ಸೆಕ್ಸ್ ಹಾರ್ಮೋನ್ ಗಳನ್ನು ನಿಯಂತ್ರಣದಲ್ಲಿಡಲು ಸಹಕಾರಿ ಮಾವಿನ ಹಣ್ಣು

ಮಾವಿನಹಣ್ಣು ಕೇವಲ ರುಚಿಯಲ್ಲಿ ಮಾತ್ರವಲ್ಲದೇ ಹಲವು ಆರೋಗ್ಯಕರ ಗುಣಗಳನ್ನು ಒಳಗೊಂಡಿದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಹಣ್ಣುಗಳ ರಾಜ ಮಾವಿನಹಣ್ಣಿನ ಸೀಸನ್ ಇನ್ನೇನು ಆರಂಭವಾಗಲಿದೆ. ಮಾರುಕಟ್ಟೆಗೆ ತರೇಹವಾರಿ ಮಾವಿನಹಣ್ಣುಗಳು ಶೀಘ್ರದಲ್ಲೇ ಲಗ್ಗೆ ಇಡಲಿವೆ. ಮಾವಿನಹಣ್ಣು ಕೇವಲ ರುಚಿಯಲ್ಲಿ ಮಾತ್ರವಲ್ಲದೇ ಹಲವು ಆರೋಗ್ಯಕರ ಗುಣಗಳನ್ನು ಒಳಗೊಂಡಿದೆ.

ಅಸಿಡಿಟಿ, ಅಜೀರ್ಣ ಸಮಸ್ಯೆಯಿಂದ ಬಳಲುವವರು ಮಾವಿನ ಹಣ್ಣು ತಿನ್ನುವುದು ಒಳ್ಳೆಯದು. ಇದು ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ.  ಮಾವಿನಹಣ್ಣಿನಲ್ಲಿರುವ ಗ್ಲೂಟಾಮೈನ್ ಆಸಿಡ್ ಕ್ಯಾನ್ಸರ್ ಮತ್ತು ಹೃದಯಾಘಾತ ಕಾಯಿಲೆಗಳನ್ನು ನಿಯಂತ್ರಣದಲ್ಲಿಡುವಲ್ಲಿ ಸಹಕಾರಿಯಾಗಿದೆ.

ಮಾವಿನ ಹಣ್ಣಿನಲ್ಲಿ ನಾರಿನಂಶ ಅಧಿಕ ಇದ್ದು, ಇದರಲ್ಲಿ ವಿಟಮಿನ್ ಸಿ ಅಂಶ ಇರುವುದರಿಂದ ಕೊಲೆಸ್ಟ್ರಾಲ್ ಪ್ರಮಾಣ ಕಡಿಮೆ ಮಾಡುವಲ್ಲಿ ಸಹಕಾರಿಯಾಗಿದೆ. ಮಾವಿನ ಹಣ್ಣಿನಲ್ಲಿ ವಿಟಮಿನ್ 'ಇ' ಅಂಶವಿರುವುದರಿಂದ ಸೆಕ್ಸ್ ಹಾರ್ಮೋನ್ ಗಳನ್ನು ನಿಯಂತ್ರಣದಲ್ಲಿಡಲು ಮತ್ತು ಲೈಂಗಿಕ ಕ್ರಿಯೆಗೆ ಸಹಕಾರಿಯಾಗಿದೆ.

ಮಾವಿನ ಕಾಯಿ ಅಥವಾ ಹಣ್ಣಿನಲ್ಲಿರುವ ಗ್ಲೂಟಾಮೈನ್ ಆಸಿಡ್ ಜ್ಞಾಪಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ. ಮಾವಿನ ಹಣ್ಣಿನಲ್ಲಿ ಅಧಿಕ ಕಬ್ಬಿಣದಂಶವಿದೆ. ಮಹಿಳೆಯರಲ್ಲಿ 40ರ ನಂತರ ಮೆನೊಪಾಸ್ ಕಡಿಮೆಯಾಗುವುದು. ಆದ್ದರಿಂದ 40ರ ನಂತರ ಕಬ್ಬಿಣದಂಶವಿರುವ ಆಹಾರಗಳನ್ನು ಹೆಚ್ಚಾಗಿ ಸೇವಿಸಬೇಕು.

ಹಣ್ಣುಗಳ ರಾಜ ಮಾವಿನ ಹಣ್ಣು ಹಲವು ರೀತಿಯಲ್ಲಿ ನಮ್ಮ ಆರೋಗ್ಯಕ್ಕೆ ಉತ್ತಮವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com