
ನವದೆಹಲಿ: ವಿಶ್ವದಾದ್ಯಂತ ಸಾಕಷ್ಟು ಭೀತಿ ಹುಟ್ಟಿಸಿರುವ ಝಿಕಾ ವೈರಸ್ ಇದೀಗ ಭಾರತೀಯರಿಗೂ ಅಂಟಿಕೊಂಡಿದ್ದು, ಸಿಂಗಾಪುರದಲ್ಲಿರುವ 13 ಭಾರತೀಯರಲ್ಲಿ ಈ ವೈರಸ್'ನ ಸೋಂಕು ಪತ್ತೆಯಾಗಿರುವುದಾಗಿ ತಿಳಿದುಬಂದಿದೆ.
ಈ ಕುರಿತಂತೆ ವಿದೇಶಾಂಗ ಸಚಿವಾಲಯದ ವಕ್ತಾರ ವಿಕಾಸ್ ಸ್ವರೂಪ್ ಅವರು ಮಾಹಿತಿ ನೀಡಿದ್ದು, ಸಿಂಗಾಪುರದಲ್ಲಿರುವ 13 ಭಾರತೀಯರಿಗೆ ಝಿಕಾ ವೈರಸ್ ಸೋಂಕು ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ.
ಝಿಕಾ ವೈರಸ್ ಸೋಂಕು ಗರ್ಭಿಣಿಯರಿಗೆ ಶೀಘ್ರಗತಿಯಲ್ಲಿ ಕಾಣಿಸಿಕೊಳ್ಳುತ್ತದೆ. ಸೋಂಕು ಪೀಡಿತ ಗರ್ಭಿಣಿ ಮಹಿಳೆಯರಿಗೆ ಜನಿಸುವ ಮಕ್ಕಳ ತಲೆ ಗಾತ್ರ ಚಿಕ್ಕದಾಗಿರುತ್ತದೆ. ಮಗು ಜನಿಸಿದ ನಂತರ ಹಲವು ಸಮಸ್ಯೆಗಳುಂಟಾಗುತ್ತದೆ ಎಂದು ಅಮೆರಿಕ ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸೊಳ್ಳೆಗಳಿಂದ ಹರಡುವ ಈ ಝಿಕಾ ವೈರಸ್ ರೋಗವು ಮೊದಲು ಸಿಂಗಾಪುರದ ಕಟ್ಟಡದಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರಲ್ಲಿ ಕಂಡು ಬಂದಿತ್ತು.
Advertisement