ಕಣ್ಣಿನ ಮೇಕಪ್ ನಿಂದ ಕಾಯಿಲೆ ಬರಬಹುದು ಹುಷಾರ್..!

ಮುಖದ ಮೇಕಪ್ ಜೊತೆಗೆ ಯುವತಿಯರು ಕಣ್ಣಿನ ಮೇಕಪ್ ಗೂ ಪ್ರಾಮುಖ್ಯತೆ ಕೊಡುತ್ತಾರೆ. ಯುವತಿಯರ ಸೌಂದರ್ಯವನ್ನು ಐ ಮೇಕಪ್ ಹೆಚ್ಚಿಸಬಹುದು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ಮುಖದ ಮೇಕಪ್ ಜೊತೆಗೆ ಯುವತಿಯರು ಕಣ್ಣಿನ ಮೇಕಪ್ ಗೂ ಪ್ರಾಮುಖ್ಯತೆ ಕೊಡುತ್ತಾರೆ. ಯುವತಿಯರ ಸೌಂದರ್ಯವನ್ನು ಐ ಮೇಕಪ್ ಹೆಚ್ಚಿಸಬಹುದು. ಮಸ್ಕರ ಮತ್ತು ಐಲೈನರ್ ನಿಮ್ಮ ಕಣ್ಣಿಗೆ ಹೊಸ ಲುಕ್ ನೀಡಬಹುದು. ಆದರೆ ಅದರಿಂದ ಅನಾರೋಗ್ಯವೂ ಉಂಟಾಗುತ್ತದೆ ಎನ್ನುತ್ತದೆ ಅಧ್ಯಯನ. 
ಕಣ್ಣಿನ ಮೇಕಪ್ ಬ್ಯಾಕ್ಟೀರಿಯಾ ಹುಟ್ಟಲು ದಾರಿ ಮಾಡಿಕೊಡುತ್ತದಂತೆ. ಕಣ್ಣಿನ ಸುತ್ತ ಸ್ಟಫಿಲೊಕೊಕ್ಕಸ್ ಮತ್ತು ಸ್ಟ್ರೆಪ್ಟೊಕೊಕ್ಕಸ್ ಬ್ಯಾಕ್ಟೀರಿಯಾಗಳಿರುತ್ತವೆ.
ನೀವು ಕಣ್ಣಿಗೆ ಐ ಲೈನರ್ ಅಥವಾ ಮಸ್ಕರಾ ಹಾಕಿದಾಗ ಈ ಬ್ಯಾಕ್ಟೀರಿಯಾಗಳಲ್ಲಿ ಕೆಲವೊಂದು ಲೇಪಕಕ್ಕೆ ಅಥವಾ ಮೇಕಪ್ ಕಂಟೈನರ್ ಗೆ ವರ್ಗಾವಣೆಯಾಗುತ್ತದೆ. ಇದರಿಂದ ಮನುಷ್ಯರಲ್ಲಿ ರೋಗ ಉತ್ಪತ್ತಿಯಾಗಬಹುದು.
ಕೆಲವೊಂದು ಕಣ್ಣಿನ ಅಲಂಕಾರಿಕ ಸಾಧನಗಳಲ್ಲಿ ಸಂರಕ್ಷಕಗಳನ್ನು ಹಾಕಿರುತ್ತಾರೆ. ಇವು ಬ್ಯಾಕ್ಟೀರಿಯಾಗಳು ವೃದ್ಧಿಯಾಗುವುದನ್ನು ತಡೆಯುತ್ತವೆ. ಆದರೆ ಇನ್ನು ಕೆಲವು ಸಾಧನಗಳಲ್ಲಿ ಸಂರಕ್ಷಕಗಳಿರುವುದಿಲ್ಲ. ದಿನಗಳೆದಂತೆ ಸಂರಕ್ಷಕಗಳ ಪರಿಣಾಮದ ತೀವ್ರತೆ ಕೂಡ ಕಡಿಮೆಯಾಗುತ್ತದೆ. ಕೆಲವೊಮ್ಮೆ ಐ ಲೈನರ್ ಅಥವಾ ಮಸ್ಕರಾ ಹಾಕುವುದರಿಂದ ಬ್ಯಾಕ್ಟೀರಿಯಾಗಳು ವೃದ್ಧಿಯಾಗಿ ಕಣ್ಣಿನ ಸೋಂಕು ಉಂಟಾಗುವ ಸಾಧ್ಯತೆಯೂ ಇದೆ.
ಪ್ರತಿವರ್ಷ ಹಲವು ಮಹಿಳೆಯರು ಸೌಂದರ್ಯ ಸಾಧನಗಳಿಂದ ಕಣ್ಣಿನ ಸೋಂಕಿಗೆ ಒಳಗಾಗುತ್ತಾರೆ. ಕಣ್ಣಿನ ಸೌಂದರ್ಯ ಸಾಧನಗಳಿಂದ ಶಾಶ್ವತವಾಗಿ ಅಥವಾ ತಾತ್ಕಾಲಿಕವಾಗಿ ಮಹಿಳೆಯರು ಕುರುಡರಾಗುವ ಅಪರೂಪದ ಉದಾಹರಣೆಗಳೂ ಇವೆ ಎಂದು ನ್ಯೂಯಾರ್ಕ್ ನ ರೊಚೆಸ್ಟರ್ ವಿಶ್ವವಿದ್ಯಾಲಯದ ವೈದ್ಯಕೀಯ ಕೇಂದ್ರ ಹೇಳಿದೆ.
ಹಾಗಾದರೆ ನೀವು ಕಣ್ಣಿನ ರಕ್ಷಣೆಯನ್ನು ಮಾಡಿಕೊಳ್ಳಲು ಹೀಗೆ ಮಾಡಬಹುದು: 
1. ಕಣ್ಣಿನ ಮೇಕಪ್ ಗಳನ್ನು ಒಬ್ಬರಿಗೊಬ್ಬರು ಬದಲಾಯಿಸಿಕೊಳ್ಳುವುದು, ಹಂಚಿಕೊಳ್ಳುವುದು ಮಾಡಬೇಡಿ.
2. ಪ್ರತಿ ಮೂರ್ನಾಲ್ಕು ತಿಂಗಳಿಗೊಮ್ಮೆ ಕಣ್ಣಿನ ಮೇಕಪ್ ವಸ್ತುಗಳನ್ನು ಬದಲಾಯಿಸುತ್ತಿರಿ.
3. ಕಣ್ಣಿನ ಮೇಕಪ್ ತೆಗೆಯದೆ ನಿದ್ದೆ ಮಾಡಬೇಡಿ.
4. ಕಣ್ಣಿನ ಮೇಕಪ್ ಬಳಸುವವರು ಬ್ಯಾಕ್ಟೀರಿಯಾ ತಡೆ ಕ್ಲೀನರ್ ನೊಂದಿಗೆ ನಿಮ್ಮ ಕಣ್ಣುಗಳನ್ನು ಒರಸುತ್ತಿರಿ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com