ಗರ್ಭಿಣಿಯರು ಮದ್ಯ ಸೇವಿಸುವುದರಿಂದ ಶಿಶುಗಳಿಗೆ 428 ವಿಧದ ಕಾಯಿಲೆ ಎದುರಾಗುವ ಅಪಾಯ!

ಗರ್ಭಿಣಿಯರು ಮದ್ಯ ಸೇವಿಸುವುದರಿಂದ ಶಿಶುಗಳು ಫೀಟಲ್ ಆಲ್ಕೋಹಾಲ್ ಸ್ಪೆಕ್ಟ್ರಂ ಡಿಸಾರ್ಡರ್ಸ್ ಗೆ ಸಂಬಂಧಿಸಿದ 428 ವಿಧದ ಕಾಯಿಲೆಗಳಿಗೆ ತುತ್ತಾಗುವ ಸಾಧ್ಯತೆ ಇದೆ
ಗರ್ಭಿಣಿಯರು ಮದ್ಯ ಸೇವಿಸುವುದರಿಂದ ಶಿಶುಗಳಿಗೆ 428 ವಿಧದ ಕಾಯಿಲೆ ಎದುರಾಗುವ ಅಪಾಯ!

ಟೊರಂಟೊ: ಗರ್ಭಿಣಿಯರು ಮದ್ಯ ಸೇವಿಸುವುದರಿಂದ ಶಿಶುಗಳು ಫೀಟಲ್ ಆಲ್ಕೋಹಾಲ್ ಸ್ಪೆಕ್ಟ್ರಂ ಡಿಸಾರ್ಡರ್ಸ್ ಗೆ ಸಂಬಂಧಿಸಿದ 428 ವಿಧದ ಕಾಯಿಲೆಗಳಿಗೆ ತುತ್ತಾಗುವ ಸಾಧ್ಯತೆ ಇದೆ ಎಂದು ಹೊಸ ಸಂಶೋಧನೆ ಎಚ್ಚರಿಸಿದೆ.

ಮದ್ಯ ಸೇವನೆಯಿಂದ ಶಿಶು ಗರ್ಭದಲ್ಲಿರುವಾಗಲೇ ಎದುರಾಗಬಹುದಾದ ನ್ಯೂನತೆಗಳಿಗೆ ಫೀಟಲ್ ಸ್ಪೆಕ್ಟ್ರಂ ಡಿಸಾರ್ಡರ್ಸ್ ಎಂದು ಹೇಳಲಾಗಿದ್ದು, ಗರ್ಭಿಣಿಯರು ಯಾವುದೇ ಪ್ರಮಾಣದಲ್ಲಿ ಮದ್ಯ ಸೇವಿಸಿದರೂ ಸಹ ಗರ್ಭದಲ್ಲಿರುವ ಶಿಶುಗಳಿಗೆ 400 ಕ್ಕೂ ಅಧಿಕ ರೀತಿಯ ಕಾಯಿಲೆಗಳ ಪೈಕಿ ಯಾವುದಾದರೊಂದು ಕಾಯಿಲೆ ಎದುರಾಗುವ ಅಪಾಯ ಇರುತ್ತದೆ ಎಂದು ಸಂಶೋಧಕರು ಎಚ್ಚರಿಕೆ ನೀಡಿದ್ದಾರೆ.

 ಮದ್ಯ ಸೇವನೆಯಿಂದ ಬೆಳವಣಿಗೆ ಹಂತದಲ್ಲಿರುವ ಮಗುವಿನ ಯಾವುದೇ ಅಂಗಗಳ ಮೇಲೆ ಪರಿಣಾಮ ಬೀರಬಹುದು ಆದ್ದರಿಂದ ಗರ್ಭಿಣಿಯರು ಮದ್ಯ ಸೇವನೆ ಮಾಡುವುದು ಸೂಕ್ತ ಅಲ್ಲ ಎಂದು ಕೆನಡಾದ ಸಂಶೋಧಕರಾದ ಲಾನಾ  ಪೊಪೊವಾ ಹೇಳಿದ್ದಾರೆ.

ಮಗುವಿನ ನ್ಯೂನತೆ ತೀವ್ರತೆಯು, ಗರ್ಭಿಣಿಯರು ಯಾವ ಪ್ರಮಾಣದಲ್ಲಿ ಮದ್ಯ ಸೇವನೆ ಮಾಡಿದ್ದಾರೆ ಎಂಬುದರ ಮೇಲೆ ಅವಲಂಬಿತವಾಗಿದೆ. ಸ ಉಮಾರು 127 ಪ್ರಕರಣಗಳನ್ನು ಅಧ್ಯಯನ ಮಾಡಿದ ನಂತರ ಮದ್ಯ ಸೇವನೆಯಿಂದ ಶಿಶುಗಳಿಗೆ ಎದುರಾಗಬಹುದಾದ 428 ವಿಧದ ಸಮಸ್ಯೆಗಳನ್ನು ಪಟ್ಟಿ ಮಾಡಲಾಗಿದೆ. ಈ ಕುರಿತ ಅಧ್ಯಯನ ವರದಿ ದಿ ಲಾನ್ಸೆಟ್ ನಲ್ಲಿ ಪ್ರಕಟವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com