಕು ಸಂಬಂಧಿತ ಸಮಸ್ಯೆಗಳಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com