ಋಣಾತ್ಮಕ ಭಾವನೆಗಳನ್ನು ನಿಯಂತ್ರಿಸಲು ಮೆದುಳಿಗೆ ತರಬೇತಿ ನೀಡಬಹುದು!

ಮೆದುಳಿನ ವ್ಯವಸ್ಥೆಯನ್ನೇ ಬದಲು ಮಾಡುವ ಮೂಲಕ ಸರಳವಾದ ತರಬೇತಿಯಿಂದ ಋಣಾತ್ಮಕ ಭಾವನೆಗಳನ್ನು ನಿಯಂತ್ರಿಸಲು ಸಾಧ್ಯವಿದೆ
ಋಣಾತ್ಮಕ ಭಾವನೆಗಳನ್ನು ನಿಯಂತ್ರಿಸಲು ನಿಮ್ಮ ಮೆದುಳಿಗೆ ತರಬೇತಿ ನೀಡಬಹುದು!
ಋಣಾತ್ಮಕ ಭಾವನೆಗಳನ್ನು ನಿಯಂತ್ರಿಸಲು ನಿಮ್ಮ ಮೆದುಳಿಗೆ ತರಬೇತಿ ನೀಡಬಹುದು!

ವಾಷಿಂಗ್ಟನ್: ಭಾವನೆಗಳನ್ನು ನಿಯಂತ್ರಿಸಲು ಸಾಧ್ಯವಿಲ್ಲ ಎಂಬ ಮಾತು ಇನ್ನು ಮುಂದಿನ ದಿನಗಳಲ್ಲಿ ಸುಳ್ಳಾಗಬಹುದು. ಹೌದು, ಮೆದುಳಿನ ವ್ಯವಸ್ಥೆಯನ್ನೇ ಬದಲು ಮಾಡುವ ಮೂಲಕ ಸರಳವಾದ ತರಬೇತಿಯಿಂದ ಋಣಾತ್ಮಕ ಭಾವನೆಗಳನ್ನು ನಿಯಂತ್ರಿಸಲು ಸಾಧ್ಯವಿದೆ ಎಂದು ಬೆನ್-ಗುರಿಯೋನ್ ವಿಶ್ವವಿದ್ಯಾಲಯ ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

ಈ ತರಬೇತಿಯಿಂದ ಅಸಂಬದ್ಧ ವಿಷಯಗಳನ್ನು ನಿರ್ಲಕ್ಷ್ಯಿಸುವ ಸಾಮರ್ಥ್ಯ ಹೆಚ್ಚಾಗುತ್ತದೆ. ಅದರೊಂದಿಗೆ ಭಾವನಾತ್ಮಕ ಘಟನೆಗಳಿಗೆ ಮೆದುಳಿನ ಪ್ರತಿಕ್ರಿಯೆಯನ್ನು ಕಡಿಮೆ ಮಾಡಿ ಮೆದುಳಿನ ಸಂಪರ್ಕಗಳನ್ನು ಬದಲಾಯಿಸಲು ಸಾಧ್ಯವಾಗುತ್ತದೆ ಎಂದು ಬೆನ್- ಗುರಿಯೋನ್ ವಿವಿಯ ಸಂಶೋಧಕರಾದ ಡಾ ನೋಗ ಕೊಹೆನ್ ಹೇಳಿದ್ದಾರೆ.  

ಭಾವನೆಗಳ ಪ್ರತಿಕ್ರಿಯೆಗಳನ್ನು ಪ್ರತಿಬಂಧಿಸುವ ಸಾಮರ್ಥ್ಯವುಳ್ಳ ನರಗಳ ಸಂಪರ್ಕಗಳನ್ನು ಬಲಪಡಿಸುವುದರಿಂದ ಮೆದುಳಿನ ವ್ಯವಸ್ಥೆಯನ್ನು ಬದಲಾವಣೆ ಮಾಡಲು ಸಾಧ್ಯವಿದೆ. ಈ ತರಬೇತಿ ಕಾರ್ಯಕ್ರಮವನ್ನು ಖಿನ್ನತೆ ಅಥವಾ ಆತಂಕಕ್ಕೆ ಒಳಗಾದವರ ಮೇಲೆ ಪ್ರಯೋಗ ಮಾಡಲಾಗಿದ್ದು ತರಬೇತಿ ಪಡೆದವರ ನಕಾರಾತ್ಮಕ ಭಾವನೆಗಳಿಗೆ ಕಾರಣವಾಗಿದ್ದ ಮೆದುಳಿನ ಭಾಗ ಕಡಿಮೆ ಸಕ್ರಿಯವಾಗಿರುವುದನ್ನು ಗಮನಿಸಿದ್ದಾರೆ. ಮೆದುಳನ್ನು ನಿಯಂತ್ರಿಸುವ ತರಬೇತಿ ರಕ್ತದೊತ್ತಡವನ್ನು ಎದುರಿಸುತ್ತಿರುವವರಿಗೂ ಸಹಕಾರಿಯಾಗಲಿದೆ ಎಂದು ಹೇಳಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com